ಖಿನ್ನತೆಗೆ ಒಳಗಾಗಿ ಶಿಕ್ಷಕಿ ಸಾವು
ಕೆಜಿಎಫ್:
ಕೆಜಿಎಫ್‌ನ ತಮಿಳು – ಶಿಕ್ಷಕಿಯೊಬ್ಬರನ್ನು ಶ್ರೀನಿವಾಸಪುರ ತಾಲೂಕಿಗೆ ವರ್ಗಾವಣೆಗೊಳಿಸಿದ ಹಿನ್ನೆಲೆಯಲ್ಲಿ ನೌಕರಿಗೆ ಹಾಜರಾಗಲು ಹೋಗಿದ್ದ ಶಿಕ್ಷಕಿ ನಿರ್ಮಲಾಕುಮಾರಿ ಮಾರ್ಗ ಮಧ್ಯೆಯೇ ಖಿನ್ನತೆಗೆ ಒಳಗಾಗಿ ಶನಿವಾರ ಸಾವನ್ನಪ್ಪಿದ್ದಾರೆ. ಕೆಜಿಎಫ್‌ನ ಎಲ್ಲ ತಮಿಳು ಶಾಲೆಗಳಿಗೆ ಹಾಜರಾತಿ ಕಡಿಮೆ ಯಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿದ್ದ ಖಾಲಿ ತಮಿಳು ಶಿಕ್ಷಕರನ್ನು ಕೌನ್ಸಿಲಿಂಗ್ ಮುಖಾಂತರ ಜಿಲ್ಲೆಯಲ್ಲಿ ಇರುವ ಸ್ಥಳಗಳಿಗೆ ಡಿಡಿಪಿಐ ವರ್ಗಾವಣೆಗೊಳಿಸಿದ್ದರು. ಅದರಂತೆ ನಿರ್ಮಲಾಕುಮಾರಿಯನ್ನು ಶ್ರೀನಿವಾಸಪುರ ತಾಲೂಕಿನ ಸೋಮಯಾಜಲು ಹಳ್ಳಿಯ ಸರಕಾರಿ ಶಾಲೆಗೆ ವರ್ಗಾವಣೆಗೊಳಿಸಿದ್ದರು.
ಶಿಕ್ಷಕಿ ನಿರ್ಮಲಾಕುಮಾರಿ ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಮೈಸೂರಿನ ಆಸ್ಪತ್ರೆಯಲ್ಲಿ ಕಿಡ್ನಿಯ ಕಸಿ ಮಾಡಿಸಿಕೊಂಡಿದ್ದರು. ವರ್ಗಾವಣೆ ಸಂದರ್ಭದಲ್ಲಿ ಅವರು, ತಮ್ಮ ಆರೋಗ್ಯದ ಸಮಸ್ಯೆ ಕುರಿತು ಆಸ್ಪತ್ರೆಯ ದಾಖಲೆಗಳನ್ನು ನೀಡಿ ವರ್ಗಾವಣೆ ಬೇಡವೆಂದು ಶಿಕ್ಷಣ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ, ಅಧಿಕಾರಿಗಳು ಇದನ್ನು ಪರಿಗಣಿಸದೆ ವರ್ಗಾವಣೆಗೊಳಿಸಿದ್ದರು ಕುರಿತು ಈ ಪ್ರತಿಕ್ರಿಯಿಸಿರುವ ಕೆಜಿಎಫ್ ಬಿಇಒ ಚಂದ್ರ ಶೇಖರ್, ಪ್ಲುಪಿಲ್ ಟೀಚರ್ ರೇಶಿಯೋ (ಪಿಟಿಆರ್ ) ಆಧಾರ ದಲ್ಲಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾಯಿಸಲಾಗಿದ್ದು, ವರ್ಗಾ ಯಿಸಿದ ಸ್ಥಳಕ್ಕೆ ಹೋಗಲೇಬೇಕಾಗುತ್ತದೆ. ಇಡೀ ರಾಜ್ಯಕ್ಕೆಲ್ಲ ಅನ್ವಯಿಸುವ ಹಾಗೆ ವರ್ಗಾವಣೆ ನೀತಿ ಜಾರಿಗೊಳಿಸಿದ್ದು, ಅದರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.