ರಾಜ್ಯ ಮಟ್ಟದ ಪ್ರಶಸ್ತಿಗೆ ಹೆಸರು ಆಹ್ವಾನ
ಹುಬ್ಬಳ್ಳಿ,: ಹಿರಿಯ ಸಾಹಿತಿ ಡಾ.ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಮೂಲಕ ರಾಜ್ಯಮಟ್ಟದ “ಸಂಗಮ ಸಿರಿ” ಪ್ರಶಸ್ತಿ ಜೊತೆಗೆ 10ಸಾವಿರ ರೂ.ಹಾಗೂ ಫಲಕವನ್ನು ನೀಡಿ ಗೌರವಿಸಲಾಗುತ್ತದೆ.
ವಚನ ಸಾಹಿತ್ಯ ಕ್ಷೇತ್ರದಲ್ಲಿ ವಚನಗಳ ರಚನೆ ಮಾಡಿದವರಿಗೆ ಈ ವರ್ಷದ ಪ್ರಶಸ್ತಿ ನೀಡಲಾಗುವುದು. ಕಳೆದ ಬಾರಿ ವಚನ ಸಾಹಿತ್ಯದ ಸಂಶೋಧನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಬುರ್ಗಿಯ ಡಾ.ದಂಡೆ ದಂಪತಿಗೆ ನೀಡಲಾಗಿತ್ತು.
ವಚನ ರಚನೆಕಾರರು ತಮ್ಮ ಮಾಹಿತಿಯನ್ನು ಆ.15 ರೊಳಗೆ ನೀಡಬಹುದು. ವಚನಕಾರರ ಹೆಸರನ್ನು ಯಾರಾದರೂ ಸೂಚಿಸಬಹುದು.
ವಿವರಗಳಿಗೆ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ 338,ಅಕ್ಷಯ ಕಾಲೋನಿ,ಗೋಕುಲ ರಸ್ತೆ,ಹುಬ್ಬಳ್ಳಿ ಮೊ9060933596,9986476733ಗೆ ಸಂಪರ್ಕಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಜಿ.ಬಿ.ಗೌಡಪ್ಪಗೊಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.