ಪ್ರತಿಭೆ ನಿಮ್ಮದು ವೇದಿಕೆ ನಮ್ಮದು
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ,ಮೈಸೂರು,
ಕಲಾವಿದ ಶಿಕ್ಷಕರ ವೇದಿಕೆ ವತಿಯಿಂದ..
ಶಿಕ್ಷಕರ ವೃತ್ತಿ ನೈಪುಣ್ಯತೆ ವೃದ್ಧಿಸುವ ಬೊಂಬೆಯಾಟ..
ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ ಎನ್ನುವಂತೆ ಕಲಾವಿದ ಶಿಕ್ಷಕರ ವೇದಿಕೆ ವತಿಯಿಂದ ದಿನಾಂಕ 22 ಜುಲೈ 2023 ಶನಿವಾರ ದಂದು ಸಂಜೆ 4:00 ಗಂಟೆಗೆ ಮೈಕ್ರೋ ಸಾಫ್ಟ್ ಟೀಮ್ಸ್ ಆಪ್ ನಲ್ಲಿ ಆರಂಭವಾದ ಬೊಂಬೆಯಾಟ ಆಸಕ್ತಿದಾಯಕ ಕಲಿಕೆಯ ನೋಟ ಎನ್ನುವ ಶೀರ್ಷಿಕೆ ಅಡಿಯಲ್ಲಿ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ತೇಜಾವತಿ ಮೇಡಂ ನಡೆಸಿಕೊಟ್ಟರು, ಹಾಗೆ ಶ್ರೀಯುತ ಶ್ರೀಯುತ ರುದ್ರಮುನಿ ಬಿ ಎ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಶ್ರೀಮತಿ ಮಂಜುಳಾ ಎಸ್ ಪಾಟೀಲ್ ರವರು ತಮ್ಮ ಪ್ರಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ರೂಪುರೇಷಗಳನ್ನು ಹಾಗೂ ಪೂರ್ವ ಸಿದ್ಧತೆಯ ಜೊತೆಗೆ ಸಂಪನ್ಮೂಲ ಕಲಾವಿದ ವ್ಯಕ್ತಿಯ ಬಗ್ಗೆ ಮಾತನಾಡಿದರು.
ವ್ಯಕ್ತಿ ಪರಿಚಯ ಕಾರ್ಯಕ್ರಮವನ್ನು ಶ್ರೀ ಮೂರ್ತಿ ಎಲ್ ಇವರು ಸವಿವರವಾಗಿ ನಡೆಸಿಕೊಟ್ಟರು,ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ದಾರುಕೇಶ್ ಬೃಂಗಿ ಮಠ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಾವಣಗೆರೆ ದಕ್ಷಿಣ,ಇವರು ವ್ಯಕ್ತಿ ಪರಿಚಯ ಕೇಳಿ ಪುಳಕಿತಾದರು ಅದೇ ಸಂದರ್ಭದಲ್ಲಿ ಶ್ರೀ ಮನೋಜ್ ಅಚ್ಯುತ್ ಪಾಲೇಕರ್ ಕಲಾವಿದ ಶಿಕ್ಷಕರನ್ನು ದಾವಣಗೆರೆ ಗೆ ಕರೆಯಿಸಿ ತಮ್ಮ ತಾಲೂಕಿನ ಶಿಕ್ಷಕರಿಗೂ ಬೊಂಬೆಯಾಟ ಕಾರ್ಯಕ್ರಮ ನೀಡುವ ಬಗ್ಗೆ ಆವನಿಸಿದರು, ಶಿಕ್ಷಕರ ಪ್ರತಿಭಾ ಪರಿಷತ್ ವೇದಿಕೆಯಿಂದ ಇಂತಹ ಅದ್ಭುತ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು, ಇಂಥ ಹಲವಾರು ಕಾರ್ಯಕ್ರಮಗಳು ನಡೆದು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳು ಆಗಬೇಕು ಎಂಬುದು ಶ್ರೀಯುತರ ಆಶಯ ನುಡಿಯಾಗಿತ್ತು.
ನಂತರ ಮಿಮಿಕ್ರಿ ಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಶ್ರೀ ಮನೋಜ್ ಅಚ್ಯುತ್ ಪಾಲೇಕರ್ ರವರು ತಾವು ದೆಹಲಿಯಲ್ಲಿ CCRT ತರಬೇತಿ ಪಡೆದು 1986ರಿಂದ ಆರಂಭಿಸಿದ ಶಿಕ್ಷಕರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದನ್ನು ಸ್ಮರಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಕಲಾತ್ಮಕ ಶಿಕ್ಷಣ ಬೇಕು ಎಂದರು. ನಂತರ ಅನುಕರಣೆ ಮೂಲಕ ವಿವಿಧ ಪ್ರಕಾರದ ಗೊಂಬೆಗಳಾದ ತೊಗಲು ಗೊಂಬೆಯಾಟ ಬೆರಳು ಗೊಂಬೆಗಳನ್ನು ಕಾಗದದಲ್ಲಿ ಶಂಖಾಕೃತಿ ಮಾಡಿ ಬೆರಳಿಗೆ ಸೇರಿಸಿ ವಿವಿಧ ಹಣ್ಣು ತರಕಾರಿ ಗಣಿತದ ಲೆಕ್ಕಗಳನ್ನು ಮಾಡಬಹುದು,ಮುಖವಾಡ ಗೊಂಬೆಗಳನ್ನು ಮಕ್ಕಳ ಮುಖಕ್ಕೆ ಆಕಾರವಾಗಿ ಚಿತ್ರಿಸಿಕೊಳ್ಳಬೇಕು ಎಂದು ತಿಳಿಸುತ್ತಾ ಆಟವಾಡಿದರು ನಂತರ ಕಿರೀಟ ಗೊಂಬೆಗಳಲ್ಲಿ ವಿವಿಧ ಪಕ್ಷಿಗಳ ಕಿರೀಟರಾಜ ರಾಣಿಯರ ಕಿರೀಟ ಮಾಡುವ ಬಗೆಯನ್ನು ವಿವರಿಸಿದರು.ನಂತರ ಉಣ್ಣೆಯ ಬಟ್ಟೆಗಳ ಮೂಲಕ ತಯಾರಿಸುವ ಬೊಂಬೆಗಳು ತುಂಬಾ ಆಕರ್ಷಕವಾಗಿ ಇರುತ್ತವೆ ಎಂದು ಪ್ರದರ್ಶನ ಮಾಡಿದರು.ಆನಂತರ ಕೀಲು ಗೊಂಬೆಗಳ ತಯಾರಿಕ ವಿಧಾನ ದೊಂದಿಗೆ ಪ್ರದರ್ಶನ ನೀಡಿದರು.
ಹಾಗೆಯೇ ಮಂಗಳೂರಿನ ಜಾನಪದ ಬೊಂಬೆ, ಸೂತ್ರದ ಬೆಂಬೆಗಳ ತಿಳಿಸುತ್ತಾ ಅನುಕರಣೆ ಮೂಲಕ ವಿವರಣೆ ನೀಡಿದರು…ಅದರ ಮಧ್ಯೆ ಹಲವಾರು ನಟರ ಧ್ವನಿ ಅನುಕರಣೆ ಮಾಡಿ ನಗೆಗಡಲಿನಲ್ಲಿ ತೇಲಿಸಿದರು..ಅವರಿಗೆ ಅವರ ಕುಟುಂಬ ವರ್ಗ ಸಾಥ್ ನೀಡಿದ್ದು ವಿಶೇಷವಾಗಿತ್ತು.
ನಿರೂಪಣೆಯನ್ನು ಶ್ರೀಮತಿ ಸುಮಾ ರಾಣಿ ಎಸ್ ಎನ್ ಇವರು ಉತ್ತಮವಾಗಿ ನಡೆಸಿಕೊಟ್ಟರು, ಸಂವಾದ ಕಾರ್ಯಕ್ರಮವನ್ನು ಶ್ರೀಮತಿ ಉಮಾ ಗುಡ್ಡದ್ ಮೇಡಂ ಕ್ರಮವಾಗಿ ನಡೆಸಿಕೊಟ್ಟರು,ಸಂವಾದದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಬಂಡೆ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಕುಮಾರ್ ಓತಿಹಾಳ್ ೧೨ ವೇದಿಕೆಗಳ ಮುಖ್ಯಸ್ಥರಾದ ಶ್ರೀಮತಿ ಉಮಾ ಗುಡ್ಡದ, ಶ್ರೀ ರವಿಕುಮಾರ್, ಶ್ರೀಮತಿ ಮಧು, ಇವರೆಲ್ಲ ಸಂವಾದದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು,ವಂದನಾರ್ಪಣೆಯನ್ನು ಶ್ರೀಮತಿ ಜಯಂತಿ ಮೇಡಂ ಇವರು ಅಚ್ಚುಕಟ್ಟಾಗಿ ಸಲರ್ವರಿಗೂ ವಂದನೆಯನ್ನು ಸಲ್ಲಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಿ ಮಹೇಶ್ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಇವರು ಬೊಂಬೆಯಾಟದಂತಹ ಜಾನಪದ ಕಲೆಗಳನ್ನು ಪಠ್ಯದೊಂದಿಗೆ ಸಂಯೋಜಿಸಿ ಬೋಧಿಸಿದಾಗ ಕಲಿಕೆ ಪಕ್ವವಾಗುವುದು ಎಂದು ತಿಳಿಸಿದರು, ಪ್ರತಿ ಭಾನುವಾರ 12 ವೇದಿಕೆಯಿಂದ ಒಂದಲ್ಲ ಒಂದು ವಿನೂತನವಾದ ಕಾರ್ಯಕ್ರಮಗಳು ಜರಗುತ್ತಲೆ ಇರುತ್ತವೆ ಎಂದು ಉಮಾ ಗುಡ್ಡದ ಮೇಡಂ ಮಾಹಿತಿ ನೀಡಿದರು.
ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಶಿಕ್ಷಕರ ಪ್ರತಿಭಾ ಪರಿಷತ್
ವರದಿ ತಯಾರಿಸಿದವರು;ಮೂರ್ತಿ ಎಲ್, ಕಲಾವಿದ ಶಿಕ್ಷಕರ ವೇದಿಕೆ..