NPS ನೌಕರರ ಸಂಘದ ಅದ್ಯಕ್ಷ ಪ್ರಭಾಕರ ನಾಪತ್ತೆ ಪ್ರಕರಣ ಕುರಿತಂತೆ ಸರಕಾರಿ ನೌಕರರ ಸಂಘದ ಅದ್ಯಕ್ಷ ಸಿಎಸ್ ಷಡಾಕ್ಷರಿ ಅವರಿಂದ ಮಾದ್ಯಮಗೊಷ್ಠಿ..
ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಏನು ಹೇಳಿದ್ದಾರೆ ನೋಡಿ..
ಶಿವಮೊಗ್ಗ: ಜು.19 ರಂದು ಶಿವಮೊಗ್ಗ ಎನ್ ಪಿ ಎಸ್ ನೌಕರ ಸಂಘದ ತಾಲೂಕು ಅಧ್ಯಕ್ಷ ಪ್ರಭಾಕರ್ ಅವರ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಭಾಕರ ಅವರು ವಾಟ್ಸಪ್ ಗ್ರೂಪ್ ನಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿ.ಎಸ್.ಷಡಾಕ್ಷರಿ ಮತ್ತು ಇತರೆ ಮೂವರ ಹೆಸರು ಬರೆದು ಬದುಕಿಗೆ ವಿದಾಯ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಲ್ಕು ದಿನ ನಾಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಗುರುತರವಾಗಿ ಕೇಳಿ ಬಂದ ಆರೋಪದ ಬಗ್ಗೆ ಅಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಭಾಕರ್ ಅವರಿಗೆ ಕಳೆದ 6 ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟ ಅನುಭವಿಸಿದ್ದಾರೆ. ಅವರ ವರ್ಗಾವಣೆಯಲ್ಲಾಗಲಿ, ಅವರ ಸಂಬಳ ತಡೆಹಿಡಿಯುವಲ್ಲಾಗಲಿ ನನ್ನ ಕೈವಾಡವಿದೆ ಎಂಬ ಆರೋಪ ಸತ್ಯಕ್ಜೆ ದೂರವಾಗಿದೆ. ಈ ಆರೋಪಕ್ಕೆ ಕುರಿತಂತೆ ಚರ್ಚೆಗೂ ಸಿದ್ದ. ಹಾಗೆ ಸಮಸ್ಯೆ ಇದ್ದಾಗ ಸಂಘಟನೆಗೆ ಹೋಗಿ ಸಮಸ್ಯೆ ಹೇಳಿಕೊಳ್ಳಬೇಕಿತ್ತು. ಅವರದೇ ಎನ್ಪಿಎಸ್ ಸಂಘಟನೆ ಇದೆ ಅಲ್ಲಿಯೂ ಹೇಳಬಹುದಿತ್ತು ಎಂದು ಷಡಾಕ್ಷರಿ ತಿಳಿಸಿದ್ದಾರೆ.
ಯಾವುದೇ ನೌಕರನು ಇಂತಹ ನಾಪತ್ತೆ ಪ್ರಕರಣವಾಗಲಿ, ಆತ್ಮಹತ್ಯೆಯ ಪ್ರಕರಣವಾಗಲಿ ತೀರ್ಮಾನಕ್ಕೆ ಬರಬಾರದು. ನಮ್ಮ ಸಂಘಟನೆಯಿಂದಲೇ ಅವರಿಗೆ ಸಾಲ ನೀಡಲಾಗಿತ್ತು ಅವರ ಮೇಲೆ ಸಿಟ್ಟು ದ್ವೇಷವಿದ್ದಿದ್ದರೆ ಆ ಸಾಲವನ್ನೇ ತಡೆ ಹಿಡಿಯಬಹುದಿತ್ತು. ಅಂತಹ ಸಣ್ಣ ಕೆಲಸಕ್ಕೆ ಕೈಹಾಕುವನು ನಾನಲ್ಲ. ಹಾಗಾಗಿ ನನ್ನ ಮೇಲಿನ ಆರೋಪಕ್ಕೆ ನಾನು ಚರ್ಚೆಗೂ ಸಿದ್ಧವೆಂದರು.