ಶೀರ್ಷಿಕೆ -. ಪರಿಣಾಮ
ಪ್ರತಿದಿನ ಕ್ಲಾಸಿನಲ್ಲಿ ಮಕ್ಕಳು ಅಭ್ಯಾಸದ ಕಡೆಗೆ ಗಮನ ಕೊಡದೆ
ಹರಟೆ, ಮಾತು, ತುಂಟಾಟ, ಜಿಗಿದಾಟ ಹೀಗೆ ಇನ್ನಿತರ ಅನ್ಯ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು.
ಪ್ರತಿದಿನ ಎಸ್ಟು ಹೇಳಿದರು ಕೇಳುತ್ತಿರಲಿಲ್ಲ. ಹಾಗೆ ಎಲ್ಲರನ್ನು ಕರೆದು ಬಾಯಿ ಮೇಲೆ ಬೆರಳು ಇಟ್ಟುಕೊಂಡು ಕುಳಿತುಕೊಳ್ಳಿ ನಾ ನಿಮಗೊಂದು ಕಥೆ ಹೇಳುವೆ ಎಂದೆ.
ಶಿಲ್ಪಿ ಮತ್ತು ಕಲ್ಲಿನ ಕಥೆ ಹೇಳಿದೆ.
ಶಿಲ್ಪಿಯ ಬಳಿ ಎರಡು ಕಲ್ಲುಬಂಡೆಗಳಿದ್ದವು. ಒಂದನ್ನು ಉಳಿಯಿಂದ ಕಟೆಯಲು ಸುರು ಮಾಡಿದ. ಆಗ ಕಲ್ಲು ಹೇಳಿತು ನನಗೆ ತುಂಬಾ ನೋವಾಗ್ತಿದೆ ಜಾಸ್ತಿ ಕಟೆಯ ಬೇಡ ಎಂದಿತು. ಆಗ ಶಿಲ್ಪಿ ಸ್ವಲ್ಪನೆ ಕಟೆದು ಹೊಸ್ತಿಲು ಮಾಡಿದ.
ಇನ್ನೊಂದು ಕಲ್ಲು ತೆಗೆದುಕೊಂಡು
ಸುಂದರ ಮೂರ್ತಿ ಮಾಡಿದ. ಅದು ಪೆಟ್ಟು , ನೋವು ಸಹಿಸಿಕೊಂಡು ಮೂರ್ತಿಯಾಗಿ ಗರ್ಭ ಗುಡಿಯಲ್ಲಿ ಫಲಪುಷ್ಪ ಮಂತ್ರಭಿಷೇಕ ವಿವಿಧ ನೈವೇದ್ಯಗಳಿಂದ ರಾರಾಜಿಸುತ್ತಿದೆ. ನೋವು ಸಹಿಸಿಕೊಳ್ಳದ ಹೊಸ್ತಿಲು ಬರುವ ಭಕ್ತಾದಿಗಳ ಕಾಲ್ತುಳಿತಕ್ಕೆ ಪ್ರತಿದಿನ ಒಳಗಾಗುತ್ತಿದೆ. ನೋಡಿ ಮಕ್ಕಳೇ. ಎಂದಾಗ ನಾವು ಮಾರ್ತಿಗಳಾಗುತ್ತೇವೆ . ಎಂದು ಪ್ರತಿದಿನ ಅಭ್ಯಾಸ ,.ಬರವಣಿಗೆ ಓದುವದು ಚೆನ್ನಾಗಿ ಮಾಡ್ತಿದಾರೆ. ಇದು ನೈಜ.
ಉಮಾದೇವಿ. ಯು. ತೋಟಗಿ.
ಬೈಲಹೊoಗಲ.