ನಾಪತ್ತೆಯಾಗಿದ್ದ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷರನ್ನು ಪತ್ತೆ ಮಾಡಿದ ಪೋಲಿಸರು…!!
ನನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ ಪ್ರಭಾಕರ ಪತ್ನಿ…
ಶಿವಮೊಗ್ಗ: ನಾಪತ್ತೆಯಾಗಿದ್ದ ಎನ್.ಪಿ.ಎಸ್. ನೌಕರರ ಸಂಘದ ಶಿವಮೊಗ್ಗ ತಾಲೂಕು ಶಾಖೆ ಅಧ್ಯಕ್ಷ ಪ್ರಭಾಕರ ಪತ್ತೆಯಾಗಿದ್ದಾರೆ.
ಶಿವಮೊಗ್ಗ ತಾಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಜುಲೈ 19ರಂದು ಸಂದೇಶ ರವಾನಿಸಿ ನಾಪತ್ತೆಯಾಗಿದ್ದರು. ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ಎನ್‌ಪಿಎಸ್ ಹೋರಾಟ ಸಮಿತಿಯ ವಾಟ್ಸಾಪ್ ಗ್ರೂಪ್ ನಾಪತ್ತೆಯಾಗಿದ್ದರು. ಸಂದೇಶ ಹಾಕಿ ತಮ್ಮ ಕಾರ್ ಕಾರ್ಕಳದಲ್ಲಿ ಬಿಟ್ಟು ಅವರು ಹುಬ್ಬಳ್ಳಿಗೆ ಹೋಗಿದ್ದರು. ನಂತರ ತಮ್ಮ ಕುಟುಂಬದವರ ಸಂಪರ್ಕಕ್ಕೆ ಬಂದಿದ್ದ ಪ್ರಭಾಕರ್ ಹುಬ್ಬಳ್ಳಿ ನಗರದಿಂದ ದಾವಣಗೆರೆಗೆ ಬಂದಿದ್ದರು. ದಾವಣಗೆರೆಯಲ್ಲಿ ಅವರನ್ನು ವಶಕ್ಕೆ ಪಡೆದ ಪೊಲೀಸರು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ.
ಶಿವಮೊಗ್ಗದ ಕೋಟೆ ಠಾಣೆಗೆ ಪ್ರಭಾಕರನನ್ನು
ಕರೆದುಕೊಂಡು ಬರಲಾಗಿದ್ದು, ವಿಚಾರಣೆ ನಡೆಸಲಾಗಿದೆ
ಎಂದು ಹೇಳಲಾಗುತ್ತಿದೆ.ಪೋಲಿಸರ್ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ..