Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಸಿ.ಎಸ್.ಷಡಾಕ್ಷರಿಯವರ ಕಿರುಕುಳಕ್ಕೆ ಸರಕಾರಿ ನೌಕರ ಬಲಿ? ನೌಕರರ ಸಂಘದ ರಾಜ್ಯಾದ್ಯಕ್ಷ ಹಾಗೂ ಶಿಕ್ಷಣ ಸಚಿವ ಆಪ್ತ ಕಾರ್ಯದರ್ಶಿಯವರ ಮೆಲೇ ನೇರ ಆರೋಪ: ಸರಕಾರಿ ನೌಕರ ನಾಪತ್ತೆ

Posted on July 22, 2023 By Pulic Today No Comments on ಸಿ.ಎಸ್.ಷಡಾಕ್ಷರಿಯವರ ಕಿರುಕುಳಕ್ಕೆ ಸರಕಾರಿ ನೌಕರ ಬಲಿ? ನೌಕರರ ಸಂಘದ ರಾಜ್ಯಾದ್ಯಕ್ಷ ಹಾಗೂ ಶಿಕ್ಷಣ ಸಚಿವ ಆಪ್ತ ಕಾರ್ಯದರ್ಶಿಯವರ ಮೆಲೇ ನೇರ ಆರೋಪ: ಸರಕಾರಿ ನೌಕರ ನಾಪತ್ತೆ
Share to all

ನೌಕರಿಯಲ್ಲಿ ಹಿಂಬಡ್ತಿ ಮತ್ತು ಕಳೆದ ಆರು ತಿಂಗಳಿನಿಂದ ವೇತನ ಆಗದ ಕಾರಣ ಮನನೊಂದು ಸರ್ಕಾರಿ ನೌಕರರೋರ್ವರು ನಾಪತ್ತೆಯಾಗಿರುವ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ: ನೌಕರಿಯಲ್ಲಿ ಹಿಂಬಡ್ತಿ ಅನುಭವಿಸಿ, ಕಳೆದ 6 ತಿಂಗಳಿನಿಂದ ವೇತನವೂ ಸಿಗದ ಕಾರಣ ಸರ್ಕಾರಿ‌ ನೌಕರರೋರ್ವರು ನಾಪತ್ತೆಯಾಗಿದ್ದಾರೆ ಎನ್ನಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಸೋಮಯ್ಯ ಲೇಔಟ್ ನಿವಾಸಿ ಪ್ರಭಾಕರ್ ಕಾಣೆಯಾಗಿದ್ದಾರೆ. ಪ್ರಭಾಕರ್​ ಅವರ ಪತ್ನಿ ದೀಪ ಶಿವಮೊಗ್ಗ ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಭಾಕರ್ ಅವರು ಈ ಹಿಂದೆ ಶಿಕ್ಷಕರಾಗಿದ್ದರು. ಬಳಿಕ ಹೊನ್ನಾಳಿಯ ಬಿಇಒ ಕಚೇರಿಗೆ ಎಫ್​ಡಿಎ ಆಗಿ ನೇಮಕಗೊಂಡಿದ್ದರು. ನಂತರ ಸರ್ಕಾರ ಶಿಕ್ಷಕರ ಹುದ್ದೆಗೆ ಸರಿ ಸಮಾನ ಹುದ್ದೆ ನೀಡುವುದಾಗಿ FDA ಯಿಂದ SDA ಆಗಿ ಹಿಂಬಡ್ತಿ ನೀಡಿ, ಹೊನ್ನಾಳಿಯಿಂದ ಚಿತ್ರದುರ್ಗ ಜಿಲ್ಲೆ ಬೇತೂರು ಪಾಳ್ಯಕ್ಕೆ ವರ್ಗಾವಣೆ ಮಾಡಿತ್ತು. ಇದರಿಂದ ತೀವ್ರವಾಗಿ ಬೇಸರಗೊಂಡಿದ್ದರಂತೆ.

ಬೆಂಗಳೂರಿನ ಶಿಕ್ಷಣ ಇಲಾಖೆಯ ಕಚೇರಿಗೆ ಸಾಕಷ್ಟು ಸಲ ಅಲೆದಾಡಿದರೂ, ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.ಪ್ರಭಾಕರ್​ ವರ್ಗಾವಣೆಗೊಂಡ ಕಾರಣ ಇವರ ಹಿಂದಿನ ನೌಕರಿಯ ವೇತನವನ್ನು ತಡೆ ಹಿಡಿಯಲಾಗಿತ್ತು. ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸದ ಕಾರಣ ಕಳೆದ 6 ತಿಂಗಳಿಂದ ಇವರಿಗೆ ವೇತನ ನೀಡಲಾಗಿರಲಿಲ್ಲ. ಇದರಿಂದ ನೊಂದಿದ್ದ ಪ್ರಭಾಕರ್ ತಮ್ಮ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಿಣಿಯ ವಾಟ್ಸ್‌ ಆ್ಯಪ್​ ಗ್ರೂಪ್​​ನಲ್ಲಿ ಒಂದು ಮೆಸೇಜ್​ ಹಾಕಿ ನಾಪತ್ತೆಯಾಗಿದ್ದಾರೆ.

ನೌಕರರ ಗ್ರೂಪ್​ನಲ್ಲಿ ಮೆಸೇಜ್ ಹಾಕಿದ ನೌಕರ​:

“ಆತ್ಮೀಯ ರಾಜ್ಯದ ಸಮಸ್ತ NPS ನೌಕರ ಸಂಘದ ಪದಾಧಿಕಾರಿ ಮಿತ್ರರೇ, ನಾನು ಕಳೆದ ಹತ್ತು ವರ್ಷಗಳಿಂದ NPS ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ”.”ಆದರೆ ಇತ್ತೀಚೆಗೆ ಜನವರಿ 22-2023ರಂದು ಶಿವಮೊಗ್ಗ ಜಿಲ್ಲಾ ಮಟ್ಟದ NPS ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಅವರ ಸಹಚರರಾದ ಮೋಹನ್ ಕುಮಾರ ಆರ್, ಬಸವನಗೌಡ , ಹಾಗೂ ಹಿಂದಿನ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಮತ್ತು ಅವರ ಆಪ್ತ ಕಾರ್ಯದರ್ಶಿಗಳಾಗಿದ್ದ ಎ.ಆರ್.ರವಿ ಅವರು ವ್ಯವಸ್ಥಿತ ಪಿತೂರಿ ನಡೆಸಿ ಹಿಂಬಡ್ತಿ ಮಾಡಿದ್ದಾರೆ”.

“ಅಲ್ಲದೆ ನಿಯಮಗಳಲ್ಲಿ ವೇತನ ಸಂರಕ್ಷಣೆಗೆ ಅವಕಾಶವಿದ್ದರೂ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಶ್ರೀ ಮಹಂತಯ್ಯ ಹೊಸಮಠ ಅವರು ಹಿಂಬಡ್ತಿ ಮಾಡಿದ್ದಲ್ಲದೆ, ಹೆಚ್ಚುವರಿ ವೇತನ ಕಟಾಯಿಸುವಂತೆ ಆದೇಶ ಮಾಡಿದ್ದಾರೆ. ಇದರಿಂದಾಗಿ ಹೊನ್ನಾಳಿ BEO ನಂಜರಾಜ ಅವರು ಸರಿಯಾದ ಸಮಯಕ್ಕೆ ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸಿಲ್ಲ. ಇದಿರಂದಾಗಿ ಕಳೆದ 6 ತಿಂಗಳಿಂದ ವೇತನ ಆಗದೆ ನರಕಯಾತನೆ ಅನುಭವಿಸಿದ್ದೇನೆ”.”ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ 6 ತಿಂಗಳಕಾಲ ಕಳೆದಾಯಿತು. ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದೆ. ಇದು ಅತ್ಯಂತ ನೋವಿನ ಸಂಗತಿ. ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ. ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಕಾರಣ ಬದುಕಿಗೆ ವಿದಾಯ ಹೇಳಲು ಬಯಸಿದ್ದೇನೆ. ನನ್ನ ನಿರ್ಧಾರಕ್ಕೆ ಮೇಲ್ಕಾಣಿಸಿದ ವ್ಯಕ್ತಿಗಳೇ ನೇರ ಕಾರಣರಾಗಿರುತ್ತಾರೆ. ನನ್ನ ಈ ನನ್ನ ಕುಟುಂಬದ ಹೊಣೆಗಾರಿಕೆ ಇಡೀ NPS ನೌಕರ ಸಂಘಟನೆಯದ್ದು. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ”. ಇಂತಿ ನಿಮ್ಮ ನತದೃಷ್ಟ NPS ನೌಕರ ‌ಪ್ರಭಾಕರ ಎಸ್. ಎಂದು ಮೇಸೆಜ್ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.

ಪ್ರಭಾಕರ್ ಅವರ ಮೇಸೆಜ್ ನೋಡಿದ ಸ್ನೇಹಿತರು ಮನೆಗೆ ಬಂದು ವಿಚಾರಿಸಿದಾಗ ಪ್ರಭಾಕರ್ ರವರ ಕುಟುಂಬಸ್ಥರಿಗೆ ಈ ವಿಚಾರ ತಿಳಿದು ಬಂದಿದೆ. ಬಳಿ ಅವರನ್ನು ಕುಟುಂಬಸ್ಥರು ಮತ್ತು ಸ್ನೇಹಿತರು ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಬಳಿಕ ಬುಧವಾರ ರಾತ್ರಿ ಪ್ರಭಾಕರ್​ ಅವರ ಪತ್ನಿ ಅವರು ದೀಪ ಕೋಟೆ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಭಾಕರ್ ಪತ್ನಿ, “ಪ್ರಭಾಕರ್ ಅವರಿಗೆ ಹಿಂಬಡ್ತಿಯಾಗಿತ್ತು. ಇದರಿಂದ ಬಹಳ ಬೇಸರಗೊಂಡಿದ್ದರು.ಈ ವಿಚಾರಕ್ಕೆ ಸಾಕಷ್ಟು ಬಾರಿ ಬೆಂಗಳೂರಿಗೆ ಹೋಗಿ ಬಂದರೂ ಏನೂ ಪ್ರಯೋಜನ ಆಗಿರಲಿಲ್ಲ. ಮಂಗಳವಾರ ರಾತ್ರಿ 8:30ಕ್ಕೆ ಕೆಲಸದಿಂದ ಬಂದವರು ಊಟ ಮಾಡದೆ ಸುಸ್ತಾಗುತ್ತಿದೆ ಎಂದು ಮಲಗಿಕೊಂಡರು. ನಮ್ಮ ಜೊತೆ ಏನೂ ಮಾತನಾಡಲಿಲ್ಲ ಅವರು ತುಂಬ ಧೈರ್ಯವಾಗಿರುವವರು” ಎಂದು ಹೇಳಿದರು.

“ಅವರು ನೌಕರರ ಗ್ರೂಪ್​ನಲ್ಲಿ ಮೇಸೆಜ್ ಮಾಡಿರುವುದು ನನಗೆ ಗೊತ್ತಿರಲಿಲ್ಲ. ಗ್ರೂಪ್​ನಲ್ಲಿ ಮೇಸೆಜ್ ನೋಡಿ ಅವರ ಸ್ನೇಹಿತರೆಲ್ಲ ಮನೆಗೆ ಬಂದರು. ಅವರ ಪೋನ್ ಸ್ವಿಚ್ ಆಫ್ ಆಗಿದ್ದು ಇದುವರೆಗೂ ಆನ್ ಆಗಿಲ್ಲ. ಅವರು ಎಲ್ಲಿ ಇದ್ದಾರೆ ಎಂದು ತಿಳಿದಿಲ್ಲ. ಅವರಿಗೆ ಕಳೆದ 6 ತಿಂಗಳಿನಿಂದ ಸಂಬಳವಾಗಿಲ್ಲ. ಇದರಿಂದಲೂ ಅವರು ಬೇಸರಗೊಂಡಿದ್ದರು” ಎಂದು ಹೇಳಿದರು.ಪ್ರಭಾಕರ್ ಅವರ ಸ್ನೇಹಿತ ಶರತ್ ಮಾತನಾಡಿ, “ಪ್ರಭಾಕರ್ ತಾಲೂಕು NPS ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಸೇವಾವಧಿಯಲ್ಲಿ ನಡೆದ ಹಿಂಬಡ್ತಿ ಹಾಗೂ ವೇತನವಾಗದ ಕಾರಣ ತಮ್ಮ ನೌಕರರ ರಾಜ್ಯ ಕಾರ್ಯಕಾರಿಣಿ ಗ್ರೂಪ್​ನಲ್ಲಿ ಬೇಸರ ವ್ಯಕ್ತಪಡಿಸಿ ಮೆಸೇಜ್​ ಹಾಕಿದ್ದರು. ಬುಧವಾರ ಬೆಳಗ್ಗೆ 7.45ರಿಂದ ಕಾಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬದವರು ಈಗ ದೂರು ನೀಡಿದ್ದಾರೆ” ಎಂದರು.

P Views: 41
Headlines, ಮುಖ್ಯಾಂಶಗಳು, ರಾಷ್ರ್ಟೀಯ, ಶಿಕ್ಷಣ Tags:ಸಿ.ಎಸ್.ಷಡಾಕ್ಷರಿಯವರ ಕಿರುಕುಳಕ್ಕೆ ಸರಕಾರಿ ನೌಕರ ಬಲಿ? ನೌಕರರ ಸಂಘದ ರಾಜ್ಯಾದ್ಯಕ್ಷ ಹಾಗೂ ಶಿಕ್ಷಣ ಸಚಿವ ಆಪ್ತ ಕಾರ್ಯದರ್ಶಿಯವರ ಮೆಲೇ ನೇರ ಆರೋಪ: ಸರಕಾರಿ ನೌಕರ ನಾಪತ್ತೆ

Post navigation

Previous Post: “ಇಂಡಿಯಾ ಫಸ್ಟ್ ಲೇಡಿ ಟೀಚರ್” ಮಾತೆ ಸಾವಿತ್ರಿಭಾಯಿ ಪುಲೆ ಜನುಮ ದಿನವಾದ ಜನೇವರಿ 3 ರಂದು “ಶಿಕ್ಷಕಿಯರ ದಿನಾಚರಣೆ” ದಿನವನ್ನಾಗಿ ಆಚರಿಸುವಂತೆ ಸಚಿವ ಸತೀಶ ಜಾರಕಿಹೋಳಿ‌ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ..
Next Post: ಸನ್ಮಾನ್ಯ ಮಧು ಬಂಗಾರಪ್ಪ  ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು. ಸನ್ಮಾನ್ಯ C.S ಷಡಕ್ಷರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದರಾಜ್ಯಾಧ್ಯಕ್ಷರು ಬೆಂಗಳೂರು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ.ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಬೆಂಗಳೂರು

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme