ಬೆಂಗಳೂರು: ಮಾತೆ ಸಾವಿತ್ರಿಬಾಯಿ ಫುಲೆ ಇವರನ್ನು ಅಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದು ಗುರುತಿಸಲಾಗಿದೆ. ಇವರು 3 ಜನೆವರಿ 1831ರಲ್ಲಿ ಮಹಾರಾಷ್ಟ್ರ ಸಾತಾರ ಜಿಲ್ಲೆಯಲ್ಲಿ ನೈಗಾಂವನಲ್ಲಿ ಜನಿಸಿದರು, ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾ ಫುಲೆ ಅವರಿಗೆ ಸಲ್ಲಬೇಕು. 1847ರಲ್ಲಿ ಇವರು ಶ್ರೀಮತಿ ಮಿಚೆಲ್ ಅವರ ಶಾಲೆಯಲ್ಲಿ ಶಿಕ್ಷಕೀಯ ತರಬೇತಿ ಪಡೆದುರು 1848ರಿಂದ 1852ರ ವರೆಗೆ 18 ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಎಲ್ಲಾ ಸಾಧನೆಗಳನ್ನು ಗುರುತಿಸಿ ಬ್ರಿಟೀಷ ಸರ್ಕಾರ “ಇಂಡಿಯಾ ಫಸ್ಟ್ ಲೇಡಿ ಟೀಚರ್” ಎಂಬ ಬಿರುದು ಕೊಟ್ಟಿತು.
ಆದ್ದರಿಂದ ಇವರ ಜನ್ಮ ದಿನವಾದ ಜನವರಿ 3ನೇ ತಾರೀಖ “ಶಿಕ್ಷಕೀಯರ ದಿನಾಚಾರಣೆ” ಯನ್ನಾಗಿ ಘೋಷಣೆ ಮಾಡಿ ಸರ್ಕಾರದ ವತಿಯಿಂದ ಆಚರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವ ಸತೀಶ ಜಾರಕಿಹೋಳಿ ಅವರು ಮಾನ್ಯ ಮುಖ್ಯ ಮಂತ್ರೀಗಳಾದ ಶ್ರೀ ಸಿದ್ದರಾಮಯ್ಯ ಅವರಲ್ಲಿ ಪತ್ರ ಬರೆದು ವಿನಂತಿಸಿದ್ದಾರೆ.
ಜನವರಿ 3ರಂದು ಮಾತ ಸಾವಿತ್ರಿ ಬಾಯಿ ಪುಲೆಯವರ ಜನುಮ ದಿನವನ್ನು “ಶಿಕ್ಷಕಿಯರ ದಿನಾಚರಣೆ”ದಿನವನ್ನಾಗಿ ಸರಕಾರದ ವತಿಯಿಂದಲೇ ಆಚರಿಸುವಂತೆ ಸಾವಿತ್ರಿಭಾಯಿ ಪುಲೆ ಶಿಕ್ಷಕಿಯರ ಸಂಘದ ಸಂಘದ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಲತಾ ಎಸ್ ಮುಳ್ಳೂರ ಅವರು ಮಾನ್ಯ ಸಚಿವರಲ್ಲಿ ಮನವಿ ಮಾಡಿದ್ದರು…
ಜೂನ 30 ರಂದು ಮಾನ್ಯ ಸಚಿವರಾದ ಸತೀಶ ಜಾರಕಿಹೋಳಿ
ಯವರಿಗೆ ಮನವಿ ನೀಡಿ ವಿನಂತಿಸಲಾಗಿತ್ತು..ಸಚಿವರು ಇವರ ಮನವಿಗೆ ಸ್ಪಂದಿಸಿ ಮಾನ್ಯ ಮುಖ್ಯ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ..
ನಾವು ಕೊಟ್ಟ ಮನವಿಗೆ ಬೇಡಿಕೆಗೆ ಸ್ಪಂದಿಸಿ ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಮಾನ್ಯ ಸಚಿವರಿಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಧನ್ಯವಾದಗಳನ್ನು ಡಾ.ಲತಾ.ಎಸ್.ಮುಳ್ಳೂರ. ರಾಷ್ಟ್ರಾಧ್ಯಕ್ಷ ರು ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕಿಯರ ಫೆಡರೇಷನ್ (ರಿ)ನವದೆಹಲಿ. ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(,ರಿ),ರಾಜ್ಯ ಘಟಕ ಧಾರವಾಡ ಇವರು ತಿಳಿಸದ್ದಾರೆ..