ಕಚೇರಿಗೆ ಬಂದಿದ್ದ ಅಧಿಕಾರಿಗೆ ಕಾರನಲ್ಲಿಯೇ ಹೃದಯಘಾತ:ಸರಕಾರಿ ಕಚೇರಿಯಲ್ಲಿ ಅಸುನಗಿದ ವಿನಾಯಕ ಭಟ್!!
ಮೃತ ಅಧಿಕಾರಿಯ ನಿಧನಕ್ಕೆ ಸಹಾಯಕ ಆಯಕ್ತರು ಸೇರಿದಂತೆ ಸಿಬ್ಬಂದಿಯಿಂದ ಸಂತಾಪ ಸಲ್ಲಿಕೆ…
ಸಾವು ಯಾವ ರೂಪದಲ್ಲಾದರೂ ಬರಬಹುದು.!!ಆರೋಗ್ಯದ ಬಗ್ಗೆ ಎಚ್ಚರ ವಹಿಸಿ…
ಶಿರಸಿ: ಇಲ್ಲಿಯ ತಹಸೀಲ್ದಾರ ಕಚೇರಿಯ ಕಂದಾಯ ಅಧಿಕಾರಿಯಾಗಿದ್ದ ವಿನಾಯಕ ಭಟ್ (46) ಮಂಗಳವಾರ ನಿಧನರಾಗಿದ್ದಾರೆ. ಮಂಗಳವಾರ ಮಿನಿವಿಧಾನ ಸೌಧದ ಮುಂದೆ ನಿಲ್ಲಿಸಲಾಗಿದ್ದ ತಮ್ಮ ಕಾರಿನಲ್ಲಿಯೇ ಮೃತಪಟ್ಟಿರುವುದು ಕಂಡು ಬಂದಿದೆ. ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲವಾದರೂ ಹೃದಯಾಘಾತದಿಂದ ಮೃತಪಟ್ಟಿರ ಬಹುದೆಂದು ಅಂದಾಜಿಸಲಾಗಿದೆ.
ಮದ್ಯಾಹ್ನ ಕಾರಿನಲ್ಲಿ ಕಚೇರಿಗೆ ಬ೦ದಿದ್ದ ಅವರು ಸಂಜೆ 5ಗಂಟೆಯಾದರೂ ಕಚೇರಿಯ ಒಳಗಡೆ ಬಾರದಿರುವದನು ಕಂಡು ಕಚೇರಿಯ ಸಿಬ್ಬಂದಿಯೊರ್ವರು ಕಾರಿನ ಹತ್ತಿರ ಬಂದು ನೋಡಿದಾಗ ಅವರು ನಿಧನರಾಗಿರುವುದು ಕ೦ಡು ಬಂದಿದೆ.
ಮೂಲತಃ ಯಲ್ಲಾಪುರ ತಾಲೂಕಿನವರಾಗಿದ್ದ ಅವರು ಮೊದಲಿಗೆ ಗ್ರಾಮ ಲೆಕ್ಕಿಗರಾಗಿ ಸಿದ್ದಾಪುರದಲ್ಲಿ ಸೇವೆ ಸಲ್ಲಿಸಿ, ಬಳಿಕ ಪದೋನ್ನತಿಯೊಂದಿಗೆ ಕ೦ದಾಯ ಅಧಿಕಾರಿಯಾಗಿ ಜೋಯಿಡಾದಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಕಳೆದ ಎರಡು ವರ್ಷದ ಹಿಂದೆ ಶಿರಸಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಂದಾಯ ಅಧಿಕಾರಿಯ ನಿಧನಕ್ಕೆ ಸಹಾಯಕ ಆಯುಕ್ತ ದೇವರಾಜ ಆರ್ ಹಾಗು ತಹಸೀಲ್ದಾರ ಶ್ರೀಧರ ಮುಂದಲಮನಿ ಸಂತಾಪ