ಮಹಿಳಾ ಶಿಕ್ಷಕಿಯರಿಗೆ ಮುಟ್ಟಿ ನ ರಜೆ ಸೌಲಭ್ಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಯರಿ ಗೆ ಶುಚಿ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಲು ಮಾನ್ಯ ಮುಖ್ಯಮಂತ್ರಿ ಗಳಿಗೆ ಡಾ.ಲತಾ.ಎಸ್.ಮುಳ್ಳೂರ ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ವು ರಾಜ್ಯದ ಸರ್ಕಾರಿ, ಅನುದಾನಿತ,ಪ್ರಾಥಮಿಕ ಪ್ರೌಢಶಾಲಾ ಮತ್ತು ಪದವೀಧರ ಶಿಕ್ಷಕಿಯರನ್ನೊಳಗೊಂಡ ಸಂಘವಾಗಿದ್ದು, ಸಮಸ್ತ ಮಹಿಳಾ ಶಿಕ್ಷಕಿಯರ ಹಿತ ಕಾಯುವಲ್ಲಿ ಸನ್ನದ್ಧವಾಗಿದೆ. ಈ ಮೂಲಕ ಮಾನ್ಯ ಗೌರವಾನ್ವಿತ ಮುಖ್ಯ ಮಂತ್ರಿಗಳಿಗೆ ಮನವಿ, ಆರೋಗ್ಯವೇ ಭಾಗ್ಯ.ಸ್ತ್ರೀಗೆ ಸುರಕ್ಷತೆಯಿಂದಲೇ ಸರ್ವ ಸಂಪತ್ತು ಆದಕಾರಣ ನಮ್ಮ ರಾಜ್ಯದ ಒಟ್ಟು ಶಿಕ್ಷಕಿಯರ ಶೇಕಡ 65 ಕ್ಕಿಂತ ಹೆಚ್ಚು ಸಂಖ್ಯೆ ಇದ್ದು, ಶಿಕ್ಷಕಿಯರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಆರೋಗ್ಯವಂತರಾಗಿರುವುದು ಅತ್ಯಗತ್ಯವಾಗಿದೆ. ಅಲ್ಲದೆ ಹಲವಾರು ಶಾಲೆಗಳಲ್ಲಿ ಶಿಕ್ಷಕಿಯರಿಗೆ ಸರಿಯಾದ ಶೌಚಾಲಯಗಳಾಗಲಿ, ವಿಶ್ರಾಂತಿ ಕೊಠಡಿಗಳಾಗಲಿ ಇಲ್ಲದಿರುವುದರಿಂದ ಋತುಚಕ್ರ ಮತ್ತು ಋತುಬಂಧದ ಸಮಯದಲ್ಲಿ ಶಿಕ್ಷಕಿಯರು ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಲ್ಲದೆ ಈ ಸಮಯದಲ್ಲಿ ಮುಜುಗರ ಮತ್ತು ಕಿರಿಕಿರಿಯನ್ನು ಉಂಟುಮಾಡು ಮಾಡಿ ಮಹಿಳೆಯರ ಆತಂಕ ಹೆಚ್ಚಿಸುತ್ತದೆ .ಆದ ಕಾರಣ ಶಿಕ್ಷಕಿಯರಿಗೆ ಮುಟ್ಟಿನ ರಜೆ ಸೌಲಭ್ಯವನ್ನು ಒದಗಿಸಬೇಕು ಎಂದು ಸಮಸ್ತ ಶಿಕ್ಷಕಿಯರ ಪರವಾಗಿ ನಮ್ರ ವಿನಂತಿ.
‘ಸುರಕ್ಷಿತೆಯ ಜೀವನ, ಸ್ವಾವಲಂಬಿ ಜೀವನ ‘ ಅದೇ ರೀತಿ ವಿದ್ಯಾರ್ಥಿನಿಯರಿಗೆ ಶುಚಿ ಸ್ಯಾನಿಟರಿ ಪ್ಯಾಡ್ ಗಳ ಪೂರೈಕೆ ಇತ್ತೀಚಿನ ಮೂರು ವರ್ಷಗಳಿಂದ ಆಗಿರುವುದಿಲ್ಲ. ಇದರಿಂದ ವಿದ್ಯಾರ್ಥಿನಿಯರಿಗೆ ಶುಚಿ ಸೆನೆಟರಿ ಪ್ಯಾಡ್ ಗಳನ್ನು ಪೂರೈಕೆ ಮಾಡಿ ರಾಜ್ಯದ ಸಮಸ್ತ ಶಿಕ್ಷಕಿಯರಿಗೆ ಮತ್ತು “ಆರೋಗ್ಯವೇ ಭಾಗ್ಯ” ಗಾದೇಮಾತಿಗೆ ಸಂಕಲ್ಪ ಮಾಡಬೇಕಾಗಿ ವಿನಯ ಪೂರ್ವಕವಾಗಿ ರಾಜ್ಯದ ಸಮಸ್ತ ಶಿಕ್ಷಕಿಯರ ಪರವಾಗಿ ತಮ್ಮಲ್ಲಿ ವಿನಂತಿ.
ಡಾ.ಲತಾ.ಎಸ್.ಮುಳ್ಳೂರ.ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ರು.ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿ. ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ
ಶ್ರೀಮತಿ ,ರಾಜಶ್ರೀ ಸಜ್ಜೆಶ್ವರ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು