ಪ್ರೇಮಾಂತರಂಗ.
ನಿನ್ನ ಸೆಳೆತ ಕಲಾತ್ಮಕ ಸಂವೇದನೆ
ಬಯಸಬಹುದು ಎನಿಸಿರಲಿಲ್ಲ
ನಿನ್ನ ನಾ ಅಂದು
ಆದರೂ ನಿನ್ನ ನುಡಿಗಳಲ್ಲೇನೋ ಸೆಳೆತ
ಸೌಂದರ್ಯ ಕಪ್ಪು ಬಿಳುಪಿನಲ್ಲಿಲ್ಲ
ಸುಂದರವಾದ ಆಲೋಚನೆ, ಸುಂದರವಾದ ಕ್ರಿಯೆ,
ಭೌತಿಕವು ದೈವಿಕತೆಯ ಕುರುಹು
ಬರೀ ಭ್ರಾಂತಿ ಇರದ ಲೋಕ
ಬೇಕುಬೇಡಗಳ ಪೂರೈಸುವ ಬಂಧನ
ಹೃದಯಾಂತರದ ಮಿಡಿತ
ಬಾಹ್ಯ ಕಣ್ಣು ನೋಡದ
ಆಂತರಿಕ ಸ್ಪಂದನೆ
ಬರೀ ಮಾತುಗಳು ಮನೆ ಕಟ್ಟಲಾಗದ ಸ್ಥಿತಿ
ಆತ್ಮ ಮತ್ತು ಆತ್ಮಗಳ ಮಿಲನ ಸ್ಥಿತಿ
ಮೇಲ್ಮೈ ದೃಷ್ಟಿಗೆ ಗೋಚರಿಸದ ಆಂತರ್ಯ
ಎರಡು ಜೀವಗಳ ಮನದಾಳದ ಪರಿವರ್ತನೆಯ ದೃಷ್ಟಿ
ಮಾನಸಿಕ ಅಂತಃಪ್ರಜ್ಞೆಯ
ಮಿಡಿತ
ಗುಪ್ತ ವಾಸ್ತವ ಬದುಕಿನ ಭಾವಬಂಧ
ತನ್ನಿಚ್ಛೆ ಬೇಕುಬೇಡಗಳ
ಅರಿತು ಬಾಳುವ ಸುಪ್ತ ಪ್ರಜ್ಞೆ
ಅತೀಂದ್ರಿಯ ಆಧ್ಯಾತ್ಮಿಕ
ಶಕ್ತಿಗಳ ಸಂಯೋಗ
ಹೃದಯಾಂತರದ ಭಾವಗಳ ಮಿಡಿತ
ಇರುವೆವು ನಾವು ಜೀವಿತಾವಧಿ
ಭಾವಬಂಧದೊಳು
ಎನುವ ಹೃದಯ ಮಿಲನದ ತುಡಿತ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨
ಚಿತ್ರಗಳು. ರೇಖಾ ಮೊರಬ ಹುಬ್ಬಳ್ಳಿ