ಶಿಕ್ಷಕರ ವರ್ಗಾವಣೆ: ಶಾಲಾ ಮಕ್ಕಳು ಆಸ್ಪತ್ರೆಗೆ ದಾಖಲು!!
ಇಂತಹ ಸನ್ನಿವೇಶಗಳು ನೀಮಗೆ ಸಿಗೋದು ಸರಕಾರಿ ಶಾಲೆಯಲ್ಲಿ ಮಾತ್ರ…
ಈ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ವಿದ್ಯಾರ್ಥಿಗಳು….!!
ಸೇಡಂ: ತಾಲ್ಲೂಕಿನ ಕೋಡ್ತಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗಯ್ಯ ಮಠ ಅವರ ವರ್ಗಾವಣೆ ವಿಷಯ ತಿಳಿದು ಶಾಲೆಯಲ್ಲಿ ವಿದ್ಯಾರ್ಥಿನಿಯರು ಗಳಗಳನೆ ಅತ್ತು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಪ್ರಸಂಗ ಶುಕ್ರವಾರ ನಡೆಯಿತು.
ಬೆಳಿಗ್ಗೆ ಪ್ರಾರ್ಥನೆ ಅವಧಿಗೂ ಮುನ್ನ ಕೆಲ ವಿದ್ಯಾರ್ಥಿಗಳು ದುಃಖವನ್ನು ವ್ಯಕ್ತಪಡಿಸಿದರು. ಪ್ರಾರ್ಥನೆ ನಂತರ ಇನ್ನಷ್ಟು ವಿದ್ಯಾರ್ಥಿಗಳು, ‘ಸರ್ ನಮ್ಮನ್ನು ಬಿಟ್ಟು ಹೋಗಬೇಡಿ. ಇಲ್ಲಿಯೇ ಇರಿ’ ಎಂದು ಗಳಗಳನೆ ಅಳಲು ಪ್ರಾರಂಭಿಸಿದರು. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಸಮಾಧಾನಪಡಿಸಲು ಯತ್ನಿಸಿದರೂ ಸುಮ್ಮನಾಗದ ವಿದ್ಯಾರ್ಥಿಗಳು ತಮ್ಮ ದುಃಖವನ್ನು ತೋಡಿಕೊಳ್ಳುತ್ತಿದ್ದರು.
ಅಸ್ವಸ್ಥರಾದ ವಿದ್ಯಾರ್ಥಿನಿಯರು: ಕೆಲ ವಿದ್ಯಾರ್ಥಿನಿಯರು ಬಹಳ ಹೊತ್ತಿನವರೆಗೆ ಅತ್ತಿದ್ದರಿಂದ ಪ್ರಜ್ಞೆ ತಪ್ಪಿದರು. ತಕ್ಷಣವೇ ಶಿಕ್ಷಕರು ಕೋಡ್ತಾದ ಪ್ರಾಥಮಿಕ ಆರೋಗ್ಯದ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿದರು.
ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಪ್ರಜ್ಞೆ ತಪ್ಪಿದ್ದ ಅಶ್ವಿನಿ, ಭೂಮಿಕಾ, ಐಶ್ವರ್ಯ (9ನೇ ತರಗತಿ), ಗಂಗೋತ್ರಿ ಮತ್ತು ರಾಧಿಕಾ (10ನೇ ತರಗತಿ) ಅವರನ್ನು ಆಂಬುಲೆನ್ಸ್ನಲ್ಲಿ ಸೇಡಂ ತಾಲ್ಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಉಮಾದೇವಿ, ದೈಹಿಕ ಶಿಕ್ಷಣ ಶಿಕ್ಷಕ ನಾಗಯ್ಯ ಮಠ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.ಬೆರೆ ಶಾಲೆಗೆ ವರ್ಗಾವಣೆಗೊಂಡರು ಕೂಡ ತಮ್ಮ ವಿದ್ಯಾರ್ಥಿಗಳನ್ನು ಬಿಟ್ಟು ಕೊಡಲು ಶಿಕ್ಷಕರಿಗೆ ಕೂಡ ಮನಸ್ಸಿಲ್ಲ..ಬೆರೆ ಶಾಲೆಗೆ ಶಿಕ್ಷಕರು ಹೋಗಲೆಬೇಕಾಗಿದೆ..
ಸೇಡಂನ ಸರ್ಕಾರಿ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾರೆ. ಯಾವುದೇ ಸಮಸ್ಯೆಯಿಲ್ಲ ಎಂದು ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಅವರು ತಿಳಿಸಿದ್ದಾರೆ…
ಯೋಗ ಶಾಲೆಯಾಗಿಸಿದ್ದ ಶಿಕ್ಷಕ ಕೋಡ್ತಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಾಗಯ್ಯ ಮಠ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಗ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಶಾಲೆಗೆ ಹೆಸರು ತರುವಲ್ಲಿ ಶ್ರಮಿಸುತ್ತಿದ್ದರು.
ಯೋಗದಲ್ಲಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದವರೆಗೂ ಸಾಧನೆ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಯೋಗ ತರಬೇತಿ ಪಡೆದ ಪ್ರಗತಿಪರ ರೈತ ಸೋಮನಾಥರೆಡ್ಡಿ ಪುರ್ಮಾ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ತಾಲ್ಲೂಕಿನಲ್ಲಿಯೇ ಯೋಗದ ಶಾಲೆಯೆಂದೇ ಕೋಡ್ತಾ ಪ್ರಸಿದ್ಧಿ ಪಡೆದಿದೆ. ಶಿಕ್ಷಕ ನಾಗಯ್ಯ ಮಠ ಅವರು ಜುಲೈ 14ರಂದು ಅಫಜಲಪುರ ತಾಲ್ಲೂಕಿನ ಮಣ್ಣೂರ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ..