ಸಿನಿಮಾ ಮಾದರಿಯಲ್ಲಿ ತಹಶಿಲ್ದಾರರನ್ನು ಬೆನ್ನತ್ತಿ ಹಿಡಿದ ಲೋಕಾಯುಕ್ತ ಪೋಲಿಸರು..
ಹೇಗಿತ್ತು ನೊಡಿ ಅಧಿಕಾರಿಯ ಟ್ರಾಪ್!!!
ಜು.15 -ಟ್ರೇಡ್ ಲೈಸೆನ್ಸ್ ಪರವಾನಿಗೆ ನೀಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ಉತ್ತರ ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕನನ್ನು ಸುಮಾರು 15 ಕಿ ಮೀ ಹಿಂಬಾಲಿಸಿ ಸಿಚಲಿಸಿದ್ದಾರಕಾರ್ಯಾಚರಣೆ ನಡೆಸಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ತಡ ರಾತ್ರಿ ಈ ಕಾರ್ಯಾಚರಣೆ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರ ತಂಡ ಆಹಾರ ನಿರೀಕ್ಷಕ ಮಹಾಂತೇಗೌಡ ಬಿ ಕಡಬಾಳುನನ್ನು ರೆಡ್ಹ್ಯಾಂಡ್ ಆಗಿ ಹಿಡಿಯಲಾಗಿದೆ.
ಟ್ರಾಪ್ ನಡೆದಿದ್ದು ಹೇಗೆ?..
ರಂಗದಾಮಯ್ಯ ಎಂಬುವರ ತಮ್ಮ ವಾಣಿಜ್ಯ ಕೇಂದ್ರದ ಟ್ರೇಡ್ ಲೈಸೆನ್ಸ್ ಪಡೆಯಲು ಉತ್ತರ ತಹಶೀಲ್ದಾರ್ ಕಛೇರಿಯಲ್ಲಿ ಆಹಾರ ನಿರೀಕ್ಷಕರಾಗಿದ್ದ ಮಹಾಂತೇಗೌಡ ಅವರನ್ನು ಇತ್ತೀಚೆಗೆ ಸಂಪರ್ಕಿಸಿದರು. ಆಗ ನಿಮ್ಮ ಕೆಲಸ ಮಾಡಿಕೊಳ್ಳಲು 1 ಲಕ್ಷ ರೂ. ಲಂಚದ ಬೇಡಿಕೆ ಇಡಲಾಗಿತ್ತು.
ನಂತರ ಅವರ ಮನವೊಲಿಸಲು ಪ್ರಯತ್ನಿಸಿದ್ದರೂ ಲಂಚದ ಹಣ ನೀಡದೆ ಕೆಲಸ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹಳಲಾಗಿತ್ತು. ಇದರಿಂದ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ನಿನ್ನೆ ರಾತ್ರಿ ಸುಮಾರು 10.30 ರ ಸಂದರ್ಭದಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಟ್ರಾಪ್ ಕಾರ್ಯಾಚರಣೆ ಯೋಜಿಸಲಾಗಿತ್ತು.
ಟೌನ್ಹಾಲ್ ಬಳಿ ಕಾರಿನಲ್ಲಿ ಬಂದ ಮಹಾಂತೇಗೌಡ ಲಂಚದ ಹಣದ ಮುಂಗqವಾಗಿ 43ಸಾವಿರ ನಗದನ್ನ ತೆಗೆದುಕೊಳ್ಳುವಾಗ ಲೋೀಕಾಯುಕ್ತ ಬಲೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಕೂಡಲೇ ಅಲ್ಲಿಂದ ಪರಾರಿಯಾಗಲು ಅಕಾರಿಗಳನ್ನು ತಳ್ಳಿ ತಮ್ಮ ಕಾರಿನಲ್ಲಿ ವೇಗವಾಗಿ ಚಲಾಯಿಸಿಕೊಂಡು ಮೈಸೂರಿ ರಸ್ತೆ ಕಡೆಗೆ ಚಲಿಸಿದ್ದಾರೆ
ಈ ವೇಳೆ ಲೋಕಾಯುಕ್ತ ಪೊಲೀಸರು ಕಾರನ್ನು ಚೇಸ್ ಮಾಡಿ ಹಿಡಿಯಲು ಪ್ರಯತ್ನಿಸಿದ್ದರೂ ಕೂಡ ಸಾಧ್ಯವಾಗಲಿಲ್ಲ. ಸುಮಾರು 15 ಕಿ.ಮೀ. ದೂರದವರೆಗೂ ಸಿನಿಮಿಯಾ ರೀತಿಯಲ್ಲಿ ಕಾರ್ಯಾಚರಣೆ ನಡೆದಿದ್ದು, ನೆಲಮಂಗಲದ ಸೊಂಡೆಕೊಪ್ಪ ರಸ್ತೆ ಬಳಿ ಕಾರನ್ನು ಕೊನೆಗೂ ತಡೆಯಲಾಗಿದೆ. ಆದರೂ ಹೊರಗೆ ಬಾರದೇ ಪೊಲೀಸರ ಕಾರನ್ನೇ ಗುದ್ದಿಕೊಂಡು ಮಹಾಂತೇಗೌಡ ಪರಾರಿಯಾಗಿದ್ದಾರೆ.
ಛಲಬಿಡದೇ ಲೋಕಾಯುಕ್ತ ಪೊಲೀಸರು ಮತ್ತೊಂದು ಕಾರಿನಲ್ಲಿ ಆತನನ್ನು ಹಿಂಬಾಲಿಸುವಾಗಿ ಮಹಾಂತೇಗೌಡ ಕಾರು ಟಾಟಾ ಸುಮೋವೊಂದಕ್ಕೆ ಗುದ್ದಿತ್ತು. ತಕ್ಷಣ ಆತನನ್ನು ಸುತ್ತುವರಿದು ಬಂಧಿಸಲಾಗಿದೆ. ಅಧಿಕಾರಿಯ ವಿರುದ್ದ ಪೊಲೀಸ್ ಠಾಣೆಗೆ ದೂರು ಇನ್ನು ಲಂಚ ಪಡೆದು ಸಿಕ್ಕಿ ಬೀಳುವಾಗ ತಪ್ಪಿಸಿಕೊಂಡು ಹೋಗಿದ್ದು, ಪೊಲೀಸರ ಮೇಲೆ ಹಲ್ಲೆ ಮತ್ತು ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆದ ಆರೋಪದ ಮೇಲೆ ಮಹಾಂತೇಗೌಡ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.