ಕರ್ತವ್ಯಲೋಪ ಶಿಕ್ಷಕ ಸೇವೆಯಿಂದ ಅಮಾನತ್…
ಶಾಲೆಗೆ ಚಕ್ಕರ್ ಹಾಕುವ ಶಿಕ್ಷಕರಿಗೆ ಇದು ಸರಿಯಾದ ಶಿಕ್ಷೆ..
ಕಲಬುರಗಿ: ತಮ್ಮ ವೇತನದ ಅಲ್ಪ ಮೊತ್ತವನ್ನು ಕೊಟ್ಟು ಮತ್ತೊಬ್ಬರಿಂದ ಪಾಠ ಮಾಡಿಸುತ್ತಿದ್ದ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಲಿ ನಾಯಕ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕೊಲ್ಲೂರ್ ಎಂಬುವವರನ್ನು ಕರ್ತವ್ಯಲೋಪ ಆರೋಪದಡಿ ಸೇವೆಯಿಂದ ಇಂದು ಅಮಾನತು ಮಾಡಿ ಆದೇಶ ನೀಡಲಾಗಿದೆ.
ಶಿಕ್ಷಕ ಮಹೇಂದ್ರ ಕೊಲ್ಲೂರ್ ತಮ್ಮ ಬದಲಾಗಿ ಯುವತಿಯೊಬ್ಬಳಿಗೆ ಸ್ಯಾಲರಿ ನೀಡಿ ಮಕ್ಕಳಿಗೆ ಪಾಠ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಭಾಲಿ ನಾಯಕ್ ತಾಂಡಾದಲ್ಲಿ ಒಂದರಿಂದ ಐದನೇ ತರಗತಿವರಗೆ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಶಾಲೆಯಲ್ಲಿ 18 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಇಬ್ಬರು ಶಿಕ್ಷಕರಿದ್ದಾರೆ. ಅದರಲ್ಲಿ ಮಹೇಂದ್ರ ಕೊಲ್ಲೂರ್ ಕೂಡಾ ಓರ್ವ ಶಿಕ್ಷಕರು.
ಆದ್ರೆ ಇವರು ತಾವು ಮಾಡಬೇಕಾದ ಕೆಲಸವನ್ನು ಪದವಿ ಪಾಸಾದ ಯುವತಿಯಿಂದ ಮಾಡಿಸುತ್ತಿದ್ದರು. ಇದಕ್ಕೆ ಮಾಸಿಕ 6 ಸಾವಿರ ಹಣ ಕೊಡುತ್ತಿದ್ದರು ಎಂದು ಸ್ಥಳೀಯರು ಆರೋಪಿದ್ದರು.
ಮಹೇಂದ್ರ ಕೊಲ್ಲೂರ್ ಅವರು ಕಳೆದ 20 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭಾಲಿ ನಾಯಕ್ ತಾಂಡಾದಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಅವರಿಗೆ ಕೆಲ ಆರೋಗ್ಯ ಸಮಸ್ಯೆಗಳು ಇದ್ದುದರಿಂದ ಕಳೆದ ಐದಾರು ತಿಂಗಳಿನಿಂದ ಯುವತಿಗೆ ಪಾಠ ಮಾಡುವ ಜವಾಬ್ದಾರಿ ನೀಡಿ, ಅವಳಿಗೆ ಪ್ರತಿ ತಿಂಗಳು ಆರು ಸಾವಿರ ಹಣ ನೀಡ್ತಿದ್ದರು ಎಂಬ ದೂರು ಸ್ಥಳೀಯರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹೋಗಿತ್ತು