ಸರಕಾರಿ ಶಾಲೆಯ ಶಿಕ್ಷಕನ ಮೇಲೆ ಪೋಕ್ಸೋ ಪ್ರಕರಣ ದಾಖಲು!!
ಮಕ್ಕಳಿಗೆ ಹೋಮ್ ವರ್ಕ್ ಕೋಡುವ ಮುನ್ನ ಈ ವರದಿ ನೋಡಿ…
ತುಮಕೂರು: ವಿದ್ಯಾರ್ಥಿಗಳಿಗೆ ಅತಿಯಾದ ಹೋಮ್ ವರ್ಕ್ ಕೊಟ್ಟು ಪೂರ್ಣ ಮಾಡದಿದ್ದರೆ ಕಿರುಕುಳ ಕೊಡುತ್ತಿದ್ದ ಗಣಿತ ಶಿಕ್ಷಕನ ಮೇಲೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸ್ ಪ್ರಕರಣ ದಾಖಲಾದ ಘಟನೆ ನಡೆದಿದೆ. ತಾಲೂಕಿನ ಗೋಡೆಕೆರೆ ಸರ್ಕಾರಿ ಶಾಲೆಯ ಗಣಿತ ಶಿಕ್ಷಕ ಹೆಚ್.ಎಸ್ ರವಿ ಎಂಬಾತ ಅತಿಯಾದ ಹೋಮ್ ವರ್ಕ್ ಕೊಟ್ಟು, ವರ್ಕ್ ಪೂರ್ಣ ಮಾಡದೇ ಇದ್ದರೆ ಕಿರುಕುಳ ಕೊಡುತ್ತಿದ್ದನಂತೆ. ಈ ಹಿನ್ನಲೆ ಮಕ್ಕಳು ಪೋಷಕರ ಬಳಿ ‘ಶಿಕ್ಷಕರು ಕಿರುಕುಳ ಕೊಡುತ್ತಾರೆ ಶಾಲೆಗೆ ಹೋಗುವುದಿಲ್ಲವೆಂದು ಹೇಳಿಕೊಂಡಿದ್ದಾರೆ. ಕೂಡಲೇ ಪೋಷಕರು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.