ಹುಬ್ಬಳ್ಳಿ:
ಇಂದು ಬೆಳಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಶ್ರೀಮತಿ ವೀಣಾ ಬರದ್ವಾಡ ಅವರಿಗೆ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ . ಲಿಂಗರಾಜ ಅಂಗಡಿ ಅಧ್ಯಕ್ಷರು ಕನ್ನಡ ಸಾಹಿತ್ಯ ಧಾರವಾಡ ಇವರ ನೇತೃತ್ವದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.
ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ನೀಡಲು ವಿನಂತಿಸಲಾಯಿತು. ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಗೆ ಸ್ವಂತ ಕಟ್ಟಡ ಇಲ್ಲದೆ ಸಾಹಿತ್ಯಿಕ ಕಾರ್ಯಕ್ರಮ ಮಾಡಲು ತೊಂದರೆ ಆಗುತ್ತದೆ. ಆದ್ದರಿಂದ ಮಹಾನಗರ ಪಾಲಿಕೆಯ ಯಾವುದಾದರೂ ಒಂದು ತಾತ್ಕಾಲಿಕ ಕೋಣೆ ಕೊಡಲು ವಿನಂತಿಸಿದಾಗ , ಮಾನ್ಯ ಮಹಾಪೌರರು ಪರಿಶೀಲನೆ ಮಾಡಿ ಸ್ಥಳ ಅಥವಾ ಕಟ್ಟಡ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಅದೇ ರೀತಿ ಉಪ ಮಹಾಪೌರರಿಗೆ ವಿನಂತಿಸಿದಾಗ ಅವರು ಆಶ್ವಾಸನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಉಪಮಹಾಪೌರರಿಗೆ ಸನ್ಮಾನ ಮಾಡಲಾಯಿತು. ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ ಎಸ್ ಕೌಜಲಗಿ, ಪ್ರೊ . ಕೆ ಎಸ್ ಆದಪ್ಪನವರ, ಚನ್ನಬಸಪ್ಪ ಧಾರವಾಡ ಶೆಟ್ಟರ್ , ರಮೇಶ್ ಅಂಗಡಿ, ವೆಂಕಟೇಶ ಮರೆಗುದ್ದಿ, ಉದಯಚಂದ ದಿಂಡವಾರ , ಹುಬ್ಬಳ್ಳಿ ತಾಲೂಕು ಕಸಾಪ ಅಧ್ಯಕ್ಷ ವಿರೂಪಾಕ್ಷ ಕಟ್ಟಿಮನಿ, ಧಾರವಾಡ ತಾಲೂಕು ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್, ವಿದ್ಯಾ ವಂಟಮುರಿ, ಸಿದ್ದಮ್ಮ ಅಡವೆನ್ನವರ, ರಾಧಾ ದೇಸಾಯಿ, ಎಮ್ ಪಿ ಕುಂಬಾರ, ಸುನಂದಾ ಶ್ಯಾಗೋಟಿ, ರೇಣುಕಾ ಗೆಜ್ಜಿಹಳ್ಳಿ, ಮುಂತಾದವರು ಉಪಸ್ಥಿತರಿದ್ದರು