ಈ ಶಿಕ್ಷಕ ಶಾಲೆಗೆ ಚಕ್ಕರ!! ಸರಕಾರಿ ಕೆಲಸ ದೇವರ ಕೆಲಸ ಆದ್ರೆ ಇವರು ಮಾಡೋದು….
ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಿಕ್ಷಕನ ಮೇಲೆ ಕ್ರಮ!! ಏನಿದು ಪ್ರಕರಣ ನೀವೆ ನೋಡಿ..
ಕಲಬುರಗಿ:
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ ತಮ್ಮ ಪರವಾಗಿ ಪಾಠ ಮಾಡಲು ಮಹಿಳೆಯನ್ನು ನೇಮಿಸಿಕೊಂಡಿದ್ದು, ಇದಕ್ಕಾಗಿ ಶಿಕ್ಷಕ ಆಕೆಗೆ ಮಾಸಿಕ 6ಸಾವಿರ ರೂ. ಅನ್ನು ನೀಡುತ್ತಿದ್ದಾನೆ.ಆರೋಪ ಹೊತ್ತಿರುವ ಶಿಕ್ಷಕ ವಾಪಸ್ ಉದ್ಯೋಗಕ್ಕೆ ಬರುತ್ತೇನೆ ಎಂದು ಹೇಳಿದ್ದು, ಶಿಕ್ಷಣಾಧಿಕಾರಿಗಳು ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ತನ್ನ ಬದಲು ಬೇರೆ ಶಿಕ್ಷಕಿಯನ್ನು ನೇಮಿಸಿದ ಶಿಕ್ಷಕ ಮಹೇಂದ್ರ ಕುಮಾರ್ ಎಂದು ಗೊತ್ತಾಗಿದ್ದು, ಇವರು ವಾರಕ್ಕೆ ಎರಡು ದಿನ ಮಾತ್ರ ಶಾಲೆಗೆ ಮಹೇಂದ್ರ ಕುಮಾರ್ ಆಗಮಿಸುತ್ತಿದ್ದು, ಕೇವಲ ಹಾಜರಾತಿ ನೋಂದಣಿಗೆ ಸಹಿ ಹಾಕಿ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಕಲಬುರಗಿಯ ವಾಡಿ ಸಮೀಪದ ಬಾಳಿನಾಯ್ಕ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆ ಇದಾಗಿದ್ದು, ಇಲ್ಲಿ ೨೫ ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರಿದ್ದಾರೆ. ಮಹೇಂದ್ರ ಕುಮಾರ್ ಅವರನ್ನು ಹೊರತುಪಡಿಸಿ ಶಾಲೆಯ ಮುಖ್ಯಶಿಕ್ಷಕ ಅಯ್ಯಪ್ಪ ಗುಂಡಗುರ್ತಿ ಮಾತ್ರ ಶಾಲೆಯಲ್ಲಿದ್ದಾರೆ. ಮಹೇಂದ್ರ ಕುಮಾರ್ ಅವರ ನಿರಂತರ ಗೈರು ಬಗ್ಗೆ ಪೋಷಕರು ಮುಖ್ಯ ಶಿಕ್ಷಕರಿಗೆ ಅನೇಕ ದೂರುಗಳನ್ನು ನೀಡಿದ್ದರು. ಆದರೆ, ಮಹೇಂದ್ರ ಕುಮಾರ್ ವರ್ತನೆಯಲ್ಲಿ ಯಾವುದೇ ಸುಧಾರಣೆಯಾಗಿದ್ದಿಲ್ಲ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆ ಶಿಕ್ಷಕನ ವರ್ತನೆ ಬಗ್ಗೆ ಡಿಡಿಪಿಐಗೆ ದೂರು ನೀಡಲು ಪೋಷಕರು ಸಿದ್ಧತೆ ನಡೆಸಿದ್ದು, ಆಗ ಮಹೇಂದ್ರ ಕುಮಾರ್ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಶಾಲೆಗೆ ತನ್ನ ಬದಲಾಗಿ ಶಿಕ್ಷಕಿಯನ್ನು ನೇಮಿಸಿ, ಅವರಿಗೆ ಮಾಸಿಕ 6ಸಾವಿರ ರೂ. ನೀಡುತ್ತಿದ್ದಾರೆ.ಮಾದ್ಯಮ ಸ್ನೇಹಿತರು ಶಾಲೆಗೆ ತೆರಳಿದ್ದಾಗ ಶಿಕ್ಷಕಿ ಮಕ್ಕಳಿಗೆ ಪಾಠ ಮಾಡುತ್ತಿರುವುದು ಕಂಡುಬಂತು. ಆಕೆಯನ್ನು ಪ್ರಶ್ನಿಸಿದಾಗ ಮಹೇಂದ್ರ ಕುಮಾರ್ ನೇಮಕ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆ ಎಂದು ಕಂಡು ಬಂದಿದೆ.