- ಕಳೆದ ವಾರ ಮಂಡನೆಯಾದ ಸಿಎಮ್ ಸಿದ್ದರಾಮಯ್ಯನವರ ೧೪ ನೇ ಬಜೆಟ್ ನಲ್ಲಿ ಓಪಿಎಸ್ ಕುರಿತಂತೆ ಯಾವುದೇ ಅನುದಾನವನ್ನು ಸರಕಾರ ಮೀಸಲಿಟ್ಟಲ್ಲ.ಬಜೆಟ್ ನಲ್ಲಿ ಯಾವುದೇ ಭರವಸೆಯನ್ನು ನೀಡಿಲ್ಲ..ಇದು ಸರಕಾರಿ ನೌಕರರಿಗೆ ತೀವ್ರ ಅಸಮಾಧಾನವನ್ನು ತರಿಸಿದೆ..
ಈ ಕುರಿತು ಪಬ್ಲಿಕ್ಟುಡೆಯೊಂದಿಗೆ ಮಾತನಾಡಿದ ಎನ್ಪಿಎಸ್ ನೌಕರರ ಸಂಘದ ರಾಜ್ಯಾದ್ಯಕ್ಷ ಶಾಂತಾರಾಮಾ ತೇಜ್, ನಮ್ಮ ಸರಕಾರಿ ನೌಕರರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಓಟ್ ಫಾರ್ ಓಪಿಎಸ್ ಅಭಿಯಾನವನ್ನು ಮಾಡಿದ್ದೇವೆ..ನಮಗೆ ಈ ಸರಕಾರದ ಮೇಲೆ ನಂಬಿಕೆ ಇದೆ. ಎರಡು ತಿಂಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ನಮ್ಮ ಸರಕಾರಿ ನೌಕರರಿಗೆ ಓಪಿಎಸ್ ಜಾರಿ ಮಾಡುವ ಭರವಸೆ ಇದೆ ಎಂದರು..
ರಾಜ್ಯ ಸರಕಾರ ಮೋದಲು ಐದು ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡುವುದರಲ್ಲಿ ನಿರತವಾಗಿದೆ. ಈ ಕಾರ್ಯ ಮುಗಿದ ತಕ್ಷಣವೇ ನಮ್ಮ ಸರಕಾರಿ ನೌಕರರಿಗೆ ಓಪಿಎಸ್ ಜಾರಿ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದು ತಿಳಿಸಿದರು.ಇತ್ತೀಚೆಗೆ ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿಯಾದ ಸಂದರ್ಭದಲ್ಲೂ ನಾವು ಕೂಡಲೇ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುವಂತೆ ವಿನಂತಿಸಿದ್ದೇವೆ ಎಂದರು..
ಹಳೆ ಪಿಂಚಣಿ ಯೋಜನೆ ಸಂಬಂಧಿಸಿದಂತೆ ಸರಕಾರ ಯಾವುದೇ ಸಮಿತಿ ರಚನೆ ಮಾಡುವುದನ್ನು ನಾವು ವಿರೋಧಿಸುತ್ತೇವೆ, ಛತ್ತಿಸಗಡ ಸೇರಿದಂತೆ ಕೆಲ ರಾಜ್ಯಗಳಲ್ಲಿ ಯಾವುದೇ ಸಮಿತಿ ರಚನೆ ಮಾಡದೇ ನೇರವಾಗಿ ಓಪಿಎಸ್ ಜಾರಿ ಮಾಡಲಾಗಿದೆ.ಹಾಗೇ ನಮ್ಮ ರಾಜ್ಯ ಸರಕಾರವು ಕೂಡ ಕ್ಯಾಬಿನೆಟ್ ನಲ್ಲಿ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡಬೇಕು, ನಮಗೆ ಯಾವುದೇ ಕಮಿಟಿ ಮೇಲೆ ಭರವಸೆ ಇಲ್ಲ, ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡಬೇಕೆಂಬ ಒಂದೇ ನಿರ್ಣಯವನ್ನು ಸರಕಾರ ತೆಗೆದುಕೊಳ್ಳಬೇಕು ಎಂದರು…
ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ನಮ್ಮ ಸರಕಾರಿ ನೌಕರರೇ ಸರಕಾರದ ಮೇಲೆ ಒತ್ತಡ ತಂದು ಕಮಿಟಿ ಮಾಡುವಂತೆ ಸರಕಾರಕ್ಕೆ ಸಲಹೆ ನೀಡಿದ್ದರು,ಹೀಗಾಗಿ ಓಪಿಎಸ್ ಜಾರಿ ಮಾಡಲು ವಿಳಂಬವಾಯಿತು ಎಂದು ಶಾಂತಾರಾಮ್ ತೇಜ ಅವರು ಹೇಳಿದರು….
ಹಳೆ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಂಬಂಧಪಟ್ಟ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡ ಮಾಜಿ ಶಾಸಕ ರೇಣುಕಾಚಾರ್ಯ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಪಕ್ಷ ಸೋಲಲು ಸರಕಾರಿ ನೌಕರರ ಪಾತ್ರ ಮುಖ್ಯವಾದದ್ದು, ಏಕೆಂದರೆ ಅವರು ಓಪಿಎಸ್ ಜಾರಿ ಮಾಡುವಂತೆ ಮನವಿ ನೀಡಿದ್ದರು, ನಾವು ಓಪಿಎಸ್ ಜಾರಿ ಮಾಡದೇ ಇರುವುದು ಕೂಡ ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದರು…
ಒಟ್ಟಿನಲ್ಲಿ ಸರಕಾರಿ ನೌಕರರು ತಮ್ಮ ಸೇವಾ ಭದ್ರತೆಗಾಗಿ, ನಿವೃತ್ತಿ ನಂತರದ ಜೀವನವನ್ನು ಕಳೆಯಲು ನಮಗೆ ಓಪಿಎಸ್ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.ನಮ್ನ ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೊಡೋಣ…