ಸರಕಾರಿ ಶಾಲೆಯ ಸಹ ಶಿಕ್ಷಕ:ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಸಂದ್ರಪ್ಪ ನಿಧನ.
ರಾಜ್ಯದ ಸಮಸ್ತ ಶಿಕ್ಷಕ ವೃಂದ, ಅಧಿಕಾರಿಗಳು,ಶಾಲೆಯ ಸಿಬ್ಬಂದಿ ವರ್ಗ ಸಂತಾಪ ಸೂಚಿಸದ್ದಾರೆ…
ಚಿತ್ರದುರ್ಗ ತಾಲೂಕಿನ ದಂಡಿನಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಜಾನಪದ ಹಾಡುಗಾರ ಕಾಲ್ಕೆರೆ ಚಂದ್ರಪ್ಪ (51) ರವರು ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.9ರ ಭಾನುವಾರ ನಿಧನರಾಗಿದ್ದಾರೆ.
ಮೃತರು ಪತ್ನಿ, ಒರ್ವ ಪುತ್ರ , ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿದ್ದ ಚಂದ್ರಪ್ಪ ನವರು ವೃತ್ತಿಯಿಂದ ಶಿಕ್ಷಕರಾಗಿ ಪ್ರವೃತ್ತಿಯಿಂದ ಜಾನಪದ ಹಾಡುಗಾರರಾಗಿ ಶಿಕ್ಷಕರ ಸಭೆ ಸಮಾರಂಭಗಳಲ್ಲಿ ತಮ್ಮ ಹಾಡುಗಳಿಂದ ಗಮನ ಸೆಳೆಯುತ್ತಿದ್ದ ಅದ್ಭುತ ಪ್ರತಿಭೆ ಆಗಿದ್ದರು.
ಮೃತರ ಅಂತ್ಯಸಂಸ್ಕಾರ ಹೊಳಲ್ಕೆರೆ ತಾಲೂಕಿನ ಕಾಲ್ಕೆರೆ ಗ್ರಾಮದಲ್ಲಿ ನಡೆದಿದೆ..
ಚಿತ್ರದುರ್ಗದ ಸಮಸ್ತ ಶಿಕ್ಷಕ ವೃಂದದವರು, ಜಿಲ್ಲೆಯ ಕಲಾವಿದರ ವೇದಿಕೆ ಸೇರಿಂದತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ದಂಡಿನ ಕುರುಬರಹಟ್ಟಿ ಶಾಲಾ ವೃಂದ ಮತ್ತು ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.