ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಉತ್ತೆಜನಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ ಎಮ್ ಮುಂದಿನಮನಿ.
ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಯಿಂದ ಮತ್ತು ಶಾಲೆಯ ವರ್ಗ ಕೋಣೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿರಹಟ್ಟಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ ಎಮ್ ಮುಂದಿನಮನಿ ಹೇಳಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಛಬ್ಬಿ ತಾಂಡಾ ಶಾಲೆಯಲ್ಲಿ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕ / ಶಿಕ್ಷಕಿಯರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಈ ಕೊರತೆಯನ್ನು ನೀಗಿಸಲು 111 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.
ನೇಮಕವಾಗಿರುವ ಅತಿಥಿ ಶಿಕ್ಷಕರು. Tch, D ed, B ed, ತರಬೇತಿಯನ್ನು ಪಡೆದು ಬಹಳ ವರ್ಷಗಳ ಕಾಲ ತರಗತಿ ಪ್ರಕ್ರಿಯೆಯಿಂದ ದೂರ ಇದ್ದವರಾಗಿತ್ತಾರೆ.
ಪ್ರಯುಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ
ನೇಮಕಗೊಂಡಿರುವ ಸದರಿ ಅತಿಥಿ ಶಿಕ್ಷಕ /ಶಿಕ್ಷಕಿಯರಿಗೆ ತರಗತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಎರಡು ವಿಭಾಗಗಳಾಗಿ ಮಾಡಲಾಗಿ 1ರಿಂದ 3ನೇ ತರಗತಿ ನಲಿಕಲಿ ವಿಭಾಗಕ್ಕೂ ಹಾಗೂ 4 ರಿಂದ 7/8 ಮತ್ತು 8 ರಿಂದ 10ನೇ ತರಗತಿಗೆ ಬೋಧಿಸುವ ಶಿಕ್ಷಕ-ಶಿಕ್ಷಕಿಯರನ್ನು ತಂಡವಾರು ವಿಭಾಗಿಸಿ ವಿಷಯವಾರು ತರಬೇತಿಯನ್ನು ತಾಲೂಕಿನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಆಯೋಜಿಸಲಾಗಿದೆ.
ಹಿಂದಿನ ಎರಡು ವರ್ಷಗಳಲ್ಲಿ ಶಾಲಾ ಪ್ರಕ್ರಿಯೆಯು ಕ್ರಮವಾಗಿ ನಡೆಯದೇ ಇದ್ದ ಪ್ರಯುಕ್ತ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಹಿನ್ನಡೆ & ನಷ್ಟವನ್ನು ಭರಿಸಲು ಶೈಕ್ಷಣಿಕ ಕಾರ್ಯದ ಮುನ್ನಡೆಗೆ ನಮ್ಮ ಶಿಕ್ಷಕರೊಂದಿಗೆ ಸಹಕಾರಿಯಾಗುವ ದೃಷ್ಟಿಯಿಂದ ಸದರಿ ಅತಿಥಿ ಶಿಕ್ಷಕ ಶಿಕ್ಷಿಕರಿಗೆ ತರಬೇತಿಯನ್ನು ಆಯೋಜಿಸಿ ಅವರಿಗೆ ಆತ್ಯವಶ್ಯಕವಾದ ವಿದ್ಯಾ ಪ್ರವೇಶ,ನಲಿ-ಕಲಿ ಮತ್ತು ಕಲಿಕಾ ಚೇತರಿಕೆ ಉಪಕ್ರಮ-2023ರ ತರಬೇತಿ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಿ ಆರ್ ಪಿ ಗಳಾದ ಐ ಎಸ್ ಮೆಡ್ಲೇರಿ, ಎಮ್ ಎನ್ ಭರಮಗೌಡರ, ಬಿ ಎಮ್ ಯರಗುಪ್ಪಿ, ವಿ ಎಚ್ ದೀಪಾಳಿ ಮತ್ತು ಸಿ ಆರ್ ಪಿ ಗಳಾದ ಆರ್ ಮಹಾಂತೇಶ, ಎನ್ ಎನ್ ಸಾವಿರಕುರಿ, ಶ್ರೀಮತಿ ಗೀತಾ ಸರ್ವಿ, ಶ್ರೀಮತಿ ಕೆ ಪಿ ಕಂಬಳಿ, ಶ್ರೀಮತಿ ಗಾಯತ್ರಿ ಹಳ್ಳದ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ವಾಯ್ ಬಿ ಪಾಟೀಲ ಹಾಗೂ ಶಾಲೆಯ ಪ್ರಧಾನ ಗುರು ಮಾತೆಯವರಾದ ವಿ ಎ ನರಗುಂದ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.