ಟಿಕೆಟ್ ದರ ಶೇ 25 ರಷ್ಟು ಕಡಿತಗೊಳಿಸಿದ ವಂದೇ ಭಾರತ್, ಸೇರಿದಂತೆ ವಿವಿಧ ರೈಲ್ವೆ…
ಭಾರತೀಯ ರೈಲ್ವೆ ತನ್ನ ಕೆಲವು ರೈಲುಗಳ ಪ್ರಯಾಣ ದರಗಳನ್ನು ಗಣನೀಯವಾಗಿ ಕಡಿತಗೊಳಿಸಿದೆ. ಪ್ರತಿ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಗ್ಸಿಕ್ಯುಟಿವ್ ಕ್ಲಾಸ್ ಭೋಗಿಗಳಲ್ಲಿ ಪ್ರಯಾಣದರವನ್ನು ಕಡಿಮೆಗೊಳಿಸಿದೆ. ವಿಸ್ತಡೋಮ್ ಕೋಚ್ಗಳಲ್ಲಿ ಶೇ. 25 ರ ವರೆಗೂ ಟಿಕೆಟ್ ಬೆಲೆ ಕಡಿಮೆಗೊಳಿಸಲಾಗಿದೆ ಎಂದು ತಿಳಿಸಲಾಗಿದ್ದು,ಜನರ ಟಿಕೆಟ್ ಗಳಿಗಿರುವ ಬೇಡಿಕೆಗೆ ಅನುಸಾರವಾಗಿ ಟಿಕೆಟ್ ಬೆಲೆ ಇಳಿಕೆ ಪ್ರಮಾಣ ಇರಲಿದೆ ಎಂದು ಬೋರ್ಡ್ ಸ್ಪಷ್ಟಪಡಿಸಿದೆ.
ಮೂಲ ದರದ 25% ವರೆಗೂ ಡಿಸ್ಕೌಂಟ್ ಇರುತ್ತದೆ. ರಿಸರ್ವೇಶನ್ ಶುಲ್ಕ, ಸೂಪರ್ ಫಾಸ್ಟ್ ಸರ್ ಚಾರ್ಜ್, ಜಿಎಸ್ಟಿ ಇತ್ಯಾದಿ ದರ ಪ್ರತ್ಯೇಕವಾಗಿರುತ್ತದೆ. ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಡಿಸ್ಕೌಂಟ್ ನೀಡಲಾಗುತ್ತದೆ. ಎಂದು ಮಂಡಳಿ ಪ್ರಕಟಣೆಯಲ್ಲಿ ಹೇಳಲಾಗಿದೆ.
ತತ್ ಕ್ಷಣವೇ ಈ ರಿಯಾಯಿತಿ ದರಗಳು ಅನ್ವಯವಾಗುತ್ತದೆ.ಈಗಾಗಲೇ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಇದು ಅನ್ವಯವಾಗುವುದಿಲ್ಲ. ಎಂದು ಬೋರ್ಡ್ ಸ್ಪಷ್ಟಪಡಿಸಿದೆ. ರಜೆ ಅಥವಾ ಹಬ್ಬದ ದಿನಗಳಲ್ಲಿ ಬಿಡಲಾಗುವ ವಿಶೇಷ ರೈಲುಗಳ ಪ್ರಯಾಣಕ್ಕೂ, ಈ ರಿಯಾಯಿತಿ ಸಿಗುವುದಿಲ್ಲ ಎಂದು ಹೇಳಲಾಗಿದೆ.