ಮಾಜಿ ಶಾಸಕ ಸಿ.ಎಮ್ .ನಿಂಬಣ್ಣವರ ನಿಧನಕ್ಕೆ ಡಾ. ಲಿಂಗರಾಜ ಅಂಗಡಿ ಅವರ ತೀವ್ರ ಸಂತಾಪ….
ಹುಬ್ಬಳ್ಳಿ..
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಕಲಘಟಗಿಯ ಮಾಜಿ ಶಾಸಕರಾಗಿದ್ದ ಸಿ.ಎಮ್ .ನಿಂಬಣ್ಣವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ , ಸಜ್ಜನಿಕೆಯ ವ್ಯಕ್ತಿತ್ವದ ನಾಯಕರಾಗಿದ್ದ ಸಿ.ಎಂ.ನಿಂಬಣ್ಣವರ ನಿಧನದ ಸುದ್ದಿ ತೀವ್ರ ಆಘಾತ ತಂದಿದೆ. ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ನಿಂಬಣ್ಣವರು,ಕಲಘಟಗಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಅಲ್ಲಿಯ ಜನತೆಯ ಮೆಚ್ಚಿನ ಜನಪ್ರತಿನಿಧಿಯಾಗಿದ್ದರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ತುಂಬಾ ಸಹಾಯ ಸಹಕಾರ ನೀಡಿದ್ದರು. ಅವರ ಸರಳತೆ, ನಿಸ್ವಾರ್ಥ ಸೇವಾ ಮನೋಭಾವ ಹಾಗೂ ಜನರ ಬಗೆಗಿನ ಅವರ ಕಳಕಳಿ ಯುವಪೀಳಿಗೆಗೆ ಮಾದರಿ ಎಂದು ಡಾ. ಲಿಂಗರಾಜ ಅಂಗಡಿ ಅವರು ತಮ್ಮ ಶೋಖ ವ್ಯಕ ಪಡಿಸಿ ಮೃತರ ಕುಟುಂಬಕ್ಕೆ ದು:ಖ ಸಹಿಸುವ ಶಕ್ತಿ ಸಿಗಲಿ ಎಂದು ತಮ್ಮ ಸಾಂತ್ವನವನ್ನು ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ.