ವಿಶೇಷ ವರದಿ: ಬಸವರಾಜ ಪಾಟೀಲ.
ಸರಕಾರಿ ನೌಕರರಿಗೆ ರಾಜ್ಯ ಬಜೆಟ್ ನಿರಾಸೆ ಮೂಡಿಸಿದೇಯಾ?
ಬಜೆಟ್ ಕುರಿತು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಏನು ಹೇಳಿದ್ದಾರೆ ನೋಡಿ..
ಸಿಎಮ್ ಹಾಗೂ ಡಿಸಿಎಮ್ ಅವರು ವೇತನ ಆಯೋಗ ಜಾರಿ ಮಾಡುವ ಇಚ್ಛಾಶಕ್ತಿ ಇದೇಯಾ?
ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಸಿಎಮ್ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಭಾರಿ ನಿರಾಸೆ ಮೂಡಿಸಿದೆ. ಸರಕಾರಿ ನೌಕರರ ಪರವಾಗಿ ಒಂದೇ ಹೊಸ ಯೋಜನೆ ಆಗಲಿ ಅಥವಾ ಹಳೆ ಯೋಜನೆಗಳಿಗೆ ಅನುದಾನವನ್ನು ಮೀಸಲಿಟ್ಟಿಲ್ಲ.. ಇದು ಸರಕಾರಿ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ..
ರಾಜ್ಯದ ಸಿಎಮ್ ಹಾಗೂ ಡಿಸಿಎಮ್ ಸೇರಿದಂತೆ ಎಲ್ಲ ಸಚಿವರಿಗೆ ಓಪಿಎಸ್ ಹಾಗೂ ಏಳನೇ ವೇತನ ಜಾರಿ ಮಾಡುವಂತೆ ಮನವಿ ನೀಡಲಾಗಿತ್ತು. ಆದ್ರೆ ಇದು ಕೇವಲ ಕಳೆದ ಬಿಜೆಪಿ ಸರಕಾರದ ಹಾಗೆ ಮನವಿ ಮಾತ್ರ ಸೀಮಿವಾಯಿತೆ ಎಂಬ ಪ್ರಶ್ನೇಗಳು ನೌಕರರಲ್ಲಿ ಕಾಡುತ್ತಿವೆ..
ಬಸವರಾಜ ಬೊಮ್ಮಾಯಿ ನೇತೃತ್ವದಲ ಸರಕಾರ ಕೂಡ ಬಜೆಟ್ ನಲ್ಲಿ ವೇತನ ಆಯೋಗದ ಕುರಿತು ಯಾವುದೇ ಘೋಷಣೆ ಆಗಲಿ ಅನುದಾನವನ್ನು ಘೋಷಣೆ ಮಾಡಿರಲಿಲ್ಲ. ನಂತರ ದಿನಗಳಲ್ಲಿ ವೇತನ ಆಯೋಗವನ್ನು ಘೋಷಣೆ ಮಾಡಿತ್ತು ಹಾಗೂ 17 ಪ್ರತಿಷತ ವೇತನನ್ನು ಈಗಾಗಲೇ ಹೆಚ್ಚು ಮಾಡಲಾಗಿದೆ..
ಸರಕಾರದ ಮೇಲೆ ನಮಗೆ ಭರವಸೆ ಇದೆ, ಏಳನೇ ವೇತನ ಆಯೋಗ ಶಿಘ್ರವೇ ತನ್ನ ವರದಿಯನ್ನು ಸರಕಾರಕ್ಕೆ ನೀಡಲಿದೆ. ರಾಜ್ಯದ ನೌಕರರು ಬೇಸರ ಅಸಮಾಧಾನವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ ಎಂದು ಸರಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು..ಹೊಸ ಸರಕಾರ ಈಗಷ್ಟೇ ತನ್ನ ಕಾರ್ಯಾರಾಂಭ ಮಾಡಿದೆ.ಹಾಗೂ ಸದ್ಯ ಮಂಡಿಸಿರುವುದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ.ಇದು ಮದ್ಯಂತರ ಬಜೆಟ್ ಆಗಿದ್ದು, ಸರಕಾರದ ಮೇಲೆ ನಮಗೆ ವಿಶ್ವಾಸವಿದೆ ಆದಷ್ಟು ಬೇಗ ಏಳನೇ ವೇತನವನ್ನು ನಮ್ಮ ನೌಕರರು ಪಡೆಯಲಿದ್ದಾರೆ ಎಂದು ಷಡಕ್ಷರಿಯವರು ವ್ಯಕ್ತಪಡಿಸಿದರು..
ಹತ್ತನೆಯ ತರಗತಿವರೆಗೆ ಮೊಟ್ಟೆ ನೀಡುವುದನ್ನು ವಿಸ್ತರಿಸಿರುವುದು,ಸಸ್ಯ ಶಾಮಲ ಕಾರ್ಯಕ್ರಮ, ಶಾಲಾ ಅನುದಾನ ಹೆಚ್ಚಿಸಿರುವುದು ಸ್ವಾಗತಾರ್ಹ. ಆದರೆ ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿತ್ತು. ಆ ಕೆಲಸವಾಗಿಲ್ಲ. ಎನ್ಪಿಎಸ್ ಕೈಬಿಟ್ಟು ಒಪಿಎಸ್ ಜಾರಿಗೊಳಿಸಬೇಕಿತ್ತು. ಆ ಕೆಲಸವಾಗಿಲ್ಲ. ಏಳನೆಯ ವೇತನ ಆಯೋಗ ಪಡೆದು ಘೋಷಿಸದಿರುವುದು ನೌಕರ ವರ್ಗಕ್ಕೆ ಬೇಸರ ಮೂಡಿಸಿದೆ.
ಅಶೋಕ ಸಜ್ಜನ ಅಧ್ಯಕ್ಷರು, ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ…
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧೀವೇಶನದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಉಪಮುಖ್ಯ ಮಂತ್ರಿಗಳು ವೇತನ ಆಯೋಗ ತನ್ನ ವರದಿ ನೀಡಿದ ತಕ್ಷಣವೇ ವೇತನ ಪರಿಷ್ಕರಣೆ ಆಗಲಿದೆ ಎಂದು ಹೇಳಿದ್ದಾರೆ.
ವೇತನ ಆಯೋಗಕ್ಕೆ ಮತ್ತೊಮ್ಮೆ ಸರಕಾರಿ ನೌಕರರು ನೀಯೋಗದೊಂದಿಗೆ ತೆರಳಿ ತಮ್ಮ ವರದಿಯನ್ನು ನೀಡುವಂತೆ ಒತ್ತಾಯ ಮಾಡಬೇಕಿದೆ.ಸರಕಾರ ತನ್ನ ಮೇಲಿರುವ ಒತ್ತಡವನ್ನು ಅಯೋಗದ ಮೇಲೆ ಹಾಕಿದೆ.