ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಒಂದು ಮನವಿ ಎಲ್ಲಾ ಶಿಕ್ಷಕರ ಪರವಾಗಿ SATS ಬಗ್ಗೆ,
1) ನಾವು SATS ಮಾಡಬೇಕೆಂದರೆ ದಯಮಾಡಿ SATS server fast ಮಾಡಿಸಿ.
2) ದಿನವೆಲ್ಲಾ ಕಂಪ್ಯೂಟರ್ ಮುಂದೆ ಕೂತರು ಒಂದು ಮಗುವಿನ ಮಾಹಿತಿ ಹಾಕುವದಕ್ಕೆ ಆಗುತ್ತಿಲ್ಲ.
3) ಎಷ್ಟೋ ಪ್ರಯತ್ನ ಮಾಡಿದರೂ ಸವ೯ರ್ error ಎಂದು ತೋರಿಸುತ್ತದೆ.
4)ಇಂಟರ್ನೆಟ್ ಸೆಂಟರ್ ಹತ್ತಿರ ಹೋದರೆ SATS ಮಾಡಿಸಬೇಕು ಎಂದು ಕೇಳಿದರೆ ಸಾಕು ಇಲ್ಲ ಆಗುವುದಿಲ್ಲ ಅಂತ ಮುಖಕ್ಕೆ ಹೊಡೆದಂಗೆ ಹೇಳಿ ಕಳಿಸುತ್ತಾರೆ. ಏಕೆಂದರೆ ಅಷ್ಟು ನಿದಾನ ಇದು.
5) ಇನ್ನು ಇಂಟರ್ನೆಟ್ ಸೆಂಟರ್ ಗೆ ಹೋಗಿ ಆನ್ ಮಾಡಿಕೊಂಡು ಕುಳಿತುಕೊಂಡರೆ ನಾವು SATS ಮಾಡಲಿ ಬಿಡಲಿ ಗಂಟೆಗೆ ಇಷ್ಟು ಅಂತ ಹಣವನ್ನು ಕೂಡಲೇಬೇಕು. ಯಾವುದರಲ್ಲಿಎಷ್ಟು ಅಂತ ಖಚ೯ನ್ನ ತೋರಿಸಬೇಕು.
6) ಇನ್ನು ದಯಮಾಡಿ SATS update ಆಗುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರಿಗೆ ತರಬೇತಿ ಕಡ್ಡಾಯವಾಗಿ ನೀಡಿ.
7) ಎಲ್ಲಾ ಶಾಲೆಗಳಿಗೆ ಇಂಟರ್ನೆಟ್, ಹಾಗೂ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಸೌಲಭ್ಯಗಳನ್ನು ನೀಡಿ.
8) ಕ್ಲಸ್ಟರ್ ಗಳಿಗೆ ಒಬ್ಬರನ್ನು SATS ಮತ್ತು ಇನ್ನಿತರ ಶಾಲಾ ಕೆಲಸಗಳನ್ನು ಕಂಪ್ಯೂಟರ್ ಜ್ಞಾನ ವಿರುವ ಒಬ್ಬರನ್ನು ಮಾಡಲು ನೇಮಕ ಮಾಡಿಸಿ.
9) ದಯಮಾಡಿ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಹೊರೆಯನ್ನು ಕಡಿಮೆ ಮಾಡಿಸಿ ಬೋಧನೆ ಮಾಡಲು ಬಿಡಿ.
10) ವರ್ಷ ಪೂರ್ತಿ ಶಾಲೆಯ SATS, text books, u dise, Result, attendance, grade teacher information ಇನ್ನಿತರ ಎಲ್ಲಾ ಕೆಲಸಗಳನ್ನು ಮಾಡಿಸಲು ಸಾವಿರಾರು ರೂಪಾಯಿ ಖರ್ಚು ಆಗುತ್ತದೆ. ಹೇಗೆ ಯಾವ ರೂಪದಲ್ಲಿ ಭರಿಸಬೇಕು.
ಇದರಿಂದ ಎಷ್ಟೋ ಮುಖ್ಯ ಶಿಕ್ಷಕರು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ.
ಇದಕ್ಕೆಲ್ಲಾ ದಯಮಾಡಿ ಪರಿಹಾರ ಕೂಡಿಸಿ ಶಿಕ್ಷಕರಿಗೆ ಸಹ ಶಿಕ್ಷಕರಿಗೆ ನೆಮ್ಮದಿ ಯಿಂದ ಭೋದನೆ ಮಾಡಲು ಅವಕಾಶ ಮಾಡಿಕೂಡಿ.
ಶಿಕ್ಷಕರ ಪರವಾಗಿ
ಪಬ್ಲಿಕ್ ಟುಡೇ ಕಳಕಳಿ.