10% ಕರ್ತವ್ಯ ನಿರ್ವಹಿಸುತ್ತಿರುವ GPT ಶಿಕ್ಷಕರಿಗೆ 90% ಖಾಲಿ ಹುದ್ದೆಗಳಿವೆ.
90% ಇರುವ PST ಶಿಕ್ಷಕರಿಗೆ 10 % ಖಾಲಿ ಹುದ್ದೆಗಳೂ ಇಲ್ಲ.
ಯಾರಿಗಾಗಿ ಈ ವರ್ಗಾವಣೆ?
ಖಾಲಿಯಾದ ಎಲ್ಲಾ ಹುದ್ದೆಗಳನ್ನು GPT ಅಂತ ಮೀಸಲಿಟ್ಟು, ಬೆರಳೆಣಿಕೆಯಷ್ಟು ಖಾಲಿಯಿರುವ PST ಶಿಕ್ಷಕರಿಗೆ ವರ್ಗಾವಣೆಯಾಗುವುದು ಹೇಗೆ ಸಾಧ್ಯ?
ಮೊದಲು C&R ತಿದ್ದುಪಡಿ ಮಾಡಿಸಿ,GPT ಗೆ ಬಡ್ತಿ ಕೊಡಿಸಿದರೆ, 20-25 ಸಾವಿರದಷ್ಟು PST ಶಿಕ್ಷಕರ ಹುದ್ದೆಗಳು ಖಾಲಿಯಾಗುತ್ತವೆ.ನಂತರ ವರ್ಗಾವಣೆ ಮಾಡಿಸಿದರೆ,ಎಲ್ಲರಿಗೂ ಅನುಕೂಲವಾಗುತ್ತದೆ.
ಇಲ್ಲವಾದರೆ ಇದು ವರ್ಗಾವಣೆ ಎಂಬ ನಾಟಕವಾಗುತ್ತದೆ ಅಷ್ಟೇ.
ಮೂಲ ಸಮಸ್ಯೆ ಇರುವುದು C&R ತಿದ್ದುಪಡಿ ಮಾಡಿಸಿ,ಬಡ್ತಿ ಕೊಡುವುದು.ಇದನ್ನು ಮೊದಲು ಮಾಡದೇ,ವರ್ಗಾವಣೆ ಮಾಡುವುದು ವ್ಯರ್ಥ.ಜೊತೆಗೆ PST ಶಿಕ್ಷಕರು ಹೆಚ್ಚುವರಿಯಾಗುತ್ತಿರುತ್ತಾರೆ.
ಇಂತಹ ಪೊಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.ಆದ್ರೆ ಇದರಲ್ಲಿ ಎಷ್ಟು ಸತ್ಯ ಎಂಬುದನ್ನು ಇಲಾಖೆ ಸ್ಪಷ್ಟ ಪಡಿಸಬೇಕಾಗಿದೆ.