ಕಾಕತಾಳೀಯ
ನಿನ್ನ ನಗುಮೊಗ ನೋಡುತ
ಮೈಮರೆಯುವ ಪ್ರೇಮಿ ನಾನಾಗಿರುವೆ
ನೀ ನನಗೆ ಸಿಗಬಾರದೇ
ನನ್ನೆಲ್ಲ ನೋವುಗಳ ಮರೆಯಲು ನಿರೀಕ್ಷಿಸುವ ಈ ಮನ ನಿನ್ನ ನೆನಪಿನಲ್ಲಿ
ನಿನ್ನ ಕಣ್ಣ ಮಿಂಚಲ್ಲಿ ಏನೋ ಸೆಳೆತ
ಆ ಸೆಳೆತ ಕೊನೆಯವರೆಗೂ ನನ್ನೊಡನಿರಬಾರದೇ ಎನುತ
ಏನೇನೋ ಕನಸುಗಳು ಕಾಣುತಿರುವ ನನ್ನ ಮನ
ಆ ಕನಸಲ್ಲಿ ನಿನ್ನ ಜೊತೆ ಕನವರಿಸುವ ಹುಚ್ಚು ಪ್ರೇಮಿ ನಾ
ನೀ ನನಗೆ ಸಿಕ್ಕಿದ್ದೇ ಕಾಕತಾಳೀಯ
ಕನಸಲ್ಲೂ ಕೂಡ ನೀ ನನಗೆ ಸಿಗಬಹುದು ಅನಿಸಿರಲಿಲ್ಲಾ
ಆದರೂ ದೇವರು ನಮ್ಮಿಬ್ಬರ ಸೇರಿಸಿದ
ನಿನ್ನ ಕಂಡಾಗ ನಿರ್ಮಲ ಸ್ವಚ್ಛ ಪ್ರೀತಿ ಮೂಡುವುದು ನನ್ನೊಳು
ನಿನ್ನ ನೆನಪು ಬರಲು ಪೋನ್
ಕೈಗೆತ್ತಿಕೊಂಡ ಸಮಯವದು ಎಂಥ ಖುಷಿ
ನೆನೆದವರ ಮನದಲ್ಲಿ ಅಂತ ಹೇಳ್ತಾರೆ ಹಿರಿಯರು
ಕಾಕತಾಳೀಯವೆಂಬಂತೆ ನಿನ್ನ ಪೋನ್ ಬಂದ ಸಮಯ ನನಗೆ ಆ ಹಿರಿಯ ವಾಣಿಯ ನೆನಪು
ನಾ ನಿರೀಕ್ಷೆ ಮಾಡಿರಲಿಲ್ಲ ಆದರೂ ನಿನ್ನ ಕರೆ
ಬಂದ ಸಮಯ ಸ್ವರ್ಗಕ್ಕೆ ಮೂರೇ ಗೇಣು
ಅಂತಾರೆ ಬಲ್ಲವರು ಆ ಖುಷಿ
ನಿನ್ನೊಡನೆ ಮಾತಾಡಲು
ಮೂಡುತಿಹ ಭಾವನೆ ಏನು ವಿಚಿತ್ರ ಆದರೂ ಸತ್ಯ
ಅದಾವ ಸಮಯ ನನ್ನ ನಿನ್ನ ಪರಿಚಯವಾಯಿತೋ
ಆ ಕ್ಷಣ ನಿನ್ನೊಳು ಅನುರಾಗ ಮೂಡಿಹುದು
ನೀ ಒಂದು ಕ್ಷಣ ವಾದರೂ ಮಾತಾಡದೇ ಹೋದ ದಿನ
ಏನೋ ಕಳೆದು ಕೊಂಡ ಅನುಭವ ಯಾಕೆ ಹೀಗೆ. ?
ಪ್ರೀತಿಯ ಸೆಳೆತ ಪ್ರೇಮದ ಮಿಡಿತ ಬಲವಾಗಿ ಬಂಧಿಸಿಹುದು
ನಮ್ಮಿಬ್ಬರ ದೇಹ ಬೇರೆ ಮನಸ್ಸು ಒಂದೇ
ಸೇರಬೇಕು ನಾವು ಪ್ರತಿ ದಿನ ಪ್ರತಿ ಕ್ಷಣ
ಅನುದಿನದ ಕನಸುಗಳ ಹಂಚಿಕೊಂಡು ನನಸು ಮಾಡಲು
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್. ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨