ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ ದತ್ತಿಗೆ ಶತಕದ ಸಂಭ್ರಮ.
ಧಾರವಾಡ, ಧಾರವಾಡದ ಅಕ್ಷರತಾಯಿ ದತ್ತಿದಾನಿ ಲೂಸಿ ಕೆ ಸಾಲ್ಡಾನರವರು, ತಮ್ಮ 100 ನೆಯ ದತ್ತಿಯನ್ನು ಧಾರವಾಡ ನಗರದ ನವಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೀಡಿದರು, ದತ್ತಿನಿಧಿ ಚೆಕ್ಕನ್ನು ಧಾರವಾಡ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಅವರ ಮೂಲಕ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ರವಿ ಕಟ್ಟಿ ಅವರಿಗೆ ಹಸ್ತಾಂತರಿಸಿದರು,
ಚೆಕ್ ವಿತರಿಸಿ ಮಾತನಾಡಿದ ಬಿಇಒ ಅಶೋಕ ಸಿಂದಗಿ ಇಂದು ನನಗೆ ತುಂಬಾ ಸಂತೋಷವಾಗಿದೆ, ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರವಾಯಿತು ಎನ್ನುವವರ ಮದ್ಯೆ ಈ ಮಹಾನ ತಾಯಿ ಆದರ್ಶವಾಗಿ ನಿಲ್ಲುತ್ತಾರೆ, ನಿವೃತ್ತಿಯಾಗಿ 16 ವರ್ಷ ಕಳೆದರೂ ಸರ್ಕಾರಿ ಶಾಲೆಗೆ ಹೋಗಿ ಪಾಠ ಮಾಡುವುದರ ಜೊತೆಗೆ,ತನಗೆ ಬರುವ ಸಂಬಳದ ಶೇಕಡಾ 90% ರಷ್ಟನ್ನು ಕೂಡಿಟ್ಟು,ಉಳಿದ ಹಣದಲ್ಲಿ ಜೀವನ ಸಾಗಿಸುತ್ತಾ, ನೂರು ಶಾಲೆಗಳಿಗೆ ದತ್ತಿ ನೀಡಿ ತುಂಬಾ ಆದರ್ಶ ವ್ಯಕ್ತಿಯಾಗಿ, ಧಾರವಾಡದ ಅಕ್ಷರತಾಯಿಯಾಗಿ ಹೆಸರು ಮಾಡಿದ ಈ ತಾಯಿಯ ಜೊತೆಗೆ ನಾನು ಇಂದು ವೇದಿಕೆ ಹಂಚಿಕೊಂಡಿರುವುದು ನನ್ನ ಸೌಭಾಗ್ಯ ಎಂದರು,
ಮುಖ್ಯ ಅತಿಥಿಯಾಗಿದ್ದ ಧಾರವಾಡದ ಡಯಟ್ ನ ಉಪನ್ಯಾಸಕಿ ಡಾ, ರೇಣುಕಾ ಅಮಲಝರಿ, ಲಕ್ಷ ಲಕ್ಷ ಕೋಟಿ ಕೋಟಿ ಗಳಿಸುವ ಜನರ ಮದ್ಯೆ ಈ ಅಕ್ಷರತಾಯಿ ಲೂಸಿ ಸಾಲ್ಡಾನ ತುಂಬಾ ಆದರ್ಶ ಮತ್ತು ಶ್ರೇಷ್ಠ ವ್ಯಕ್ತಿ, ಉಡುಪಿ ಜಿಲ್ಲೆಯ ಇವರು ಚಿಕ್ಕ ವಯಸ್ಸಿನಲ್ಲಿ ತಂದೆ,ತಾಯಿ ಬಂಧುಗಳಿಂದ ಕಳೆದುಹೋಗಿ, ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ,ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗಿ, ಕಷ್ಟ ಪಟ್ಟು ಶಿಕ್ಷಣ ಪಡೆದು ಶಿಕ್ಷಕಿಯಾಗಿ, ವೃತ್ತಿ ಜೀವನದಲ್ಲಿ ಕೂಡಿಟ್ಟ ಎಲ್ಲಾ ಹಣವನ್ನು ಸರಕಾರಿ ಶಾಲೆಗಳಿಗೆ ಬಡ ಮಕ್ಕಳ ಕಲಿಕೆಗೆ ಆಸರೆಯಾಗಲಿ ಎಂದು ದತ್ತಿ ನೀಡುತ್ತಿರುವುದು ಅತ್ಯಂತ ಶ್ರೇಷ್ಠ ಕಾಯಕವಾಗಿದೆ ಎಂದರು. ಸಮನ್ವಯ ಅಧಿಕಾರಿ ಮಂಜು ಅಡವೇರ,ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾದ ರಮೇಶ ಲಿಂಗದಾಳ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅದ್ಯಕ್ಷರಾದ ಎನ್ ಎಫ್ ಮಂಜಣ್ಣವರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಗರದ ಅದ್ಯಕ್ಷರಾದ ಶಾಂತಾ ಶೀಲವಂತ ಉಪಾಧ್ಯಕ್ಷರಾದ ವೀಣಾ ಹೊಸಮನಿ,ಮುಖ್ಯ ಶಿಕ್ಷಕ ಎಲ್ ಟಿ ದಾಸರ ಅಕ್ಷರತಾಯಿ ಸೇವಾ ಸಂಸ್ಥೆಯ ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಉಮೇಶ ಕುರುಬರ,ಮಲ್ಲಪ್ಪ ಹೊಸ್ಕೇರಿ ಮುಂತಾದವರು ಇದ್ದರು.