ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೇಸ್ ಸರಕಾರದ ಮೋದಲ ಅಧೀವೇಶನ ಆರಂಭವಾಗಿದೆ. ಇದೇ ತಿಂಗಳು 7 ರಂದು ಬಜೆಟ್ ಅಧೀವೇಶನ ನಡೆಯಲಿದ್ದು ಸಾಧಕ ಭಾಧಕಗಳ ಕುರಿತು ಚರ್ವೆ ನಡೆಯಲಿದೆ…
ಬೆಂಗಳೂರು:
ಅತಿಥಿ ಶಿಕ್ಷಕರನ್ನು ಕಾಯಂ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯೂ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಹೇಳಿದರು.
ವಿಧಾನಸಭೆಯಲ್ಲಿ ಮಂಗಳವಾರ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್ನ ಕೆ.ವೈ.ನಂಜೇಗೌಡರ ಪ್ರಶ್ನೆಗೆ ಉತ್ತರಿಸಿದರು.
ವಿಷಯ ಪ್ರಸ್ತಾಪಿಸಿದ ನಂಜೇಗೌಡ ಅವರು, ರಾಜ್ಯದಲ್ಲಿ 33 ಸಾವಿರ ಅತಿಥಿ ಶಿಕ್ಷಕರು ಇದ್ದಾರೆ. ಕೇವಲ ₹ 5,000 ರಿಂದ ₹6,000 ಗಳಿಗೆ ದುಡಿಯುತ್ತಿದ್ದಾರೆ. ಇವರನ್ನು ಕಾಯಂ ಮಾಡಬೇಕು. ಅದಕ್ಕೂ ಮೊದಲು ಇವರಿಗೆ ಕನಿಷ್ಠ ವೇತನ ನಿಯಮದಡಿ ವೇತನ ನೀಡಬೇಕು. ತಿಂಗಳಿಗೆ ₹10,000 ದಿಂದ ₹15,000 ಕನಿಷ್ಠ ವೇತನ ನೀಡಬೇಕು ಒತ್ತಾಯಿಸಿದರು.
ಖಾಯಂ ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಅದು ತೆರವುಗೊಂಡ ಬಳಿಕ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದರು.