ಭಾ ವಾಂತರಂಗ.
ಹೃದಯವೆಂಬ ಸಮುದ್ರದಲ್ಲಿ.
ನೂರೆಂಟು ಭಾವನೆಯ ಅಲೆಗಳು
ನಿಲ್ಲುತ್ತಿಲ್ಲ ಕ್ಷಣ ಮಾತ್ರ ಅಪ್ಪಳಿಸುತ್ತಿವೆ
ಎಡೆ ಬಿಡದೆ ಕಾಡುತ್ತಿವೆ ಸುಮ್ಮನಿರದೆ
ಒಮ್ಮೆ ಮೌನ, ಮತ್ತೊಮ್ಮೆ ಸಿಟ್ಟು ಮಗದೊಮ್ಮೆ ನಗು ಆಮೇಲೆ ಅಳು
ಹೀಗೆ ಸಾಗುತಿದೆ ಸಂಸಾರ ಸಾಗರ.
ಕಳೆದು ಹೋಗಿವೆ ಸಾಕಷ್ಟು ಸುಂದರ
ಸವಿನೆನಪುಗಳ ಸಚಿತ್ರಗಳು
ನಗುವ ಕಡಲಲ್ಲಿ ತೇಲುವೆ ಅವುಗಳ
ಮೆಲುಕು ಹಾಕುತ.
ಕೊಚ್ಚಿ ಹೋಗಲು ಬಿಡುವೆ ಕಹಿ ನೆನಪುಗಳ ಮೆರವಣಿಗೆಯನ್ನ.
ನಡು ನಡುವೆ ಇಂಪಾದ ಮನಸಿನ
ಸಂಗೀತದ ಸುಶ್ರಾವ್ಯದ ಅನುರಾಗ.
ಕಳೆಯುವುದು ದುಃಖದ ಜ್ಯಾಡ್ಯ
ಅದೆಷ್ಟೋ ಬಿಟ್ಟು ಹೋದ ಸಂಭಂದಗಳ ಸುಮಧುರ ನೆನಪು
ಬಡಿದೆಬ್ಬಿಸಿವೆ ಅವರ ಮಾರ್ಗದರ್ಶನದ ಕುರುಹುಗಳು
ತಿಳಿದುಕೊಂಡರೆ ಆಗುವದು ಅಂತರಂಗದ ಆನಂದ.
ಒಮ್ಮೊಮ್ಮೆ ಕಾಯುವೆ ಹೃದಯವೆಂಬ ನದಿಯ ತೀರದಲಿ ಕುಳಿತು ಏಕಿಷ್ಟು ಚಿಂತೆ ಏಕಿಷ್ಟು
ಕಷ್ಟದಲೆಗಳ ಆರ್ಭಟ.
ಯಾವಾಗ ತಿಳಿಯಾಗುವದು
ಚಿಂತೆ, ಕಂತೆಗಳೆಂಬ ಅಶುದ್ಧ ಅಲೆ.
ಎಲ್ಲವೂ ಕ್ಷಣಮಾತ್ರ ಒಲವಿನಲಿ
ನೀ ಬಾಳು ಸದ್ಗುಣಿ ಮೋಕ್ಷ ಹೊಂದು
ಸಂತೋಷದ ಸವಿಗಾನದಲಿ ಬಾಳು ನೀನೆಂದೆಂದು. ಬಾಳ ಬಳ್ಳಿಯಲಿ ಹೂವಾಗಿ ಹಣ್ಣಾಗಿ ಇರು ಎಂಬ ಭಾವದೊಂದಿಗೆ