ಹೆಬಸೂರ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾದಿಂದ ಊಟದ ತಟ್ಟೆಗಳ ದೇಣಿಗೆ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿ ಊಟಕ್ಕಾಗಿ ಹೆಬಸೂರ ಶಾಖೆಯ ಬ್ಯಾಂಕ್ ಆಫ್ ಬರೋಡಾದಿಂದ ಪ್ರತಿ ಶಾಲೆಗೆ ಎರಡನೂರ ಹತ್ತು ಸ್ಟೀಲ್ ತಟ್ಟೆಗಳನ್ನು ಶಾಖಾ ಹಿರಿಯ ವ್ಯವಸ್ಥಾಪಕರಾದ ವಾಯ್.ಎಸ್.ಗುಜಮಾಗಡಿಯವರು ವಿತರಿಸಿದರು.
ವಿತರಣಾ ಸಮಾರಂಭದಲ್ಲಿ ಊರಿನ ಗಣ್ಯರಾದ ಮಲ್ಲಿಕಾರ್ಜುನ ಬಸರಿಕಟ್ಟಿ.ಅಂಗಡಿ ಗ್ರಾಮೀಣ ಶಿಕ್ಣಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುರದಪ್ಪ ಗಾಳಿ ಸದಸ್ಯರಾದ ವೆಂಕಣ್ಣ ತಳವಾರ ಹಾಗೂ ಉಭಯ ಶಾಲೆಗಳ ಪ್ರಧಾನ ಗುರು ಮಾತೆಯರು ಸಹ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು