ನಿವೃತ್ತ ಅಂಚೆಪೇದೆ(ಪೋಸ್ಟ್ ಮ್ಯಾನ್) ಮಲ್ಲಪ್ಪ ಅಳಗೌಡ ಹೊಸಪೇಟೆ ದೇಹದಾನ:
ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖವಾಟಕೊಪ್ಪು ಗ್ರಾಮದ ನಿವಾಸಿ ನಿವೃತ್ತ ಅಂಚೆಪೇದೆ(ಪೋಸ್ಟ್ ಮ್ಯಾನ್) ಮಲ್ಲಪ್ಪ ಅಳಗೌಡ ಹೊಸಪೇಟೆ(೭೨)ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೃತರ ಅಂತಿಮ ಇಚ್ಚೆಯಂತೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ದೇಹವನ್ನು ಹುಬ್ಬಳ್ಳಿಯ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯಕ್ಕೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ದ್ಯಾನಾರ್ಜನೆಗೆ ದೇಹವನ್ನು ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ವೈದ್ಯವಿದ್ಯಾರ್ಥಿಗಳು ಹಾಗೂ ಡಾ.ರಾಮಣ್ಣವರ ಟ್ರಸ್ಟ್ ಕಾರ್ಯದರ್ಶಿ ಡಾ.ಮಹಾಂತೇಶ್ ರಾಮಣ್ಣವರ ಹೊಸಪೇಟೆ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಖವಾಟಕೊಪ್ಪು ಹಾಗೂ ಶೇಗುಣಸಿ ಗ್ರಾಮದ ರಾಷ್ಟ್ರೀಯ ಬಸವದಳದ ಸದಸ್ಯರು ದೇಹದಾನದ ವಿದಿವಿದಾನ ನೆರವೇರಿಸಿಕೊಟ್ಟರು.
ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪರು ಬಂದು ಬಳಗವನ್ನು ಆಗಲಿದ್ದಾರೆ.ಮಲ್ಲಪ್ಪ ಅವರ ಪತ್ನಿ ಕಸ್ತೂರವ್ವ ಕೂಡ ಕಳೆದ ವರ್ಷ ನಿಧನರಾಗಿದ್ದಾರೆ ಅವರು ಕೂಡ ದೇಹದಾನ ಮಾಡಿದ್ದಾರೆ.
ದೇಹದಾನದ ಹಾಗೂ ಅಂಗಾಂಗ ದಾನ ಹೆಚ್ಚಿನ ಮಾಹಿತಿಗಾಗಿ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ೯೨೪೨೪೯೬೪೯೭ ಗೆ ಸಂಪರ್ಕಿಸಬಹುದು.
ಶೇಗುಣಸಿ ಗ್ರಾಮದ ಗ್ರಾಮಸ್ಥರು ಮಲ್ಲಪ್ಪ ಅಳಗೌಡ ಹೊಸಪೇಟೆ (೭೨) ಅವರ ದೇಹ ದಾನ ಮಾಡುವ ಸಂದರ್ಭ.