ನೋವು……
ನಿನ್ನ ಕೈ ನೋವಿಗೆ
ಮುಲಾಮು ಸವರಲು
ಬರಬೇಕಾದವನು
ಬರಲಾಗದೇ ಕೊರಗುತಿಹೆನು
ಎಷ್ಟು ದೂರ ಎಷ್ಟು ಅಂತರ
ಏಕೀ ತಾಪ ಸಂಧಿಸಲಾಗದ ನೋವು
ಒಂಟಿ ಬದುಕು ಹೊತ್ತು ಕಳೆಯುವುದಿಲ್ಲ ಬರೀ ನಿರಾಸೆ
ನಿನ್ನ ನೋಡದ ಮನಸ್ಸು ತಡವರಿಸಿ ನೆನೆದು ಕೊರಗುತಿಹೆನು ಎದೆಯಲ್ಲಿ ಬಚ್ಚಿಟ್ಟು ನೋವನು
ಕಥೆ,ಕವನ, ಲೇಖನ,ಲಹರಿ ಇತ್ಯಾದಿ
ಹೆಸರಿನಲಿ ಗುರುತಿಸಿಕೊಂಡು
ನಿನ್ನ ನೆನಪಲಿ ಗೀಚುತಿರುವೆ
ಆದರೂ ನಿಜವಾಗಿಯೂ ನೀ
ನನ್ನ ತೋಳಲಿ ಬಂಧಿಯಾಗಲಾರೆ
ಎಂಬ ನೋವು
ದಿಂಬು ಒದ್ದೆಯಾಗಿ ನಿಮ್ಮ ನೆನಪಿಗೆ
ಬೆಳಗಾಗುವುದರೊಳಗೆ ಚಿತ್ತಾರ ಬಿಡಿಸಿಬಿಡುತ್ತದೆ
ಯಾರಿಗೂ ಕಾಣದಂತೆ
ಮೇಲ್ನೋಟಕೆ ಹಾಕಿದ ದಿಂಬಿನ ಕವರು ನಗುತ್ತಲೇ ಇರುತ್ತದೆ.ಇದ ನೆನೆದಾಗ ನೋವು ಮೋಬೈಲ್ ರಿಂಗಾದಾಗಲೆಲ್ಲ ನಿನ್ನದಿರಬಹುದೇ ಎಂದು
ಒಳ ಮನಸಿನ ತೊಳಲಾಟವನೆಲ್ಲ ಹುದುಗಿಸಿಕೊಂಡು
ನಿನ್ನ ನೆನಪಲಿ ದಿನಕಳೆಯುತಿರುವ
ಈ ಮನಕ್ಕೆ ನೀ ಸಿಗುವೆಯೋ
ಇಲ್ಲವೋ ಎಂಬ ನೋವು
ಇರಲಿ ಬಿಡು ಗೆಳತಿ
ಅಂತರವೆಂಬುದು
ಹೆಚ್ಚು ದಿನ ಇರಲಾರದು
ಮೌನದಲಿ ಮಾತು
ಮಾತಿನಲಿ ಮೌನ
ನಡೆಯುತ್ತಲೇ ಇದೆಯಲ್ಲಾ…ವ್ಯಾಟ್ಸಪ್ ಚಾಟ್ ನೊಳು
ಆದರೂ ನಿನ್ನ ಬಿಟ್ಟು ಇರಲು ಮನಸ್ಸಿಲ್ಲ ಇರಲೇಬೇಕಾದ
ಅನಿವಾರ್ಯ
ನನಗಿಲ್ಲಿ ಬಿಟ್ಟಿರಲು
ಹೇಳಲಾಗದ ಸಂಕಟ
ಕಾಯುತ್ತಿರುವೆ ನಿನಗಾಗಿ
ನೋವು ಕಳೆದು ನಲಿವು
ಬರಬಹುದು ಒಂದು ದಿನ ಎಂದು
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨