ಎರಡನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ
ಮೊರಬ ಶಾಲೆಗೆ ಬೀಗ ಜಡಿದು ಪ್ರತಿಭಟನೆ, ಮಕ್ಕಳು ಮೈದಾನದಲ್ಲಿ,
ಅಧಿಕಾರಿಗಳು ನಾ ಕೊಡೆ, ಪೋಷಕರು ನಾ ಬಿಡೆ.
ಧಾರವಾಡ:
ಶತಮಾನ ಕಂಡ ಶಾಲೆಯ ಎದುರು ಸ್ವತಃ ಎಸ್‌ಡಿಎಮ್‌ಸಿ ಅದ್ಯಕ್ಷರು ಸೇರಿದಂತೆ ಗ್ರಾಮದ ಜನರೆಲ್ಲ ಶಾಲೆಯ ಮುಂದೆ ನಡೆಸುತ್ತಿದ್ದ ಪ್ರತಿಭಟನೆ ಎರಡನೇ ದಿನವು ಮುಂದುವರೆದಿದೆ. ಧಾರವಾಡ ಜಿಲ್ಲೆ ಮೊರಬ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ನಡೆದಿದೆ. ಹೌದು ನಮ್ಮ ಶಾಲೆಯ ದೈಹಿಕ ಶಿಕ್ಷಕರನ್ನು ಬೆರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೆಚ್ಚುವರಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಮ್‌ಆರ್ ಮಾದರ ಅವರು ದೈಹಿಕ ಶಿಕ್ಷಣದ ಜೊತೆ ಶಾಲೆಯ ಮುಖ್ಯ ಶಿಕ್ಷಕರಾಗಿ(ಹೆಚ್ಚುವರಿ ಶಿಕ್ಷಕರಾಗಿ)ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಇಲಾಖೆ 2021 ರ ಅನ್ವಯ ಈ ಶಾಲೆಯಲ್ಲಿ 200ಕ್ಕೂ ಕಡಿಮೆ ಮಕ್ಕಳಿದ್ದರು, ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ 2022-23 2023-24 ನೇ ಸಾಲಿನಲ್ಲಿ 200 ಕ್ಕೂ ಹೆಚ್ಚು ಮಕ್ಕಳಿದ್ದಾರೆ..
ತಮ್ಮ ಮಕ್ಕಳಿಗೂ ದೈಹಿಕ ಶಿಕ್ಷಣ ಬೇಕು, ಪಾಠದ ಜೊತೆ ವ್ಯಾಯಾಮ,ಪಾಠಗಳು ನಮ್ಮ ಮಕ್ಕಳಿಗೂ ಬೇಕು ಎಂದು ಶಾಲೆಯ ಎಸ್‌ಡಿಎಮ್‌ಸಿ ಅದ್ಯಕ್ಷರು ಹೇಳಿದರು. ಎರಡು ಶಾಲೆಗಳನ್ನು ಸೇರಿಸಿ ಒಂದು ಶಾಲೆ ಮಾಡಲಾಗಿದೆ.(ಮರ್ಜ ಮಾಡಲಾಗಿದೆ). ನಮ್ಮ ಶಾಲೆಗೆ ದೈಹಿಕ ಶಿಕ್ಷಕರನ್ನು ನೀಡಬೇಕು, ಅಲ್ಲಿಯವರಗೂ ನಾವು ಹೋರಾಟ ಮಾಡುತ್ತೇವೆ. ಶಾಲೆ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು..
ಮೊರಬ ಗ್ರಾಮದ ಎಮ್ ಸಿ ಎಸ್ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಿಕ್ಷಣ ಇಲಾಖೆ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ನೇಮಕ ಮಾಡಿಲ್ಲ. ಈಗೀರುವ ದೈಹಿಕ ಶಿಕ್ಷಕರೆ ಹೆಚ್ಚುವರಿಯಾಗಿ ಪ್ರಭಾರಿ ಪ್ರಧಾನ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನೆ ಬೆರೆ ಕಡೆ ವರ್ಗಾವಣೆ ಮಾಡಲಾಗಿದೆ.
ಸ್ಥಳಕ್ಕೆ ಕ್ಚೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು ಕೂಡ,ಗ್ರಾಮಸ್ಥರ ಮನವೊಲಿಸುವಲ್ಲಿ ವಿಫಲವಾಗಿದ್ದಾರೆ..ಶಾಲೆಯ ಒಳಗೆ ಪಾಠ ಕೇಳಬೇಕಿದ್ದ ಮಕ್ಕಳು,ಇದೀಗ ಶಾಲೆಯ ಹೊರಗಡೆ ಕುಳಿತಿದ್ದಾರೆ..ದೈಹಿಕ ಶಿಕ್ಷಕರನ್ನು ನೀಡುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ..