ಶಾಲೆಗೆ ಬೀಗ ಜಡಿದ ಗ್ರಾಮಸ್ಥರು…
ಶಿಕ್ಷಕರ ವರ್ಗಾವಣೆ: ಮಕ್ಕಳಿಗೆ ಪ್ರಾಣ ಸಂಕಟ:ಅಧಿಕಾರಿಗಳಿಗೆ ಮಾಹಿತಿ ಕೋರತೆ?
ಧಾರವಾಡ: ಶತಮಾನ ಕಂಡ ಶಾಲೆಯ ಎದುರು ಸ್ವತಃ ಎಸ್ಡಿಎಮ್ಸಿ ಅದ್ಯಕ್ಷರು ಸೇರಿದಂತೆ ಗ್ರಾಮದ ಜನರೆಲ್ಲ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಇವತ್ತು ನಡೆದಿದೆ. ಧಾರವಾಡ ಜಿಲ್ಲೆ ಮೊರಬ ಗ್ರಾಮದಲ್ಲಿ ನಡೆದಿದೆ. ಹೌದು.ನಮ್ಮ ಶಾಲೆಯ ದೈಹಿಕ ಶಿಕ್ಷಕರನ್ನು ಬೆರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೆಚ್ಚುವರಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಮ್ಆರ್ ಮಾದರ ಅವರು ದೈಹಿಕ ಶಿಕ್ಷಣದ ಜೊತೆ ಶಾಲೆಯ ಮುಖ್ಯ ಶಿಕ್ಷಕರಾಗಿ(ಹೆಚ್ಚುವರಿ ಶಿಕ್ಷಕರಾಗಿ)ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಇಲಾಖೆ 2021 ರ ಅನ್ವಯ ಈ ಶಾಲೆಯಲ್ಲಿ 200ಕ್ಕೂ ಕಡಿಮೆ ಮಕ್ಕಳಿದ್ದರು, ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ 2022-23 2023-24 ನೇ ಸಾಲಿನಲ್ಲಿ 200 ಕ್ಕೂ ಹೆಚ್ಚು ಮಕ್ಕಳಿದ್ದಾರೆ..
ತಮ್ಮ ಮಕ್ಕಳಿಗೂ ದೈಹಿಕ ಶಿಕ್ಷಣ ಬೇಕು, ಪಾಠದ ಜೊತೆ ವ್ಯಾಯಾಮ,ಪಾಠಗಳು ನಮ್ಮ ಮಕ್ಕಳಿಗೂ ಬೇಕು ಎಂದು ಶಾಲೆಯ ಎಸ್ಡಿಎಮ್ಸಿ ಅದ್ಯಕ್ಷರು ಹೇಳಿದರು. ಎರಡು ಶಾಲೆಗಳನ್ನು ಸೇರಿಸಿ ಒಂದು ಶಾಲೆ ಮಾಡಲಾಗಿದೆ.(ಮರ್ಜ ಮಾಡಲಾಗಿದೆ). ನಮ್ಮ ಶಾಲೆಗೆ ದೈಹಿಕ ಶಿಕ್ಷಕರನ್ನು ನೀಡಬೇಕು, ಅಲ್ಲಿಯವರಗೂ ನಾವು ಹೋರಾಟ ಮಾಡುತ್ತೇವೆ.ನಾಳೆಯೂ ಕೂಡ ಶಾಲೆ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು..
ಮೊರಬ ಗ್ರಾಮದ ಎಮ್ ಸಿ ಎಸ್ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಿಕ್ಷಣ ಇಲಾಖೆ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ನೇಮಕ ಮಾಡಿಲ್ಲ. ಈಗೀರುವ ದೈಹಿಕ ಶಿಕ್ಷಕರೆ ಹೆಚ್ಚುವರಿಯಾಗಿ ಪ್ರಭಾರಿ ಪ್ರಧಾನ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನೆ ಬೆರೆ ಕಡೆ ವರ್ಗಾವಣೆ ಮಾಡಲಾಗಿದೆ.
ಸ್ಥಳಕ್ಕೆ ಕ್ಚೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು ಕೂಡ,ಗ್ರಾಮಸ್ಥರ ಮನವೊಲಿಸುವಲ್ಲಿ ವಿಫಲವಾಗಿದ್ದಾರೆ..ಶಾಲೆಯ ಒಳಗೆ ಪಾಠ ಕೇಳಬೇಕಿದ್ದ ಮಕ್ಕಳು,ಇದೀಗ ಶಾಲೆಯ ಹೊರಗಡೆ ಕುಳಿತಿದ್ದಾರೆ..ದೈಹಿಕ ಶಿಕ್ಷಕರನ್ನು ನೀಡುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದ್ದಾರೆ.
ಈ ಕುರಿತು ಪಬ್ಲಿಕ್ ಟುಡೆಯೊಂದಿಗೆ ಮಾತನಾಡಿದ DDPI( ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಧಾರವಾಡ) ಎಸ್ ಎಸ್ ಕೆಳದಿಮಠ, ಇಲಾಖೆ ನಿಯಮಾನುಸಾರ ಈ ಪ್ರಕ್ರಿಯೆ ನಡೆದಿದೆ.ದೈಹಿಕ ಶಿಕ್ಷಕರೇ ಹೆಚ್ಚುವರಿ ಶಿಕ್ಷಕರಾಗಿ ಬೆರೆಡೆ ವರ್ಗಾವಣೆ ಗೊಂಡಿದ್ದಾರೆ. ಯಾವುದೇ ಶಾಲೆಯಲ್ಲಿ 250 ಕ್ಕೂ ಅಧಿಕ ಮಕ್ಕಳಿದ್ದರೆ ಅಲ್ಲಿಗೆ ದೈಹಿಕ ಶಿಕ್ಷಕರನ್ನು ನೀಡಬೇಕಾಗುತ್ತದೆ. ಈ ಶಾಲೆಯಲ್ಲೂ ಅದೇ ನಿಯಮ ಪಾಲನೆಯಾಗಿದೆ..ಮೊರಬ ಗ್ರಾಮದ ಜನರ ಜೊತೆ ನಮ್ಮ ಅಧಿಕರಿಗಳು ಮಾತನಾಡಿದ್ದಾರೆ. ಅದು ವಿಫಲವಾಗಿದೆ. ನಾನು ಕೂಡ ಗ್ರಾಮಸ್ಥರ ಜೊತೆ ಮಾತನಾಡುವೆ ಎಂದರು.ಹಾಗೂ ಈ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹುದ್ದೆ ಇರುವುದಿಲ್ಲ ಎಂದರು..
ಮೊರಬ ಶಾಲೆಯ ಎಸ್ಡಿಎಮ್ ಸಿ ಸದಸ್ಯರಾದ ಮಂಜುನಾಥ ಕರೆಡ್ಡಿ ಅವರು ಮಾತನಾಡಿ, ಮಾನ್ಯ ಡಿಡಿಪಿಐ ಅವರಿಗೆ ಮಾಹಿತಿ ಕೊರತೆ ಇದೆ ಎಂಬುದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ..ಸದ್ಯ ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ 200 ಅಧಿಕವಾಗಿದೆ.ಇದು ಅವರಿಗೆ ತಿಳಿದಿಲ್ಲ.ನಮ್ಮ ಶಾಲೆಗೆ ದೈಹಿಕ ಶಿಕ್ಷಕರ ನೇಮಕವಾಗುವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದರು..
ಒಟ್ಟಿನಲ್ಲಿ ಅಧಿಕಾರಿಗಳ ಮಾಹಿತಿ ಕೊರತೆಯಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ..ನಾಳೆಯಿಂದ ಶಾಲೆಯ ಮುಂದೆ ಹೋರಾಟ ಉಗ್ರ ರೂಪ ಪಡೆಯಲಿದೆ..ಮುಂದೆ ಏನಾಗುತ್ತದೋ ಕಾದು ನೋಡೊಣ