ಲಕ್ಷ್ಮೇಶ್ವರ:
ಇಂದು ಸ.ಮಾ. ಪ್ರಾ ಶಾಲೆ ನಂ -4 ಲಕ್ಷ್ಮೇಶ್ವರ ಶಾಲೆಯಲ್ಲಿ ಲಕ್ಷ್ಮೇಶ್ವರ ಉತ್ತರ, ಬಡ್ನಿ, ಬಟ್ಟೂರ ಮತ್ತು ದೊಡ್ಡುರ ಕ್ಲಸ್ಟರ್ ಗಳ ನಲಿ- ಕಲಿ ಬೋಧಿಸುವ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರ ಉದ್ಘಾಟಿಸಿ ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಎನ್ ಭರಮಗೌಡರ ನಲಿಕಲಿ ಕಾರ್ಯಾಗಾರದ ಉದ್ದೇಶ ಹಾಗೂ ಶೈಕ್ಷಣಿಕ ವರ್ಷದಲ್ಲಿ ನಲಿಕಲಿಯಲ್ಲಿ ಯಾದ ಬದಲಾವಣೆಯನ್ನು ತಿಳಿದುಕೊಂಡು ಮಕ್ಕಳಿಗೆ ತಲುಪಿಸಲು ಎಲ್ಲ ನಲಿಕಲಿ ಶಿಕ್ಷಕರಿಗೆ ತಿಳಿಸಿದರು.
ಶ್ರೀ ಎನ್ ಎಸ್ ಬಂಕಾಪುರ ನಲಿ- ಕಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಸಮಗ್ರವಾಗಿ ನಲಿ-ಕಲಿ ವಿಷಯಗಳ ಬಗ್ಗೆ ಎಲ್ಲರಿಗೂ ಮಾಹಿತಿಯನ್ನು ನೀಡಿದರು.. ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಎಚ್ ಬಿ ಸಣ್ಣಮನಿ ಗುರುಗಳು,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ L A ನಂದೆಣ್ಣವರ ಗುರುಮಾತೆಯವರು, ಜಿಲ್ಲಾ ನಾಮನಿರ್ದೇಶಿತ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹಿರೇಮಠ,ಬಿ ಆರ್ ಪಿ ಗಳಾದ ಎಮ್ ಎನ್ ಭರಮಗೌಡರ,ಸಿ ಆರ್ ಪಿ ಗಳಾದ ಉಮೇಶ ನೇಕಾರ, ಗಿರೀಶ ನೇಕಾರ,ಜಿ ಆರ್ ಪಾಟೀಲ್,ಜಿ ಎಚ್ ರಾಜೂರ,ಶ್ರೀ ಎನ್ ಎನ್ ಶಿಗ್ಲಿ ಉಪಸ್ಥಿತರಿದ್ದರು.ಶ್ರೀ ಎಸ್ ಎನ್ ತಾಯಮ್ಮನವರ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀ ಜಿ ಎಸ್ ನೇಕಾರ ವಂದಿಸಿದರು.