ಸುಶಿಕ್ಷಿತ ಯವಕರು ತಾವು ನಿಮ್ಮ ನೆಲದ,ಶಾಲೆಯ ಋಣ ತೀರಿಸಬೇಕು, ಟಿ ಮಲ್ಲಿಕಾರ್ಜುನ,
ಶಿವಮೊಗ್ಗ,
ಶಿವಮೊಗ್ಗ ತಾಲ್ಲೂಕಿನ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ.ಕಿ.ಪ್ರಾಶಾಲೆ ಶಾಂತಿ ಕೆರೆಯಲ್ಲಿ ಜಿಲ್ಲಾ ಪರಿಸರ ಪ್ರೇಮ ತಂಡದಿಂದ ಆಯೋಜಿಸಿದ್ದ 64ನೇ ಭಾನುವಾರದ ನಿರಂತರ ಶ್ರಮದಾನವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಪರಿಸರ ಪ್ರೇಮ ತಂಡದ ಸಂಸ್ಥಾಪಕರಾದ ಟಿ ಮಲ್ಲಿಕಾರ್ಜನ್ ರವರು, ತಾವು ಓದಿದ ಶಾಲೆ ಹಾಗೂ ಹುಟ್ಟಿ ಬೆಳೆದ ಊರಿನ ಋಣವನ್ನು ಸುಶಿಕ್ಷಿತ ಯುವಕರು ತೀರಿಸಬೇಕು ಹವ್ಯಾಸ ಬದಲಿಸಿಕೊಳ್ಳಿ ನಿಮ್ಮ ಅದೃಷ್ಟ ಬದಲಾಗುತ್ತದೆ. ದೃಷ್ಠಿ ಬದಲಿಸಿದರ ದೃಶ್ಯ ಬದಲಾಗುತ್ತದೆ ಎಂದು ಹೇಳಿ ಯವಕರಿಗೆ ಮಾರ್ಗದರ್ಶಿ ಭಾಷಣ ಮಾಡಿದರು.
ಈ ಸಭೆಯಲ್ಲಿ ಜಿಲ್ಲಾ ಪರಿಸರ ಪ್ರೇಮ ತಂಡದ ಅಧ್ಯಕ್ಷರಾದ ಕೆ.ಶಿವಾನಾಯ್ಕ ಉಪಾಧ್ಯಕ್ಷರಾದ ಸತೀಶ್ ಪಿ.ಕೆ ಎಸ್ ಡಿ ಎಂಸಿ ಅಧ್ಯಕ್ಷರಾದ ರವಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೆಚ್ ಜಿ ಆಚಾರ್ ಶಿವಮೊಗ್ಗ ತಾಲ್ಲೂಕಿನ ಅಧ್ಯಕ್ಷರಾದ ಕೆಂ ನರಸಿಂಹಪ್ಪ ವಸಂತ್ ಸೂರ್ಯ ಯುವಕರ ಸಂಘದ ಸದಸ್ಯರು ಒಕ್ಕೂಟದ ಅದ್ಯಕ್ಷರು ಪೋಷಕರು ಗ್ರಾಮ ಪಂಚಾಯಿತಿ ಸದಸ್ಯರು ಭಾಗಿಯಾಗಿದ್ದರು
ಪ್ರಕೃತಿ ವನಸಿರಿಯಿಂದ ಕಂಗೊಳಿಸುತ್ತಿದ್ದ ಶಾಲೆ ಈ ದಿನ ಬಣ್ಣ ದಿಂದ ಇನ್ನೂ ಅಂದವನ್ನು ಹೆಚ್ಚಿಸಿಕೊಂಡಿದೆ ಎರೆಡು ಶಾಲಾ ಕೊಠಡಿಗಳು ಅಕ್ಷರ ದಾಸೋಹ ಕೊಠಡಿಗಳಿಗೆ ಬಣ್ಣ ಹಚ್ಚಲಾಯಿತು ಶಾಲಾವರಣದಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಸಸಿಗಳನ್ನು ಸಡಲಾಯಿತ
ಪಂಚಾಯತ್ ಅಮೃತ ಆರೋಗ್ಯ ಅಭಿಯಾನ ರಿಂದ ಆರೋಗ್ಯ ತಪಾಸಣೆಗೆ ಮಾಡಿಸಲಾಯಿತು ಶಾಲಾ ಶಿಕ್ಷಕರಾದ ನವೀನ್ ಕುಮಾರ್ ಸಕ್ರಿಯರಾಗಿದ್ದು ಕಾರ್ಯಕ್ರಮ ನಿರೂಪಿಸಿದರು.