ಬೆಂಗಳೂರು 01.
ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ, ಬೆಂಗಳೂರು, ದಿನಾಂಕ: 19.06.2023
ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ ಸಹಕಾರ ಸೌಧ, 8ನೇ ಅಡ್ಡರಸ್ತೆ, 8ನೇ ಮುಖ್ಯ ರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ಮಾನ್ಯರೆ,
ವಿಷಯ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅವ್ಯವಹಾರ, ಭ್ರಷ್ಟಾಚಾರ, ಹಣ ದುರುಪಯೋಗ ಹಾಗೂ ಇತರ ಚಟುವಟಿಕೆಗಳ ವಿಚಾರಣೆ ನಡೆಸಿ ಸಂಘಕ ಆಡಳಿತಾಧಿಕಾರಿಯನ್ನು ನೇಮಿಸುವ ಬಗ್ಗೆ.
ಉಲ್ಲೇಖ: ಶ್ರೀ ಶಾಂತಾರಾಮ್ ಮತ್ತು ಇತರರು, ಇವರ ಪತ್ರ ದಿನಾಂಕ:02.06.2023.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ. ಸದರಿ ಪತ್ರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಸರ್ಕಾರದಿಂದ ಪ್ರತಿ ವರ್ಷ ಕೋಟ್ಯಾಂತರ ಸಹಾಯಧನ ಪಡೆಯುತ್ತಿದ್ದು, ಸಂಘವು ವಿವಿಧ ಕಾಯ್ದೆ ಮತ್ತು ನಿಯಮಗಳನ್ನು `ಉಲ್ಲಂಘನೆ ಮಾಡಿ ಗಂಭೀರ ಸ್ವರೂಪದ ಅಪರಾಧಗಳು, ಭ್ರಷ್ಟಾಚಾರ, ಹಣ ದುರುಪಯೋಗ, ವಂಚನೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತವಾಗಿದ್ದು, ಈ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ವಿವಿಧ ದಿನಾಂಕಗಳಂದು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ನೀಡಿ ಶಾಸನಾತ್ಮಕ ವಿಚಾರಣೆ ಜರುಗಿಸಲು ಕೋರಿದ್ದರೂ ಯಾವುದೇ ಕ್ರಮ ಜರುಗಿಸದ ಕಾರಣ ಸಂಘದಲ್ಲಿನ ಕಾನೂನು ಬಾಹಿರ ಚಟುವಟಿಕೆಗಳು ಆರ್ಥಿಕ ಅಪರಾಧಗಳು ನಿರಂತರವಾಗಿ ಮುಂದುವರೆದಿದ್ದು, ಈ ಕುರಿತು ಕೆಲ ದಾಖಲೆಗಳನ್ನು ಲಗತ್ತಿಸಿ ಸಂಘದ ವಿರುದ್ಧದ 5 ಆರೋಪಗಳನ್ನು ಪಟ್ಟಿ ಮಾಡಿ, ಸದರಿ ಆರೋಪಗಳನ್ನು ಕಾಯ್ದೆಯಡಿ ಶಾಸನಾತ್ಮಕ ವಿಚಾರಣೆ ನಡೆಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಿಸಿ ಸರಕಾರದ ಬೊಕ್ಕಸಕ್ಕೆ, ಸಂಘಕ ಹಾಗೂ ಸಂಘದ ಸದಸ್ಯರುಗಳಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ರಾಜ್ಯಾಧ್ಯಕ್ಷರ ವಿರುದ್ಧ ಸೂಕ್ತ ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಸದರಿ ದೂರು ಅರ್ಜಿಯನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಸಂಘದ ವಿರುದ್ಧ ಇರುವ 5 ಪ್ರಮುಖ ಆರೋಪಗಳ ವಿಚಾರಣೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಸಂಘದ ವಿರುದ್ಧ ನಿಯಮಾನುಸಾರ ಕ್ರಮವಿಡಲು ಸೂಕ್ತ ಪ್ರಸ್ತಾವನೆ/ವರದಿಯನ್ನು ನಿಬಂಧಕರ ಮೂಲಕ ಸರ್ಕಾರಕ್ಕೆ ಸಲ್ಲಿಸುವಂತೆ ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದೇನೆ.