ನಿಧನ ವಾರ್ತೆ:
ಶತಾಯುಷಿ ಗೌರಮ್ಮ ಚನ್ನಪ್ಪ ಹಲಗತ್ತಿ (102)ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದ ನಿವಾಸಿ ಶತಾಯುಷಿ ಗೌರಮ್ಮ ಚನ್ನಪ್ಪ ಹಲಗತ್ತಿ (102) ಇವರು ಇಂದು ಸಂಜೆ 7.30ಕ್ಕೆ ನಿಧನ ಹೊಂದಿದರು.
102ವರ್ಷ ಬಾಳಿದ ಇವರು ಮಂಡಳ ಪಂಚಾಯತ ಸದಸ್ಯರಾಗಿದ್ದರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್ ಸಿ ಹಲಗತ್ತಿ ಯವರನ್ನೊಳಗೊಂಡಂತೆ ಮೂವರು ಹೆಣ್ಣು ಮಕ್ಕಳು ಹಾಗೂ ಐದು ಗಂಡು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ನಾಳೆ ಸಾಯಂಕಾಲ 4 ಗಂಟೆಗೆ 26-06-2023ರಂದು ಕಲಹಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗುವುದು.