ಲೈವ್ ವಿಡಿಯೋ ಮಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ:ಕಾರಣ ಏನು ಅಂತ ನೀವೆ ನೋಡಿ..
ಕುಷ್ಠಗಿ: ಕ್ರಿಮಿನಾಶಕ ಸೇವಿಸಿ ಖಾಸಗಿ ಶಾಲೆಯ ಶಿಕ್ಷಕನೊಬ್ಬ (Teacher) ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಕುಷ್ಟಗಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.ರಾಜು ಬ್ಯಾಡಗಿ (45) ಆತ್ಮಹತ್ಯೆ ಮಾಡಿಕೊಂಡ ಖಾಸಗಿ ಶಾಲೆಯ ಶಿಕ್ಷಕ. ಕುಷ್ಟಗಿ ಪಟ್ಟಣದಲ್ಲಿರುವ ಬುತ್ತಿ ಬಸವೇಶ್ವರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ರಾಜು ಬ್ಯಾಡಗಿ ಕೆಲಸ ಮಾಡುತ್ತಿದ್ದರು.
ಹಣ ಡಬಲ್ ಮಾಡಿಕೊಡುವುದಾಗಿ ಅನೇಕ ಜನರಿಂದ ಎಂಬಿಬಿ ಹೆಸರಿನ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದರು ಎನ್ನಲಾಗಿದೆ, ಹಣ ಹೂಡಿಕೆ ಮಾಡಿದ ಜನರು ಹಣ ವಾಪಾಸ್ ಕೊಡಿಸುವಂತೆ ಕೇಳುತ್ತಿದ್ದರು. ಇದರಿಂದ ಹಣ ವಾಪಾಸ್ ಕೊಡಿಸಲಾಗದೆ ಮನನೊಂದು ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕುಷ್ಟಗಿ ಸಾಯಿಬಾಬಾ ದೇವಸ್ಥಾನ ಹಿಂಭಾಗ ತನ್ನ ಕೆಲವು ಮಿತ್ರರಿಗೆ ಲೈವ್ ವಿಡಿಯೋ ಮಾಡಿದ್ದ ಎಂದು ತಿಳಿದುಬಂದಿದೆ, ಅಸ್ವಸ್ಥಗೊಂಡ ರಾಜು ಬ್ಯಾಡಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕುಷ್ಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.