ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರೇಮಸಳಿಯಲ್ಲಿ ಶಾಲಾ ಸಂಸತ್ ರಚನೆ..
ಇಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರೇಮಸಳಿಯಲ್ಲಿ ಭಾರತದ ಚುನಾವಣಾ ಆಯೋಗ ನಡೆಸುವ ರೀತಿಯಲ್ಲಿ ವಿ ವಿ ಎಂ ಯಂತ್ರದ ಮಾದರಿಯನ್ನು ಬಳಸುವ ಮೂಲಕ ಮಕ್ಕಳಿಗೆ ಮತದಾನ ಮಾಡಿಸಿ ಶಾಲಾ ಸಂಸತ ರಚನೆ ಮಾಡಲಾಯಿತು.
ಪ್ರೊಸಿಡಿಂಗ ಅಧಿಕಾರಿಯಾಗಿ ಶಾಲಾ ಮುಖ್ಯಗುರುಗಳಾದ ಆನಂದ ಬಿ ಕೆಂಭಾವಿ ಕಾರ್ಯನಿರ್ವಸಿದರು. ಪೋಲಿಂಗ ಅಧಿಕಾರಿಗಳಾಗಿ ಬಿ ಕೆ ಪಟ್ಟಣಶೆಟ್ಟಿ, ಸಿ ಎಸ್ ಬೇಡಗೆ, ಶಂಕ್ರಮ್ಮ ತಳವಾರ ಗುರುಮಾತೆಯರು ನಿರ್ವಹಿಸಿದರು. ಮತದಾನ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಸಂಗಮೇಶ್ ಬಿ ಸಿ, ಪಿ ಆರ್ ಪಾಂಡ್ರಿ, ಎಚ್ ಆರ್ ನಾಟಿಕರ್, ರಫೀಕ್ ಗೌರ, ಪ್ರೀತಿ ಮಠಮತಿ, ಕೀರ್ತಿ ಗುನ್ನಪುರ, ಶಾರದಾ ಮುಗಳಿ ಉಪಸ್ಥಿತರಿದ್ದರು.
ಶಾಲಾ ಸಂಸತ್ ರಚನೆಯ ಚುನಾವಣೆಯಲ್ಲಿ ಅಧಿಕ ಮತ ಪಡೆದ ಏಳನೇ ವರ್ಗದ ವಿದ್ಯಾರ್ಥಿಯಾದ ಅಫಾನ್ ಕೊರಬು ಶಾಲಾ ಪ್ರಧಾನಮಂತ್ರಿಯಾಗಿ ಆಯ್ಕೆಯಾದನು. ಅದರೊಂದಿಗೆ ಎಂಟು ಜನ ವಿದ್ಯಾರ್ಥಿಗಳು ಮಂತ್ರಿಮಂಡಲದ ಸದಸ್ಯರಾಗಿ ಆಯ್ಕೆ ಆದರು. ಶಾಲಾ ಸಂಸತ್ ರಚಣೆಯಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪೀರಪ್ಪ ಭಾವಿಕಟ್ಟಿ ಹಾಗೂ ಎಲ್ಲ ಸದಸ್ಯರು ಶುಭಕೋರಿದರು. ಮಕ್ಕಳಿಗೆ ಚುನಾವಣೆಯ ಮಹತ್ವ ಮತ್ತು ನಡೆಸುವ ಮಾದರಿ ಕುರಿತು ಮಕ್ಕಳಿಗೆ ತಿಳಿಸಿ ಹೇಳಲಾಯಿತು.