ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ ಘಟಕ ಮತ್ತು ನವರಸ ಸ್ನೇಹಿತ ವೇದಿಕೆ (ರಿ )ರಾಜ್ಯ ಘಟಕ ಧಾರವಾಡ ಇವರ ಸಹಯೋಗದಲ್ಲಿ ಡಾ.ಲತಾ.ಎಸ್.ಮುಳ್ಳೂರ ಹಾಗೂ ಶ್ರೀ ಬಾಬಾಜಾನ ಮುಲ್ಲಾ ಅವರ ನೇತೃತ್ವದಲ್ಲಿ
ಜೂನ್ 5 ವಿಶ್ವ ಪರಿಸರ ದಿನಾಚರಣೆಯ ನಿಮ್ಮಿತ್ತ ನನ್ನ ಹಾಡು -ಗಾಯನ ಸ್ಪರ್ಧೆಯನ್ನು ದಿನಾಂಕ 18/06/2023 ರವಿವಾರದಂದು ಧಾರವಾಡದ ರಂಗಾಯಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರ ರವರು ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟಕರಾಗಿ ಧಾರವಾಡ ವಲಯದ ಅರಣ್ಯಾಧಿಕಾರಿಗಳಾದ ಮಾನ್ಯ ಶ್ರೀ ಪ್ರದೀಪ ಪವಾರ ರವರು, ಹಾಗೂ ಮುಖ್ಯ ಅತಿಥಿಗಳಾಗಿ ಧಾರವಾಡ ಉಪನಿರ್ದೇಶಕರ ಕಾರ್ಯಾಲಯದ ಆಧಿಕಾರಿಗಳಾದಮಾನ್ಯ ಶ್ರೀಮತಿ ಶಿವಲೀಲಾ ಕಳಸಣ್ಣವರ APCO ಅವರು ಹಾಗೂ ಮಾನ್ಯ ಶ್ರೀ ಮಂಜುನಾಥ. ವಿ ಅಡಿವೇರ ಕ್ಷೇತ್ರ ಸಮನ್ವಯಾಧಿಕಾರಿಗಳು.ಹಾಗೂ ಶ್ರೀಮತಿ ಗಾಯತ್ರಿ .ಕಮ್ಮಾರ.CRP ನವಲೂರ ಕ್ಲಸ್ಟರ.ಹಾಗೂ ಶ್ರೀಮತಿ ವಿಜಯಲಕ್ಷಿ.
ಕಮ್ಮಾರ CRP phq ಕ್ಲಸ್ಟರ್ ಎಲ್ಲರೂ ಪಾಲ್ಗೊಂಡಿದ್ದರು.
ಡಾ. ಲತಾ ಎಸ್ ಮುಳ್ಳೂರ ರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಮುಂದಿನ ಪೀಳಿಗೆ ಸಲುವಾಗಿ ನಾವು ಅದನ್ನ ಉಳಿಸಿ ಬೆಳೆಸಬೇಕು. ಅದರಲ್ಲಿಯೂ ಮಹಿಳಾ ಶಿಕ್ಷಕಿಯರು, ಶಾಲೆ ಮತ್ತು ಸಮುದಾಯದ ಪ್ರಜ್ಞಾಪೂರಕ ನಾಗರೀಕರಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆಯಬೇಕು ಹಾಗೂ ಸಂಘಟನಾ ಶಕ್ತಿಯಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ನನ್ನ ಹಾಡು ಗಾಯನ ಸ್ಪರ್ಧೆ ಕಾರ್ಯಕ್ರಮದ ಮತ್ತೊರ್ವ ಕೇಂದ್ರಬಿಂದುವಾಗಿ ನವರಸ ಸ್ನೇಹಿತರ ಬಳಗದ ರಾಜ್ಯಾಧ್ಯಕ್ಷರಾದ
ಶ್ರೀ ಬಾಬಾಜಾನ ಮುಲ್ಲಾ ರವರು ಪರಿಸರ ಕಾಳಜಿ,ಪರಿಸರ ಜಾಗೃತಿ ಕುರಿತಂತೆ ಪ್ರತಿಯೊಬ್ಬರ ಕರ್ತವ್ಯದ ಬಗ್ಗೆ ತಮ್ಮ ಕಾಳಜಿ ನುಡಿಗಳನ್ನು ನುಡಿದರು.
ಸ್ಪರ್ಧಾಳುಗಳ ನಿರ್ಣಾಯಕರಾಗಿ ಶ್ರೀ ಶ್ರೀಧರ ಕುಲಕರ್ಣಿ ಗಣಪತಿ ಮಹಾವಿದ್ಯಾಲಯದ ಅಧ್ಯಕ್ಷರು ಮತ್ತು ಅವರ ಪತ್ನಿ ಶ್ರುತಿ ಕುಲಕರ್ಣಿರವರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಶ್ರೀ ಮಹಾಂತೇಶ. ಹುಬ್ಬಳ್ಳಿ, ಶ್ರೀ ಬಸವರಾಜ ದ್ಯಾಪುರ
ಶ್ರೀಮತಿ ಉಮಾ ಅಳಗವಾಡಿ,ಅಧ್ಯಕ್ಷರು ಧಾರವಾಡ ಶಹರ ಮತ್ತು ಶ್ರೀಮತಿ ಕುಮುದ್ವತಿ ಭರಮಗೌಡ್ರ ಧಾರವಾಡ ಶಹರ ಪ್ರಧಾನ ಕಾರ್ಯದರ್ಶಿ ಹಾಜರಿದ್ದರು ಶ್ರೀಮತಿ ರಜಿಯಾ ದಿಲಶಾದ ಶ್ರೀಮತಿ ಡಿ.ಗೀತಾ .ಕುಲಕರ್ಣಿ. ಶ್ರೀಮತಿ ಗೀತಾ.ಓಂಕಾರಿ.ಶ್ರೀಮತಿ ಜಬೀನಾ. ಶ್ರೀಮತಿ N. ಬಡಿಗೇರ.ಶ್ರೀಮತಿ ಅನ್ನಪೂರ್ಣ. ಶ್ರೀಮತಿ. ಮಂಜುಳ.ಪದಾಧಿಕಾರಿಗಳು ಉಪಸ್ಥಿತರಿದ್ದರು.
ಧಾರವಾಡ
ಶಹರದ LPS ದುರ್ಗಾಕಾಲೋನಿ ಮತ್ತು ಇತರೆ ಶಾಲಾ ಮಕ್ಕಳು ಸಹಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಜಾಗೃತಿಯ ಕುರಿತು ನಾಟಕ ಮತ್ತು ಸುಂದರ ನೃತ್ಯ ಮಾಡುವ ಮೂಲಕ ಎಲ್ಲರಿಗೂ ಪರಿಸರ ಕುರಿತಂತೆ ಉತ್ತಮ ಸಂದೇಶ ನೀಡಿದರು.
ನನ್ನ ಹಾಡು ಗಾಯನ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಶಹರ ಹಾಗೂ ವಿವಿಧ ತಾಲ್ಲೂಕುಗಳ ಸ್ಪರ್ಧಿಗಳು ಭಾಗವಹಿಸಿದ್ದರು ಭಾಗವಹಿಸಿದವರಲ್ಲಿ ಪ್ರಥಮ ಸ್ಥಾನವನ್ನು ಶ್ರೀಮತಿ. ಜಯಲಕ್ಷ್ಮಿ. H BRP ಧಾರವಾಡ ಶಹರ, ದ್ವಿತೀಯ ಸ್ಥಾನವನ್ನು ಶ್ರೀ ಶಿವಪ್ಪ ಕನ್ನೂರ HPS ಲಕಮಾಪುರ,ಹಾಗೂ ತೃತೀಯ ಸ್ಥಾನವನ್ನು ಶ್ರೀಮತಿ ರಾಧಿಕಾ ಗಲಗಲಿ HPS ಲಕಮಾಪುರ ರವರುಗಳು ಪ್ರಶಸ್ತಿ ಪಡೆದುಕೊಂಡರು.
ಶ್ರೀಮತಿ ಶಶಿಕಲಾ ರಾಠೋಡ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು ಶ್ರೀ. ಮಹಾಂತೇಶ.ಹುಬ್ಬಳ್ಳಿ ಅವರು ಎಲ್ಲರನ್ನು ಸ್ವಾಗತಿಸಿದರು.
ಶ್ರೀ ಬಸವರಾಜ. ದ್ಯಾಪುರ ಅವರು ಶ್ರೀ ಜಕಾತಿ ಸರ ನನ್ನ ಹಾಡು ಸ್ಪರ್ಧಾ ಕಾರ್ಯಕ್ರಮ ನಡೆಸಿಕೊಟ್ಟರು
ಭಾಗವಹಿಸಿದ್ದ ಎಲ್ಲಾ ಗಣ್ಯರಿಗು ಅತಿಥಿಗಳಿಗೂ ಸ್ಪರ್ಧೆಗಾರರಿಗೂ ಪತ್ರಿಕಾ ಮಾಧ್ಯಮದವರಿಗೂ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧಾರವಾಡ ಶಹರ ಅಧ್ಯಕ್ಷರಾದ ಶ್ರೀಮತಿ ಕುಮಧ್ವತಿ ಭರಮಗೌಡ್ರ ರವರು ವಂದಿಸಿದರು.
ಸವಿ ಪ್ರೀತಿಯ ಭೋಜನದೊಂದಿಗೆ ಅರ್ಥಪೂರ್ಣ ಕಾರ್ಯಕ್ರಮವು ಮಣ್ಣೆತ್ತಿನ ಅಮವಾಸ್ಯೆ ಇದ್ದರು ಒಟ್ಟಾರೆಯಾಗಿ ಕಾರ್ಯಕ್ರಮ ಯಶಸ್ವಿಯಾಯಿತು