ಜ್ಞಾನ ದೇಗುಲದಲ್ಲಿ ಈ ಶಿಕ್ಷಕರ ವರ್ತನೆ ನೋಡಿ!!ಇಂತಹ ಶಿಕ್ಷಕರು ನಮಗೇ ಬೇಡ!!ಇವರನ್ನು ವಜಾ ಮಾಡಿ…
ಕಲಬುರಗಿ
ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಡಿ.ಡಿ.ಪಿ.ಐ..
ಮಕ್ಕಳಿಗೆ ತಿದ್ದಿ ಬುದ್ದಿ ಪಾಠ ಮಾಡಬೇಕಾದ ಶಿಕ್ಷಕರೆ ದಾರಿ ತಪ್ಪಿದರೇ ಹೇಗೆ?ಇವತ್ತಿನ ಕಾಲದಲ್ಲಿ ಸರಕಾರಿ ಕೆಲಸ ಸಿಗುವುದೆ ಕಷ್ಟವಾಗಿದೆ.ಅಂತಹದರಲ್ಲಿ ಸಿಕ್ಕ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡದೇ ಹೀಗೆ ಮಾಡಿದರೆ ಹೇಗೆ ನೀವೆ ಹೇಳಿ…
ಈ ಶಿಕ್ಷಕರ ಕಾಟವನ್ನು ತಾಳಲಾರದೇ ಇವರ ಸಹದ್ಯೊಗಿ (ಶಿಕ್ಷಕರು) ರೋಸಿಹೋಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಶಾಲೆಗೆ ಮದ್ಯವನ್ನು ಸೇವಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯರ ಮೂಲಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳೀಯರಾದಂತ ಮಲ್ಲಿಕಾರ್ಜುನ ಉಮ್ಮರ್ಗಿ ಅವರ ಮೂಲಕ ಉಪ ನಿರ್ದೇಶಕ ಮುಂದೆ ಶಿಕ್ಷಕರ ಶಾಲೆಯಲ್ಲಿ ಹೇಗೆ ವರ್ತಿಸುತ್ತಾರೆ ಎಂದು ಹೇಳಿದರು..
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಿ ಕ್ಲಸ್ಟರ್ ಕುಮ್ಮನ ಶಿರಸಿ ಶಾಲೆಯಲ್ಲಿ ಸುಮಾರು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀಕಾಂತ ವಸ್ತಾರಿ ಎಂಬ ಶಿಕ್ಷಕರು ಸಾರಾಯಿ ಸೇವಿಸಿ ಶಾಲೆಯಲ್ಲಿ ಬಂದು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತೊಂದರೆಗಳು ನೀಡುತ್ತಿದ್ದು ಮುಖ್ಯ ಗುರುಗಳು ಹಾಗೂ ಎಸ್ ಡಿ ಎಮ್ ಸಿ ಸದಸ್ಯರು ಮತ್ತು ಊರಿನ ಮುಖಂಡರು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರು ನೀಡುವ ಮೂಲಕ DDPI ಅವರ ಗಮನಕ್ಕೆ ತಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ಮನ ಶಿರಸಿ ಶಾಲೆಯಲ್ಲಿ ವಿಚಾರಣೆ ಮಾಡಿ ಮೇಲೆ ಸೂಕ್ತ ಕ್ರಮ ಕೈಗೊಳ್ಳವುದಾಗಿ ಊರಿನ ಮುಖಂಡರಿಗೆ ಡಿ.ಡಿ.ಪಿ.ಐ ಅವರು ತಿಳಿಸಿದ್ದಾರೆ.
ಮಾನ್ಯ ಡಿಡಿಪಿಐ ಅವರು ಮಾತನಾಡಿ, ಈ ಶಿಕ್ಷಕರ ಮೇಲೆ ಕ್ರಮ ಕ್ರಮ ಕೈಗೊಳ್ಳಬೇಕಾದರೇ, ಮೋದಲು ಅವರು ಸರಾಯಿ ಕುಡಿದಿರುವುದು ಸಾಬೀತಾಗಬೇಕು, ಅವರ ಮೇಲೆ ಎಪ್ಐಆರ್ ಮಾಡಲಾಗುತ್ತದೆ. ನಂತರ ಬಿಇಓ ಅವರ ಮುಖಾಂತರ ತನಿಖೆ ಮಾಡಿಸಿ ಮುಂದಿನ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು…
ಒಟ್ಟಿನಲ್ಲಿ ಜ್ಞಾನ ದೇಗುಲದಲ್ಲಿ ಈ ರೀತಿ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ…