ಜುಲೈ ಅಥವಾ ಅಗಸ್ಟ್ ತಿಂಗಳಲ್ಲಿ ನೌಕರರ ಬೃಹತ್ ಸಮಾವೇಶ ಆಯೋಜನೆ: ಶಾಂತಾರಾಮತೇಜ್..
ಎರಡು ಅಥವಾ ಮೂರು ತಿಂಗಳಲ್ಲಿ ನಮ್ಮ ರಾಜ್ಯದಲ್ಲೂ ಓಪಿಎಸ್ ಜಾರಿ ಗ್ಯಾರೆಂಟಿ…
ಸರಕಾರಿ ನೌಕರರಿಗೆ ಓಪಿಎಸ್ ಜಾರಿ ಮಾಡುವುದರಿಂದ ಜನಸಾಮಾನ್ಯರಿಗೆ ಹಾಗೂ ಸರಕಾರಕ್ಕೆ ಯಾವುದೇ ಹೊರೆ ಆಗುವುದಿಲ್ಲ: ಶಾಂತಾರಾಮತೇಜ್..
ಬೆಂಗಳೂರು: ನಮ್ಮ ರಾಜ್ಯದಲ್ಲಿ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುವಂತೆ ಆಗ್ರಹಿಸಿ ನಾವು ಕಳೆದ ಎಂಟು ವರ್ಷಗಳಿಂದ ರಾಜ್ಯಾದ್ಯಂತ ಹಾಗೂ ರಾಷ್ಟ್ರದ್ಯಾಂತ ಹೋರಾಟ ಮಾಡಿದ್ದೇವೆ, ಬೆಂಗಳೂರಿನ ಫ್ರೀಡಮ್ ಪಾರ್ಕನಲ್ಲೂ ಹೋರಾಟ ಮಾಡಿದ್ದೇವೆ ಎಂದು ಎನ್ಪಿಎಸ್ ನೌಕರರ ಸಂಘದ ರಾಜ್ಯಾದ್ಯಕ್ಷ ಶಾಂತಾರಾಮ್ ತೇಜ್ ಅವರು ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿಯಲ್ಲಿ ಕರ್ತವ್ಯ ನಿರ್ಹವಹಿಸುವ ನೌಕರರ ಜೊತೆ ಕೂಡ ನಾವಿದ್ದೇವೆ,ಅವರು ಓಟ್ ಫಾರ ಓಪಿಎಸ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.ನಮ್ಮ ಜೊತೆ ಯಾರು ಇರುತ್ತಾರೆ ಅವರ ಜೊತೆ ನಾವು ಇರುತ್ತೇವೆ ಎಂದರು…
ಎನ್ಪಿಎಸ್ ನೌಕರರು ಹೋರಾಟ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಡಿ.ಕೆ ಶಿವಕುಮಾರ,ಸಿದ್ದರಾಮಯ್ಯ ನಮ್ಮ ಜೊತೆ ಕರೆದು ಮಾತನಾಡಿದ್ದಾರೆ. ಛತ್ತಿಸಗಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಓಪಿಎಸ್ ಜಾರಿ ಮಾಡಿದ್ದಾರೆ..ಹಾಗೆ ನಮ್ಮ ರಾಜ್ಯದಲ್ಲೂ ಓಪಿಎಸ್ ಜಾರಿ ಮಾಡುವಂತೆ ಹೇಳಿದ್ದೇವೆ ಎಂದರು.
ವಿವಿಧ ಸಂಘಟನೆಯವರು, ಸಚಿವಾಲಯ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಮಾಡಿದ್ದ ಸಂದರ್ಭದಲ್ಲಿ ಎನ್ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿ ಮಾಡುತ್ತೇವೆ ಎಂದು ಹೆಳಿದ್ದಾರೆ.ಈ ಹಿನ್ನೆಲೆಯಲ್ಲಿ ಸಮಸ್ತ ಸರಕಾರಿ ನೌಕರರು ಹುತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು..
ಎನ್ಪಿಎಸ್ ರದ್ದತಿ ಮೂರು ತಿಂಗಳಲ್ಲಿ ಆಗಲಿಗೆ ಎಂಬ ಭರವಸೆ ಇದೆ.ಜುಲೈ ಅಥವಾ ಅಗಸ್ಟ್ ತಿಂಗಳಲ್ಲಿ ನೌಕರರ ಬೃಹತ್ ಸಮಾವೇಶವನ್ನು ನಡೆಸಲಿದ್ದೇವೆ ಎಂದು ಶಾಂತಾರಾಮ್ ತೇಜ ಅವರು ಹೇಳಿದರು..
ಎಂಟು ವರ್ಷದಿಂದ ಹೋರಾಟ ನಡೆಯುತ್ತಿದೆ.ಇದು ಇವಾಗ ಕ್ಲೈಮ್ಯಾಕ್ಸ ಹಂತಕ್ಕೆ ಇವತ್ತು ಬಂದಿದೆ..ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳು ನಮಗೆ ಭರವಸೆ ನೀಡಿದ್ದಾರೆ..ಸಿಎಮ್ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಚರ್ಚಿಸಿ ಓಪಿಎಸ್ ಜಾರಿ ಮಾಡುತ್ತೇವೆ ಎಂದು ಹೇಳದ್ದಾರೆ ಎಂದರು.
ಮದ್ಯಪ್ರದೇಶದಲ್ಲೂ ಓಪಿಎಸ್ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ..
ಓಪಿಎಸ್ ಜಾರಿ ಮಾಡುವುದರಿಂದ ಸರಕಾರದ ಹೋರೆ ಆಗುವುದಿಲ್ಲ ಎಂದು ಶಾಂತಾರಾಮ್ ತೆಜ ಅವರು ಹೇಳದರು. ಸರಕಾರ ಘೋಷಣೆ ಮಾಡಿರುವ ಗ್ಯಾರೆಂಟಿ ಗೆಳಿಗೆ ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಎನ್ಪಿಎಸ್ ರದ್ದಾಗುವ ಸಮಯದಲ್ಲಿಯೇ ಸಮಾವೇಶವನ್ನು ನಡೆಸುತ್ತೇವೆ, ಎನ್ಪಿಎಸ್ ನೌಕರರ ಸಂಘದ ಕಾರ್ಯಕಾರಣಿಯಲ್ಲಿ ಚರ್ಚಿಸಿ ಸಮಾವೇಶದ ದಿನಾಂಕವನ್ನು ನಿಗದಿ ಪಡಿಸುತ್ತೇವೆ,ಕೇವಲ ನಾನೋಬ್ಬನೆ ಸಮಾವೇಶದ ದಿನಾಂಕ ಹೇಳಲು ಬರುವುದಿಲ್ಲ ಎಂದು ಮಾದ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದರು..
ಪತ್ರಿಕಾಗೋಷ್ಠಿಯಲ್ಲಿ ಎನ್ಪಿಎಸ್ ನೌಕರರ ಸಂಘದ ರಾಜ್ಯಾದ್ಯಕ್ಷ ಶಾಂತಾರಾಮ ತೇಜ, ಗುರುಸ್ವಾಮಿ, ಸದಾಶಿವಸ್ವಾಮಿ, ರವಿ ಅಸುಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು..