ಸರಕಾರಿ ನೌಕಕರಿಗೆ ಗುಡ್ ನ್ಯೂಸ್:ಸಾರ್ವತ್ರಿಕ ವರ್ಗಾವಣೆ ದಿನಾಂಕ ಅವಧಿ ವಿಸ್ತರಣೆ..
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಚಾಲನೆ ನೀಡಲಾಗಿತ್ತು. ದಿನಾಂಕ 15-06-2023ರವರೆಗೆ ಕೈಗೊಳ್ಳುವಂತೆ ಗಡುವನ್ನು ನೀಡಲಾಗಿತ್ತು. ಈ ಅವಧಿಯನ್ನು ದಿನಾಂಕ 30-06-2023ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಿಳಿಗಳನ್ನು ಹೊರಡಿಸಿದ್ದಾರೆ. ಅದರಲ್ಲಿ 2023-24ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ದಿನಾಂಕ 15-06-2023ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು ಎಂದು ಹೇಳಿದ್ದಾರೆ.
ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯಕವೆಂದು ಸರ್ಕಾರ ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ದಿನಾಂಕ 30-05-2023ರ ಸರ್ಕಾರಿ ಆದೇಶದ ಷರತ್ತಿಗಳಿಗೆ ಒಳಪಟ್ಟು, 2023-24ನೇ ಸಾಲಿನ ಸಾರ್ವತ್ರಿಕ ವರ್ಗಾವಣಾ ಅವಧಿಯನ್ನು ದಿನಾಂಕ 30-06-2023ರವರೆಗೆ ವಿಸ್ತರಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಅಂದಹಾಗೆ ರಾಜ್ಯ ಸರ್ಕಾರ ಹೊರಡಿಸಿದ್ದಂತ ಸಾರ್ವತ್ರಿಕ ವರ್ಗಾವಣೆ ಅವಧಿ ನಿನ್ನೆ ಮುಕ್ತಾಯಗೊಂಡಿತ್ತು. ವರ್ಗಾವಣೆಯ ನಿರೀಕ್ಷೆಯಲ್ಲಿದ್ದಂತ ಅನೇಕ ಸರ್ಕಾರಿ ನೌಕರರು ಸಾರ್ವಜನಿಕ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಮತ್ತೆ ಕಾಲಾವಕಾಶವನ್ನು ನೀಡುವಂತೆ ಸರ್ಕಾರವನ್ನು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದು ದಿನಾಂಕ 15-06-2023ರಂದು ಮುಕ್ತಾಯಗೊಂಡಂತ ಸರ್ಕಾರಿ ನೌಕರರ ಸಾರ್ವಜನಿಕ ವರ್ಗಾವಣೆಯ ಅವಧಿಯನ್ನು ದಿನಾಂಕ 30-06-2023ರವರೆಗೆ ವಿಸ್ತರಿಸಿದೆ.