ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(ರಿ.)ಬೆಂಗಳೂರು ಜಿಲ್ಲಾ ಘಟಕ ಧಾರವಾಡ.
ಇಂದು ನಮ್ಮ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ಶಾಂತರಾಮ ತೇಜಾ ರವರ ನೇತೃತ್ವದಲ್ಲಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ಪಿ. ಗುರುಸ್ವಾಮಿ ರವರು, ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ನಾಗೇಶ್ ರವರು ಹಾಗೂ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಲಿ ರವರು, ರಾಜ್ಯ ಪಿ.ಯು. ಉಪನ್ಯಾಸ ಸಂಘದ ಅಧ್ಯಕ್ಷರಾದ ನಿಂಗೇ ಗೌಡ್ರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಶಿವರುದ್ರಯ್ಯನವರು, ಬೆಸ್ಕಾಂ ಇಂಜಿನಿಯರ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ರವಿ ಅಸೂಟಿ ರವರು,ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಮಹಿಳಾ ಪದಾಧಿಕಾರಿಗಳಾದ ರೋಷಣಿ ಗೌಡ ರವರು ಹಾಗೂ ರಾಜ್ಯದ NPS ನೌಕರರ ಸಂಘದ ರಾಜ್ಯ ಪದಾಧಿಕಾರಿಗಳು ಇಂದು NPS ರದ್ದತಿಯ ಕುರಿತು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀಯುತ ಡಿ.ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ OPS ಜಾರಿ ಮಾಡುವ ಕುರಿತು ಚರ್ಚಿಸಲಾಯಿತು.
ಮಾನ್ಯ ಉಪಮುಖ್ಯಮಂತ್ರಿಗಳು OPS ಜಾರಿ ಮಾಡುವ ಕುರಿತು, ಮುಖ್ಯಮಂತ್ರಿಗಳೊಂದಿಗೆ ಹಾಗೂ ಪ್ರಣಾಳಿಕೆ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಆರ್ಥಿಕ ಇಲಾಖೆಯ ಮುಖ್ಯಸ್ಥರು ಹಾಗೂ ಆಡಳಿತಾಧಿಕಾರಿಗಳೊಂದಿಗೆ ಮತ್ತು ನಮ್ಮ NPS ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನು ಏರ್ಪಡಿಸಿ ಸೂಕ್ತ ನಿರ್ಣಯದ ಮೂಲಕ ರಾಜ್ಯದ ಸರ್ಕಾರಿ ನೌಕರರ /ಅನುದಾನಿತ /ನಿಗಮ ಮಂಡಳಿ ನೌಕರರ ಹಿತಾಸಕ್ತಿಗಳನ್ನು ಕಾಯಲಾಗುವುದು ಎಂದು ತಿಳಿಸಿದರು.
ನಾಳೆ ಸಾಯಂಕಾಲ 4-00ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಭೆ ನಿಗದಿಯಾಗಿದ್ದು ಸದರಿ ಸಭೆ ಫಲಪ್ರದವಾಗಲಿ ಸಭೆಯಲ್ಲಿ NPS ರದ್ದತಿಗೆ ಅಧಿಕೃತ ಮುದ್ರೆ ಬೀಳಲಿ ಶೀಘ್ರವೇ OPS ಜಾರಿಯಾಗಲಿ ಎಂದು ಆಶಿಸುತ್ತೆವೆ…”
ಅಧ್ಯಕ್ಷರು/ಪ್ರಧಾನ ಕಾರ್ಯದರ್ಧಿಗಳು/ಸರ್ವ ಪದಾಧಿಕಾರಿಗಳು