ಮೌಲ್ಯ ಯುತ ಶಿಕ್ಷಣ ಇಂದಿನ ಅಗತ್ಯ ಟಿ ಮಲ್ಲಿಕಾರ್ಜುನ್
ಭದ್ರಾವತಿ, ತಾಲ್ಲೂಕಿನ ಅರಹ ತೊಳಲು ವಡ್ಡರಹಟ್ಟಿಯ ಸ.ಕಿ.ಪ್ರಾ.ಶಾಲೆಯಲ್ಲಿ ಜಿಲ್ಲಾ ಪರಿಸರ ಪ್ರೇಮ ತಂಡದ 62 ನೇ ಭಾನುವಾರದ ನಿರತರ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದ ಪರಿಸರ ಪ್ರೇಮ ತಂಡದ ಪ್ರೇರಕ ಶಕ್ತಿ ಕನಾ೯ಟಕ ಪರಿಸರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಆಡಳಿತ ಶ್ರೀ ಮಲ್ಲಿಕಾರ್ಜುನ ಸರ್ ರವರು ಮಾತನಾಡಿ ಇಂದಿನ ಶಿಕ್ಷಣ ಅಂಕ ಗಳಿಸುವ ಜೊತೆಗೆ ಹಣ ಗಳಿಸುವ ಶಿಕ್ಷಣ ವಾಗಿದ್ದು, ಇಂತಹ ಶಿಕ್ಷಣಕ್ಕಿಂತ ತಾನು ಸಮಾಜಮುಖಿಯಾಗಿ ಜೊತೆಗೆ ಇತರರನ್ನೂ ಸಮಾಜಮುಖಿಗಳಾಗುವಂತೆ ಪ್ರೆರೆಪಿಸುವ ಹಾಗೂ ಇರುವಷ್ಟು ಕಾಲ ಮಾನವೀಯ ಮೌಲ್ಯಗಳನ್ನು ಪರಿಪಾಲಿಸುವ ಶಿಕ್ಷಣ ಇಂದಿನ ಅಗತ್ಯ ಎಂದು ಹೇಳಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಎಸ್ ಡಿ ಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ್ರು ಜಿಲ್ಲಾ ಪರಿಸರ ಪ್ರೇಮ ತಂಡದ ಶ್ರಮದಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಜಿಲ್ಲಾ ಪರಿಸರ ಪ್ರೇಮ ತಂಡದ ಉಪಾದ್ಯಕ್ಷರಾದ ಸತೀಶ ಪಿ ಕೆ ಮಲ್ಲಿಕಾರ್ಜುನ ಸರ್ರವರ ಸಾಧನೆಗಳ ಬಗ್ಗೆ ಮಾತನಾಡಿದರು ಜಿಲ್ಲಾ ಆದ್ಯಕ್ಷರಾದ ಕೆ.ಶಿವಾ ನಾಯ್ಕ ಇಡೀ ಕಾರ್ಯ ಕ್ರಮದ ಉಸ್ತುವಾರಿ ಹೊತ್ತಿದ್ದರು.
ನಮ್ಮ ತಂಡದ ರುದ್ರೇಶದ ವಸಂತ ಮತ್ತಿತರಿದ್ದರು ಕ್ಲಸ್ಟರ್ ಸಿ. ಆರ್. ಪಿ ವಾಣಿ ಮೇಡಂ ಶಿಕ್ಷಕರಾದ ಯೋಗೆಶ್ ಪಾಲ್ಗೊಂಡ ಈ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರಾದ ಶಿವ ಕುಮಾರ ನಿರೂಪಿಸಿದರು. ಸ್ಥಳೀಯ ಪಂಚಾಯ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭುರವರು ಸಕ್ರಿಯರಾಗಿದ್ದರು ಮಹಿಳೆಯರಿಗೆ ಮೋಜಿನ ಆಟಗಳನ್ನು ಆಯೋಜಿಸಲಾಗಿತ್ತು. ವಿವಿಧ ಸಸಿಗಳನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ನೆಡಲಾಯಿತು. ಅಮೃತ ಆರೋಗ್ಯ ಅಭಿಯಾನದಡಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿಸಲಾಯಿತು.