ವನದ ಸಿರಿಯೆ ಜಗದ ಐಸಿರಿ
ಧಾರವಾಡ, ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ಶತಮಾನೋತ್ತರ ಸುವರ್ಣ ಮಹೋತ್ಸವ ಕಂಡ ಸರಕಾರಿ ಮಾದರಿ ಕೇಂದ್ರ ಶಾಲೆ ನಂ1 ಇಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ 100 ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಗಂಗಪ್ಪ ಕಾಲವಾಡ ರವರು ಉದ್ಘಾಟಿಸಿ ಮಾತನಾಡುತ್ತ ಈ ಶಾಲೆಯೆ ಮೊರಬ ಗ್ರಾಮದ ಮಾತೃ ಶಾಲೆಯಾಗಿದ್ದು ಗ್ರಾಮದ ಪ್ರತಿ ಮನೆಯಲ್ಲೂ ಈ ಶಾಲೆಯ ಒಬ್ಬ ಹಳೆ ವಿದ್ಯಾರ್ಥಿಗಳಿದ್ದಾರೆ ಅವರ ಸಹಕಾರದೊಂದಿಗೆ ಶಾಲೆಯನ್ನು ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಂಪದ್ಭರಿತಗೊಳಿಸುವ ಸಂಕಲ್ಪ ತೊಟ್ಟಿರುವುದಾಗಿ ಅದರ ಪ್ರಾರಂಭಿಕ ಪ್ರಯತ್ನ 100 ಸಸಿ ನೆಡುವ ಮೂಲಕ ಆರಂಭಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಶ್ರೀಯುತ ಜಾಲಿಹಾಳರವರು ಬಸವರಾಜ ಶಿರಗುಪ್ಪಿ, ಉಮೇಶ ಹೊಸೂರ,ಚಂದ್ರಶೇಖರ ಸರ್ಕಾರ, ಅತ್ತಾರ, ಸಸಿಗಳನ್ನು ಒದಗಿಸಿದ ದಾವಲಸಾಬ ಅಣ್ಣಿಗೇರಿ ಮುಂತಾದವರು ಹಾಗೂ ಶಾಲಾ ಸಿಬ್ಬಂದಿ ಇದ್ದರು
ವರದಿ ಶ್ರೀ ಮಲ್ಲಿಕಾರ್ಜುನ ಉಪ್ಪಿನ