ನೂರಾರು ಸಸಿಗಳನ್ನು ನೆಟ್ಟು, ವಿಶ್ವಪರಿಸರ ದಿನಕ್ಕೆ ಮೆರಗುತಂದ ಹೆಬ್ಬಳ್ಳಿಯ ಪಂಚಾಯತ ಸದಸ್ಯರು,
ಹೆಬ್ಬಳ್ಳಿ,
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ
ವಿಶ್ವ ಪರಿಸರ ದಿನದ ಅಂಗವಾಗಿ ಹೆಬ್ಬಳ್ಳಿಯ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,
ಈ ಸಂಧರ್ಭದಲ್ಲಿ ಕಾಂಗ್ರೆಸ್ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ ಭೀಮಕ್ಕನವರ, ಮಾತನಾಡಿ ಈ ಸಸಿಗಳು ಹೆಮ್ಮರವಾಗಿ ಬೆಳೆಯಬೇಕು, ವಿದ್ಯಾರ್ಥಿಗಳು, ಈ ಸಸಿಗಳ ಪಾಲನೆ ಪೋಷಣೆ ಮಾಡಬೇಕು, ಜೂನ ತಿಂಗಳು ತುಂಬಾ ಮಹತ್ವದ ದಿನ ರೈತರು ಭೂಮಿಗೆ ಭೀಜ ಬಿತ್ತುವ ಕಾಲ ಅದೇ ರೀತಿ ಮಕ್ಕಳಿಗೆ ಅಕ್ಷರದ ಬೀಜ ಬಿತ್ತುವುದು, ಹಾಗೇಯೆ ವಿಶ್ವಪರಿಸರ ದಿನ
ಪರಿಸರ ದಿನ ಅಂದರೆ ಈ ದಿನ ಎಲ್ಲೆಡೆ ಸಸಿಗಳನ್ನು ನೆಡುವುದು,ಜೊತೆಗೆ ಪರಿಸರ ಜಾಗೃತಿ ಮೂಡಿಸು ದಿನವಾಗಿದೆ ಎಂದರು,,
ARFO ಶ್ರೀಮತಿ ಹಳ್ಳಿ, ಮೊರಾರ್ಜಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚವಡಿ,ಹೆಬ್ಬಳ್ಳಿ ಗ್ರಾ ಪ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ತಲವಾಯಿ, ಉಪಾಧ್ಯಕ್ಷರಾದ ಶ್ರೀ ವಿಠ್ಠಲ ಇಂಗಳೆ, ಸದಸ್ಯರಾದ ಶ್ರೀ ಮಂಜುನಾಥ ವಾಸಂಬಿ, ಶ್ರೀ ಸುರೇಶ ಬನ್ನಿಗಿಡದ, ಶ್ರೀಮತಿ ರೇಖಾ ನಾಯಕರ, ಮುಖ್ಯ ಶಿಕ್ಷಕಿ ಅನ್ನಪೂರ್ಣ ಚವಡಿ ಗ್ರಾಮ
ಪಂಚಾಯತ ಸರ್ವ ಸಿಬ್ಬಂದಿ ಹಾಜರಿದ್ದರು, ಕಾರ್ಯಕ್ರಮದ ನಿರೂಪಣೆ PDO ಶ್ರೀ ತನ್ವಿರ್ ನೆರವೇರಿಸಿದರು.