ಶಾಲೆ ಎಂಬುದು ನಿಜವಾದ ಮಾನವ ಧರ್ಮ ಪೀಠ, ದೇವಮಂದಿರ:
ಟಿ ಮಲ್ಲಿಕಾರ್ಜುನ್
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಗೇನಹಳ್ಳಿಯಲ್ಲಿ, ಕರ್ನಾಟಕ ಪರಿಸರ ರತ್ನ ಪ್ರಶಸ್ತಿ ಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ಇಂದು 61ನೇ ನಿರಂತರ ಶ್ರಮದಾನ, ಬಣ್ಣದರ್ಪಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ನಂತರ ಮಾತನಾಡಿದ ಅವರು, ಶಾಲೆ ನಿಜವಾದ ಮಾನವ ಧರ್ಮ ಪೀಠ, ದೇವಮಂದಿರ ಮಕ್ಕಳು ದೇವರು ಇದ್ದಂತೆ ಈ ಮಕ್ಕಳಿಗೆ, ಗುಣಮಟ್ಟದ ಶಿಕ್ಷಣ ಸಿಗಬೇಕು, ಜೊತೆಗೆ ತಾವು ಕಲಿಯುವ ಪಾಠಶಾಲೆ ಅಂದವಾಗಿರಬೇಕು, ಆದ್ದರಿಂದ ಬಣ್ಣ ಕಾಣದ ಸರಕಾರಿ ಶಾಲೆಗಳಿಗೆ ಬಣ್ಣದರ್ಪಣ ಕಾರ್ಯವನ್ನು ನಮ್ಮ ಪರಿಸರ ಪ್ರೇಮ ತಂಡ ಮಾಡುತ್ತಿದೆ ಎಂದರು, ಎಲ್ಲವನ್ನೂ ಸರಕಾರ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು, ಜನಸಮುದಾಯದ ಮತ್ತು ಪ್ರಜ್ಞಾವಂತರು ಸರಕಾರಿ ಶಾಲೆಗಳ ಬೆಳವಣಿಗೆ ಅಭಿವೃದ್ಧಿಗೆ ತಾವು ಕಲಿತ ಶಾಲೆಗೆ ಕೈಜೋಡಿಸುವುದು ತೀರ ಅಗತ್ಯವಿದೆ ಎಂದರು.
ಶಾಲೆ ಸರ್ವಧರ್ಮಿಯರ ಮನೆ ಮತ್ತು ಎಲ್ಲಾ ಜನಾಂಗ ಬಂದು ಹೋಗುವ ಪವಿತ್ರ ತಾಣ, ಶಾಲೆಗಳು ಸ್ವಚ್ಚ ಹಾಗೂ ಸುಂದರವಾಗಿರಬೇಕು ಅದಕ್ಕಾಗಿ ನಮ್ಮ ಪರಿಸರ ಪ್ರೇಮ ತಂಡ ಶ್ರಮಿಸುತ್ತಿದೆ ಎಂದರು ಶಾಲಾ ಕಾಪೌಂಡ್ ಗೆ ಬಣ್ಣ ಹಚ್ಚಲಾಯಿತು. ಶಾಲಾ ಕೊಠಡಿಗ ಬಣ್ಣ ಹಚ್ಚಲಾಯಿತು ಈ ಸಂದರ್ಭದಲ್ಲಿ ಪರಿಸರ ಪ್ರೇಮ ತಂಡದ ಅಧ್ಯಕ್ಷರಾದ ಕೆ.ಶಿವಾನಾಯ್ಕ ಉಪಾಧ್ಯಕ್ಷರಾದ ಸತೀಶ ಪಿ ಕೆ.ಎಸ್. ಡಿ ಎಂಸಿ ಅದ್ಯಕ್ಷರಾದ ಆ೦ಜನೇಯ ನಾಯ್ಕ ಶಿಕ್ಷಕರಾದ ಪ್ರಸನ್ನ ಚಾರ್ ಅಂಜನೇಯ ಬಿ ಹಾಗೂ ವಸಂತ ಇದ್ದರು