ಸಾಧನಕೇರಿ ಸಂಜೆ
ಪ್ರೀತಿ ಭಾವವು ಮನದಲಿ ತುಂಬಿ
ಸರಸ ಸುಧೆಯಲಿ ಸೇರಿ ಸಾಧನಕೇರಿಯ
ಸಂಜೆಯಲಿ
ಮಧುರ ಮನದೊಳು ಮಿಲನದೊಳು
ಇನಿಯಳಾಸರೆಯೊಳು ಗಿಡಮರಗಳ ನಡುವೆ
ಜೇನುಸುಧೆಯ ಹೀರುವ ಅಧರದೊಳು
ಒಲವ ಸುಧೆಯ ಸವಿಯೊಳು
ಮೈಮರೆತಿಹ
ಬೆರೆತ ಮನಗಳು ಪ್ರೇಮರಾಗದಿ
ನೀ ನನಗೆ ನಾ ನಿನಗೆ ಎನುತಲಿ
ಹೂ ಗಿಡಗಳ ನಡುವೆ ಮೈಮನಗಳು ಸೇರಿರಲು
ಭಾವನೆಗಳ ಭಾರಕ್ಕೆ ಮನಸು ತೊಳಲಾಡುತಿದಹು
ಮನಸು ಮಧುರತೆಯೊಳು ಮೀಟುತ ಹೊಸ ರಾಗವ
ಮಮತೆ ತುಂಬಿ ತಂದಾ ಪ್ರೇಮದ ಬಂಧ
ಮನಸು ಮುದದಿಂದ ಅರಳುತಿದೆ
ಬಿಟ್ಟಿರಲಾಗದ ಬಿಸಿಯಪ್ಪುಗೆಯ
ಸುತ್ತಲೂ ನವಪ್ರೇಮಿಗಳು ಪ್ರೇಮದಿ ಆಲಿಂಗನದೊಳು
ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ
ಯಾವ ಉಪಮೆಗೂ ನಿಲುಕಲಾರದ ಪ್ರೀತಿ
ಬಂದದ್ದೆಲ್ಲವೂ ಬರಲಿ ಎದುರಿಸಿ ಬದುಕುವ ಛಲವೊಂದಿರಲಿ
ಈ ಪ್ರೀತಿ ಬರೀ ನಿನ್ನದಲ್ಲ ನನ್ನದೂ ಎರಡೂ ಹೃದಯ ಸೇರಿ ಆಗಿಹದು
ಕೊನೆ ಇರದೇ ಸಾಗಲಿ ಅನವರತ
ಬೇಂದ್ರೆ ಕವನದ ಸಾಲುಗಳಲಿ
ಸಖಿಗೀತದ ಅನುಭಾವದ ಅಮೃತ ಸವಿಯಲು
ಜೀವನದ ನಿಜ ಅರ್ಥ ತಿಳಿಯುತಲಿ
ಸಖಿ ಇದು ನಮ್ಮ ಸಖ್ಯದ ಆಖ್ಯಾನವೆನುತಲಿ
ಸೇರಿ ಜೇನಾಗುವಾ ಪ್ರೀತಿ ಅಮರತೆ ಸಾರುವಾ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨